»   » ಆಸ್ಪತ್ರೆಗೆ ದಾಖಲಾಗಿರುವ ಯೋಗಿ ಆರೋಗ್ಯಕ್ಕೆ ಏನಾಗಿದೆ?

ಆಸ್ಪತ್ರೆಗೆ ದಾಖಲಾಗಿರುವ ಯೋಗಿ ಆರೋಗ್ಯಕ್ಕೆ ಏನಾಗಿದೆ?

Posted By:
Subscribe to Filmibeat Kannada

ಹಗಲು ರಾತ್ರಿ ಅನ್ನದೇ ಪ್ರತಿ ದಿನ ಶೂಟಿಂಗ್ ನಲ್ಲೇ ಬಿಜಿಯಾಗಿದ್ದ ಲೂಸ್ ಮಾದ ಯೋಗೀಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಿವಿ ಮತ್ತು ಮೂಗಿನಲ್ಲಿ ಇನ್ಫೆಕ್ಷನ್ ಆಗಿದ್ದರಿಂದ ಉಸಿರಾಟದ ತೊಂದರೆಯುಂಟಾಗಿ ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ಯೋಗೀಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಬರಿ ಪಡುವಂತದ್ದು ಏನಿಲ್ಲವಾದರೂ, ಮೂರು ದಿನ ಆಸ್ಪತ್ರೆಯಲ್ಲೇ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಅಷ್ಟಕ್ಕೂ ಯೋಗೀಶ್ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವುದಕ್ಕೆ ಕಾರಣ, ಅತಿಯಾದ ಸ್ಟ್ರೆಸ್.

Loose Mada Yogesh Hospitalized, 3 Days Bed rest

ಯೋಗೀಶ್ ಕೈಲಿ ಕನ್ನಡದಲ್ಲಿ ಮೂರು ಚಿತ್ರಗಳಿವೆ. ಅವೆಲ್ಲದರ ಶೂಟಿಂಗ್ ಜೊತೆಗೆ ಕಾಲಿವುಡ್ ಗೂ ಲಗ್ಗೆ ಇಡುವುದಕ್ಕೆ ಸಜ್ಜಾಗುತ್ತಿರುವ ಯೋಗೀಶ್, ಜನಪ್ರಿಯ 'ಲೈಫ್ ಸೂಪರ್ ಗುರೂ' ಕಾರ್ಯಕ್ರಮದಲ್ಲೂ ಮಿಂಚ್ತಿದ್ದಾರೆ. ರಿಯಾಲಿಟಿ ಶೋ ಆದ್ದರಿಂದ ಕೆಲ ದಿನಗಳು, ರಾತ್ರಿ ಹೊತ್ತು ಕೂಡ ಶೂಟಿಂಗ್ ಮಾಡಿದ್ದಾರೆ. [ತಮಿಳು ಚಿತ್ರರಂಗದಿಂದ ಲೂಸ್ ಮಾದನಿಗೆ ರತ್ನಗಂಬಳಿ]

ಹೀಗೆ, ಸರಿಯಾಗಿ ನಿದ್ದೆ ಮಾಡದೆ ಸ್ಟ್ರೆಸ್ ಅತಿಯಾಗಿದ್ದರಿಂದ ಯೋಗೀಶ್ ಕಿವಿ ಮತ್ತು ಮೂಗಿಗೆ ಸೋಂಕು ತಗುಲಿದೆ. ಇದರಿಂದ ರಕ್ತಸ್ರಾವ ಕೂಡ ಉಂಟಾಗಿದ್ದರಿಂದ, ಯೋಗಿಗೆ ಉಸಿರಾಟದ ಸಮಸ್ಯೆ ಎದುರಾಗಿದೆ. ತಕ್ಷಣ ಅವರನ್ನ ಹತ್ತರದ ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕಿತ್ಸೆಗೆ ಸ್ಪಂದಿಸುತ್ತಿರುವ ಯೋಗೀಶ್, ಇನ್ನೆರಡು ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಾರೆ. ಸಂಪೂರ್ಣವಾಗಿ ಗುಣಮುಖರಾಗುವವರೆಗೂ ಯೋಗಿ ಯಾವುದೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಿಲ್ಲ ಅಂತ ಯೋಗಿ ಕುಟುಂಬದವರು ತಿಳಿಸಿದ್ದಾರೆ. ಯೋಗಿ ಬೇಗ ಗುಣಮುಖವಾಗಲಿ ಅಂತ ನಾವೂ ಹಾರೈಸೋಣ.

English summary
Kannada Actor Loose Mada Yogesh has been admitted to Sagar Hospital in Bengaluru. Suffering from Nasal Infection, Yogesh is been given necessary treatments. Doctors have advices 3 Days Bed rest.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada