For Quick Alerts
  ALLOW NOTIFICATIONS  
  For Daily Alerts

  ಲವ್ ಮಾಕ್‌ಟೇಲ್ ನಾಯಕಿ 'ನಿಧಿಮಾ' ಅಚ್ಚುಮೆಚ್ಚಿನ ನಿರ್ದೇಶಕ ಯಾರು ಗೊತ್ತೇ?

  |

  ಏಳು ವರ್ಷಗಳಿಂದ ಸಿನಿಮಾ ರಂಗದಲ್ಲಿರುವ ನಟಿ ಮಿಲನಾ ನಾಗರಾಜ್, ಇದುವರೆಗೆ ಮಾಡಿರುವುದು ಆರು ಸಿನಿಮಾಗಳನ್ನು ಮಾತ್ರ. ಪಾತ್ರದ ವಿಚಾರದಲ್ಲಿ ಬಹಳ ಚೂಸಿಯಾಗಿರುವ ಅವರು ಒಂದು ಮಲಯಾಳಂ ಚಿತ್ರದಲ್ಲಿಯೂ ನಟಿಸಿದ್ದಾರೆ. 'ಬೃಂದಾವನ' ಚಿತ್ರದಲ್ಲಿ ದರ್ಶನ್ ಜತೆ ಕೂಡ ಬಣ್ಣ ಹಚ್ಚಿದ್ದರು.

  Love Mocktail behind the scenes also has tears | Darling krishna | Milana Nagraj

  ಮಿಲನಾ ಅವರಿಗೆ ಖ್ಯಾತಿ ತಂದುಕೊಟ್ಟಿದ್ದು 'ಲವ್ ಮಾಕ್‌ಟೇಲ್' ಚಿತ್ರ. ಅವರ ಸ್ನೇಹಿತ ಕೃಷ್ಣ ಜತೆಗೂಡಿ ಮಾಡಿದ ಸಾಹಸ ಅವರಿಗೆ ಖ್ಯಾತಿ, ಆತ್ಮವಿಶ್ವಾಸ ಎರಡನ್ನೂ ತಂದುಕೊಟ್ಟಿದೆ. ನೆರೆಯ ಭಾಷೆಯ ಸಿನಿಮಾ ಪ್ರಿಯರೂ 'ಲವ್ ಮಾಕ್‌ಟೇಲ್' ಮೆಚ್ಚಿಕೊಂಡಿದ್ದಾರೆ. ನಿಜ ಜೀವನದ ಜೋಡಿಯೊಂದು ಹೀಗೆ ಸಿನಿಮಾ ನಿರ್ಮಾಣ ಮಾಡಿ, ಅದರ ತಾಂತ್ರಿಕ ವಿಭಾಗಗಳಲ್ಲಿಯೂ ದುಡಿಯುವುದರ ಜತೆಗೆ, ನಾಯಕ-ನಾಯಕಿಯಾಗಿ ನಟಿಸುವುದು ಅಪರೂಪದ ಪ್ರಯತ್ನವೂ ಹೌದು. ಮುಂದೆ ಓದಿ...

  'ಲವ್ ಮಾಕ್‌ಟೇಲ್' ಬಿಡುಗಡೆ ಹಿಂದಿನ ದಿನ ಹೇಗಿತ್ತು?: ಕೃಷ್ಣ ಹಂಚಿಕೊಂಡ ತಳಮಳದ ನೆನಪು'ಲವ್ ಮಾಕ್‌ಟೇಲ್' ಬಿಡುಗಡೆ ಹಿಂದಿನ ದಿನ ಹೇಗಿತ್ತು?: ಕೃಷ್ಣ ಹಂಚಿಕೊಂಡ ತಳಮಳದ ನೆನಪು

  ಲವ್ ಮಾಕ್‌ಟೇಲ್ 2 ತಯಾರಿ

  ಲವ್ ಮಾಕ್‌ಟೇಲ್ 2 ತಯಾರಿ

  'ಲವ್ ಮಾಕ್ ಟೇಲ್' ಯಶಸ್ಸಿನ ಗುಂಗಲ್ಲಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿ, 'ಲವ್ ಮಾಕ್‌ಟೇಲ್ 2' ಚಿತ್ರದ ತಯಾರಿ ನಡೆಸುತ್ತಿದ್ದಾರೆ. ಈ ಚಿತ್ರದಲ್ಲಿ ಹಳೆಯ ಪಾತ್ರಗಳನ್ನೂ ಮರಳಿ ತರುವ, ಊಹಿಸಲಾಗದ ಟ್ವಿಸ್ಟ್ ನೀಡುವ ಉತ್ಸಾಹ ಅವರದು.

  ನಿರ್ದೇಶಕರ ದಿನದ ಶುಭಾಶಯ

  ನಿರ್ದೇಶಕರ ದಿನದ ಶುಭಾಶಯ

  ನಿರ್ದೇಶಕರ ದಿನವಾದ ಮೇ 4ರಂದು ಮಿಲನಾ ತಮ್ಮ ನೆಚ್ಚಿನ ನಿರ್ದೇಶಕರಿಗೆ ಶುಭಾಶಯ ಕೋರಿದ್ದಾರೆ. ಆ ನಿರ್ದೇಶಕರನ್ನು ಹೊಗಳಿರುವ ಮಿಲನಾ, ತಾವು ಕಂಡ ಬಹಳ ಸ್ಟ್ರಿಕ್ಟ್ ನಿರ್ದೇಶಕರೂ ಹೌದು ಎಂದು ಹೇಳಿದ್ದಾರೆ. ಆ ನಿರ್ದೇಶಕರು ಬೇರಾರೂ ಅಲ್ಲ, ಅವರ ಪಾರ್ಟ್‌ನರ್ ಡಾರ್ಲಿಂಗ್ ಕೃಷ್ಣ.

  'ನಿಧಿಮಾ'ಗೆ ಹುಟ್ಟುಹಬ್ಬದ ಸಂಭ್ರಮ: ಭಾವಿ ಪತ್ನಿಗೆ ಪ್ರೀತಿಯ ಶುಭಾಶಯ ಕೋರಿದ ಕೃಷ್ಣ'ನಿಧಿಮಾ'ಗೆ ಹುಟ್ಟುಹಬ್ಬದ ಸಂಭ್ರಮ: ಭಾವಿ ಪತ್ನಿಗೆ ಪ್ರೀತಿಯ ಶುಭಾಶಯ ಕೋರಿದ ಕೃಷ್ಣ

  ಕಠಿಣ ಪರಿಶ್ರಮಿ ನಿರ್ದೇಶಕ

  ಕಠಿಣ ಪರಿಶ್ರಮಿ ನಿರ್ದೇಶಕ

  'ನಾನು ಕೆಲಸ ಮಾಡಿದವರಲ್ಲಿ ಅತ್ಯಂತ ಸಂವೇದನಾಶೀಲ, ಹಾಸ್ಯ ಪ್ರವೃತ್ತಿಯ, ಬದ್ಧತೆಯುಳ್ಳ, ಬಹಳ ಕಠಿಣ ಪರಿಶ್ರಮಿ ನಿರ್ದೇಶಕ (ಹಾಗೆಯೇ ತುಂಬಾ ತುಂಬಾ ಸ್ಟ್ರಿಕ್ಟ್ ಕೂಡ)' ಎಂದು ಮಿಲನಾ ನಾಗರಾಜ್, ಕೃಷ್ಣ ಅವರ ಜತೆಗಿನ ಫೋಟೊ ಹಂಚಿಕೊಂಡು ಹೇಳಿದ್ದಾರೆ.

  ಪಾತ್ರಕ್ಕಾಗಿ ಧನ್ಯವಾದ

  ಪಾತ್ರಕ್ಕಾಗಿ ಧನ್ಯವಾದ

  'ನನಗೆ ನಟಿಸಲು ಅಂತಹ ಅದ್ಭುತವಾದ ಪಾತ್ರವನ್ನು ನೀಡಿರುವುದು ಹಾಗೂ ನನ್ನಿಂದ ಸಾಧ್ಯವಾದಷ್ಟು ಉತ್ತಮ ನಟನೆಯನ್ನು ಹೊರತೆಗೆದಿರುವುದಕ್ಕೆ ಧನ್ಯವಾದಗಳು' ಎಂದು 'ಲವ್ ಮಾಕ್‌ಟೇಲ್' ಚಿತ್ರದಲ್ಲಿ ತಮಗೆ ನೀಡಿರುವ 'ನಿಧಿಮಾ' ಪಾತ್ರದ ಕುರಿತು ಮಾತನ್ನಾಡಿದ್ದಾರೆ.

  ಬ್ರಿಲಿಯಂಟ್ ಸಿನಿಮಾ ನೀಡಿ'ಲವ್ ಮಾಕ್‌ಟೇಲ್ ರೀತಿಯ ಇನ್ನಷ್ಟು ಹಾಗೂ ಮತ್ತಷ್ಟು ಬ್ರಿಲಿಯಂಟ್ ಸಿನಿಮಾಗಳನ್ನು ನೀಡುವುದನ್ನು ನೀವು ಮುಂದುವರಿಸಿ' ಎಂದು ತಮ್ಮ ಪ್ರೀತಿಯ ಡಾರ್ಲಿಂಗ್ ಕೃಷ್ಣ ಅವರಿಗೆ ನಿರ್ದೇಶಕರ ದಿನದ ಶುಭಾಶಯ ತಿಳಿಸಿದ್ದಾರೆ.

  ಬ್ರಿಲಿಯಂಟ್ ಸಿನಿಮಾ ನೀಡಿ'ಲವ್ ಮಾಕ್‌ಟೇಲ್ ರೀತಿಯ ಇನ್ನಷ್ಟು ಹಾಗೂ ಮತ್ತಷ್ಟು ಬ್ರಿಲಿಯಂಟ್ ಸಿನಿಮಾಗಳನ್ನು ನೀಡುವುದನ್ನು ನೀವು ಮುಂದುವರಿಸಿ' ಎಂದು ತಮ್ಮ ಪ್ರೀತಿಯ ಡಾರ್ಲಿಂಗ್ ಕೃಷ್ಣ ಅವರಿಗೆ ನಿರ್ದೇಶಕರ ದಿನದ ಶುಭಾಶಯ ತಿಳಿಸಿದ್ದಾರೆ.

  'ಲವ್ ಮಾಕ್‌ಟೇಲ್ ರೀತಿಯ ಇನ್ನಷ್ಟು ಹಾಗೂ ಮತ್ತಷ್ಟು ಬ್ರಿಲಿಯಂಟ್ ಸಿನಿಮಾಗಳನ್ನು ನೀಡುವುದನ್ನು ನೀವು ಮುಂದುವರಿಸಿ' ಎಂದು ತಮ್ಮ ಪ್ರೀತಿಯ ಡಾರ್ಲಿಂಗ್ ಕೃಷ್ಣ ಅವರಿಗೆ ನಿರ್ದೇಶಕರ ದಿನದ ಶುಭಾಶಯ ತಿಳಿಸಿದ್ದಾರೆ.

  ಕೃಷ್ಣ ನೆಚ್ಚಿನ ನಿರ್ದೇಶಕರು

  ಕೃಷ್ಣ ನೆಚ್ಚಿನ ನಿರ್ದೇಶಕರು

  ನಿರ್ದೇಶಕರ ದಿನದಂದು ಅನೇಕ ನಿರ್ದೇಶಕರು, ಕಲಾವಿದರು ತಮಗೆ ಸ್ಫೂರ್ತಿ ನೀಡಿದ ನಿರ್ದೇಶಕರ ಬಗ್ಗೆ ಹೇಳಿಕೊಂಡಿದ್ದಾರೆ. ಕೃಷ್ಣ ಕೂಡ ತಮ್ಮ ಇಬ್ಬರು ನೆಚ್ಚಿನ ನಿರ್ದೇಶಕರ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕನ್ನಡದ ಖ್ಯಾತ ನಿರ್ದೇಶಕ ದಿ. ಕಾಶಿನಾಥ್ ಮತ್ತು ಹಿಂದಿಯ ರಾಜ್ ಕುಮಾರ್ ಹಿರಾನಿ ಅವರ ಫೋಟೊಗಳನ್ನು ಪೋಸ್ಟ್ ಮಾಡಿರುವ ಕೃಷ್ಣ, ಅವರ ಸಿನಿಮಾಗಳನ್ನು ಇಷ್ಟಪಡುತ್ತೇನೆ ಎಂದು ತಿಳಿಸಿದ್ದಾರೆ.

  English summary
  Love Mocktail movie actress Milana Nagaraj wishes her partner Darling Krishna on directors day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X