twitter
    For Quick Alerts
    ALLOW NOTIFICATIONS  
    For Daily Alerts

    'ಲವ್ ಯು ರಚ್ಚು' ಚಿತ್ರೀಕರಣ ಅವಘಡ: ಘಟನೆ ನಡೆದಿದ್ದು ಹೇಗೆ?

    By ರಾಮನಗರ ಪ್ರತಿನಿಧಿ
    |

    ಕನ್ನಡದ ಸಿನಿಮಾ ಕರ್ಮಿಗಳು ತಮ್ಮ ಹಳೆಯ ತಪ್ಪುಗಳಿಂದ ಪಾಠ ಕಲಿತಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಚಿತ್ರೀಕರಣದ ಸಂದರ್ಭದಲ್ಲಿ ನಿರ್ಲಕ್ಷ್ಯದಿಂದ ನಡೆದ ಅವಘಡದಲ್ಲಿ ಇಂದು ಅಮೂಲ್ಯ ಜೀವವೊಂದು ಆರಿ ಹೋಗಿದೆ.

    Recommended Video

    ಇವರ ಮೇಲೆ ಮಾತ್ರ FIR ಫೈಲ್ ಮಾಡಿದ್ದೀವಿ

    ಅಜಯ್ ರಾವ್, ರಚಿತಾ ರಾಮ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ 'ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಸಹಾಯಕ ಸಾಹಸ ಕಲಾವಿದ ವಿವೇಕ್ ಎಂಬುವರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೊಬ್ಬ ವ್ಯಕ್ತಿ ಗಾಯಗೊಂಡು ಆಸ್ಪತ್ರೆ ಸೇರಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾನೆ.

    ಫೈಟ್ ದೃಶ್ಯಗಳ ಚಿತ್ರೀಕರಣದ ಸಂದರ್ಭದಲ್ಲಿ ಅಪಘಾತಗಳಾಗುತ್ತಿರುವುದು ಕನ್ನಡದಲ್ಲಿ ಇದು ಮೊದಲೇನೂ ಅಲ್ಲ. ಈ ಹಿಂದೆಯೂ ಕೆಲವು ಇಂಥಹುವೇ ಅಹಿತಕರ ಘಟನೆಗಳು ನಡೆದು ಅಮೂಲ್ಯ ಜೀವಗಳು ನಷ್ಟವಾಗಿವೆ. ಕನ್ನಡದ ಜನಪ್ರಿಯ ವಿಲನ್‌ಗಳಾಗಿದ್ದ ಉದಯ್, ಅನಿಲ್ ಸಾವು ಮರೆತುಬಿಡುವಷ್ಟು ಹಳೆಯದಲ್ಲ. 'ಮಾಸ್ತಿಗುಡಿ' ಸಿನಿಮಾ ದುರಂತ ಸಂಭವಿಸಿ ಐದು ವರ್ಷ ಇನ್ನೂ ಪೂರ್ಣಗೊಂಡಿಲ್ಲ.

    ಘಟನೆ ನಡೆದಾಗ ಚರ್ಚೆಗಳ ಮೇಲೆ ಚರ್ಚೆಗಳು ನಡೆದು ಚಿತ್ರೀಕರಣಗಳು ಇನ್ನಷ್ಟು ಸುರಕ್ಷಿತಗೊಳ್ಳಬೇಕು, ಫೈಟ್ ದೃಶ್ಯಗಳ ಚಿತ್ರೀಕರಣ ಸಂದರ್ಭದಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅನುರಿಸಬೇಕು ಎಂದು ಭಾಷಣಗಳನ್ನು ಬಿಗಿಯಲಾಗುತ್ತದೆ. ನಂತರ ಅದೇ ಹಳೆ ಚಾಳಿಯೇ ಮುಂದುವರೆಯುತ್ತದೆ. ಇಂದು ನಡೆದಿರುವ ಘಟನೆಯೂ ಸಹ ಚಿತ್ರತಂಡದಿಂದ ನಿರ್ಲ್ಕಕ್ಷ್ಯದಿಂದಲೇ ಆಗಿದ್ದು ಎಂದು ಕೆಲವು ಸ್ಥಳೀಯರೇ ಹೇಳುತ್ತಿದ್ದಾರೆ.

    ಬಿಡದಿ ಬಳಿಕ ಜೋಗರಪಾಳ್ಯದಲ್ಲಿ ಚಿತ್ರೀಕರಣ

    ಬಿಡದಿ ಬಳಿಕ ಜೋಗರಪಾಳ್ಯದಲ್ಲಿ ಚಿತ್ರೀಕರಣ

    ಬಿಡದಿ ಸಮೀಪದ ಜೋಗರಪಾಳ್ಯ ಹಳ್ಳಿಯಲ್ಲಿ 'ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣ ಆರಂಭವಾಗಿ ಇಂದಿಗೆ ಐದು ದಿನಗಳಾಗಿವೆ. ಇಂದು ಚಿತ್ರೀಕರಣದ ಕೊನೆಯ ದೃಶ್ಯವಾಗಿದ್ದು, ಇಂದು ಫೈಟ್ ದೃಶ್ಯಗಳನ್ನು ಚಿತ್ರೀಕರಣ ಮಾಡಿಕೊಳ್ಳಲಾಗಿತ್ತು. ಇದೀಗ ಅಸುನೀಗಿರುವ ವಿವೇಕ್ ಸಹಾಯಕ ಸಾಹಸ ಕಲಾವಿದನಾಗಿದ್ದ. ಆದರೆ ಚಿತ್ರರಂಗದಲ್ಲಿ ಮುಖ್ಯ ವಿಲನ್ ಆಗಬೇಕೆಂಬ ಆಸೆ-ಕನಸು ಹೊಂದಿದ್ದ.

    ಪುಟ್ಟರಾಜು ಎಂಬುವರ ತೆಂಗಿನ ತೋಟದಲ್ಲಿ ಚಿತ್ರೀಕರಣ

    ಪುಟ್ಟರಾಜು ಎಂಬುವರ ತೆಂಗಿನ ತೋಟದಲ್ಲಿ ಚಿತ್ರೀಕರಣ

    ಪುಟ್ಟರಾಜು ಎಂಬುವರ ತೆಂಗಿನ ತೋಟವೊಂದರಲ್ಲಿ ಫೈಟ್ ದೃಶ್ಯದ ಚಿತ್ರೀಕರಣ ಇತ್ತು. ಫೈಟ್ ದೃಶ್ಯದ ಚಿತ್ರೀಕರಣಕ್ಕಾಗಿ ತೋಟವನ್ನು ಸಜ್ಜು ಗೊಳಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು, ಚಿತ್ರೀಕರಣದ ಸಮಯದಲ್ಲಿ ಅವಘಡ ಸಂಭವಿಸಿಲ್ಲ ಎಂದಿದ್ದಾರೆ ಕೆಲವು ಸ್ಥಳೀಯರು. ಘಟನೆಯಲ್ಲಿ ವಿವೇಕ್ ಜೊತೆ ಚಿತ್ರತಂಡಕ್ಕೆ ಸೇರಿದ ಇನ್ನೊಬ್ಬ ವ್ಯಕ್ತಿಯೂ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ ಆದರೆ ವಿವೇಕ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಗಾಯಗೊಂಡಿದ್ದ ಮತ್ತೊಬ್ಬ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ RR ಆಸ್ಪತ್ರೆಗೆ ರವಾನಿಸಲಾಗಿದೆ.

    ಯಾವ ದೃಶ್ಯದ ಚಿತ್ರೀಕರಣ?

    ಯಾವ ದೃಶ್ಯದ ಚಿತ್ರೀಕರಣ?

    ಫೈಟ್ ದೃಶ್ಯದ ಚಿತ್ರೀಕರಣಕ್ಕಾಗಿ ಕ್ರೇನ್ ತೆಂಗಿನ ತೋಟದ ಒಳಕ್ಕೆ ಕ್ರೇನ್ ತರಿಸಲಾಗಿತ್ತು. ಕ್ರೇನ್ ಮೇಲಿನಿಂದ ಹಾರಿ ನೀರಿನ ತೊಟ್ಟಿಗೆ ಬೀಳುವ ದೃಶ್ಯದ ಚಿತ್ರೀಕರಣ ಮಾಡಬೇಕಿತ್ತು. ಮೆಟಲ್ ರೋಪ್‌ಗಳನ್ನು ಹಾಕಿ ಅದನ್ನು ಕ್ರೇನ್‌ಗೆ ಕಟ್ಟಿ ಎಳೆಯಲಾಗಿತ್ತು. ಈ ವೇಳೆ ಕ್ರೇನ್‌ನ ಮುಂಭಾಗದ ಭಾಗವನ್ನು ಕ್ರೇನ್ ಚಾಲಕ ಮೇಲಕ್ಕೆತ್ತಿದ್ದಾನೆ. ಮೇಲೆ ಹಾದು ಹೋಗಿದ್ದ 11 ಕೆವಿ ವಿದ್ಯುತ್ ತಂತಿ ಕ್ರೇನ್‌ಗೆ ತಗುಲಿದ ಪರಿಣಾಮ ರೋಪ್ ಹಾಕಿಕೊಂಡಿದ್ದ ವಿವೇಕ್ ಮತ್ತು ರೋಪ್ ಜಾಕೆಟ್ ತೊಡಿಸಿದ್ದ ವ್ಯಕ್ತಿಗೆ ವಿದ್ಯುತ್ ಶಾಕ್ ತಗುಲಿ ತೀವ್ರ ಗಾಯವಾಗಿದೆ.

    ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು

    ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು

    ಸಿನಿಮಾದ ಚಿತ್ರೀಕರಣಕ್ಕೆ ಅನುಮತಿ ಪಡೆದಿರಲಿಲ್ಲ ಎನ್ನಲಾಗುತ್ತಿದೆ. ಆದರೆ ಅನುಮತಿ ಇದೆ ಎಂದುಕೊಂಡೇ ಪುಟ್ಟರಾಜು ತಮ್ಮ ಜಮೀನಿನಲ್ಲಿ ಚಿತ್ರೀಕರಣ ಮಾಡಲು ಅವಕಾಶ ಕೊಟ್ಟಿದ್ದರಂತೆ. ಆದರೆ ಘಟನೆ ನಂತರ ಪುಟ್ಟರಾಜು ಕಾಣೆಯಾಗಿದ್ದಾರೆ. ಸಾಹಸ ನಿರ್ದೇಶಕ ವಿನೋದ್, ಕ್ರೇನ್ ಚಾಲಕ, ನಿರ್ದೇಶಕ ಶಂಕರ್, ನಿರ್ಮಾಪಕ ಗುರು ದೇಶಪಾಂಡೆಯವರುಗಳನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದಿದ್ದು ಇವರುಗಳ ಮೇಲೆ 304, 308ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಚಿತ್ರೀಕರಣಕ್ಕೆ ಯೋಗ್ಯವಲ್ಲದ ಜಾಗದಲ್ಲಿ ಚಿತ್ರೀಕರಣ ಮಾಡಲು ಹೊರಟಿದ್ದೇ ಚಿತ್ರತಂಡ ಮಾಡಿದ ತಪ್ಪು. ಚಿತ್ರೀಕರಣ ಮಾಡಲಿರುವ ಸ್ಥಳವನ್ನು ಸೂಕ್ತವಾಗಿ ಪರಾಮರ್ಶಿಸದೇ ಚಿತ್ರೀಕರಣ ಮಾಡಲು ಮುಂದಾಗಿದ್ದರಿಂದ ಈಗ ದೊಡ್ಡ ಬೆಲೆ ತೆರೆಯುವಂತಾಗಿದೆ.

    English summary
    Assistant stunt man Vivek died in set of Kannada movie 'Love You Rachu' today. Here is the detail of the incident.
    Monday, August 9, 2021, 17:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X