For Quick Alerts
  ALLOW NOTIFICATIONS  
  For Daily Alerts

  ಭಜರಂಗಿ-2 ಬಿಡುಗಡೆ ದಿನವೇ ಮತ್ತೊಬ್ಬ ಸ್ಟಾರ್ ನಟನ ಚಿತ್ರ ರಿಲೀಸ್

  |

  ಅಕ್ಟೋಬರ್ 1 ರಿಂದ ಕರ್ನಾಟಕದಲ್ಲಿ ಚಿತ್ರಮಂದಿರಗಳಿಗೆ 100% ಅನುಮತಿ ನೀಡಲಾಗಿದೆ. ಇದರೊಂದಿಗೆ ಬಹಳ ದಿನಗಳಿಂದ ರಿಲೀಸ್‌ಗಾಗಿ ಕಾಯುತ್ತಿದ್ದ ಸ್ಟಾರ್ ನಟರ ಚಿತ್ರಗಳು ಒಂದೊಂದೆ ರಿಲೀಸ್ ದಿನಾಂಕ ಘೋಷಣೆ ಮಾಡ್ತಿವೆ.

  ಪ್ರಮುಖವಾಗಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3, ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಹಾಗೂ ದುನಿಯಾ ವಿಜಯ್ ಪ್ರಪ್ರಥಮ ಬಾರಿಗೆ ನಿರ್ದೇಶಿಸಿರುವ ಸಲಗ ಚಿತ್ರಗಳ ಬಿಡುಗಡೆ ದಿನಾಂಕದ ಮೇಲೆ ಹೆಚ್ಚು ಗಮನವಿತ್ತು. ನಿರೀಕ್ಷೆಯಂತೆ ಈ ಮೂರು ಚಿತ್ರಗಳು ರಿಲೀಸ್ ದಿನಾಂಕ ಲಾಕ್ ಮಾಡಿಕೊಂಡಿದೆ.

  ಬಾಲಿವುಡ್: ಹಲವು ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆಬಾಲಿವುಡ್: ಹಲವು ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆ

  ದಸರಾ ಹಬ್ಬದ ಪ್ರಯುಕ್ತ ಕೋಟಿಗೊಬ್ಬ ಹಾಗೂ ಸಲಗ ಚಿತ್ರಗಳು ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದ್ದು, ಅಕ್ಟೋಬರ್ ಕೊನೆಯಲ್ಲಿ ಭಜರಂಗಿ ದರ್ಶನಕ್ಕೆ ಹ್ಯಾಟ್ರಿಕ್ ಹೀರೋ ಮುಹೂರ್ತ ನಿಗದಿಪಡಿಸಿಕೊಂಡಿದ್ದಾರೆ. ಈ ನಡುವೆ ಸ್ಟಾರ್ ಸಿನಿಮಾಗಳ ನಡುವೆ ಬಿಡುಗಡೆ ದಿನಾಂಕಗಳ ಕ್ಲಾಷ್ ಆಗ್ತಿದೆ. ಒಂದೇ ದಿನ ಎರಡೆರಡು ಚಿತ್ರಗಳು ಥಿಯೇಟರ್‌ಗೆ ಲಗ್ಗೆಯಿಡುತ್ತಿದೆ. ಶಿವಣ್ಣನ ಭಜರಂಗಿ 2 ಚಿತ್ರಕ್ಕೆ ಈಗ ಮತ್ತೊಬ್ಬ ಸ್ಟಾರ್ ನಟನ ಚಿತ್ರ ಫೈಟ್ ನೀಡಲು ಮುಂದಾಗಿದೆ. ಮುಂದೆ ಓದಿ...

  ಚಿತ್ರರಂಗಕ್ಕೆ ಕಾಲಿಟ್ಟು 19 ವರ್ಷ: ಹಳೆಯ ನೆನಪು ಮೆಲುಕು ಹಾಕಿದ ನೆನಪಿರಲಿ ಪ್ರೇಮ್ಚಿತ್ರರಂಗಕ್ಕೆ ಕಾಲಿಟ್ಟು 19 ವರ್ಷ: ಹಳೆಯ ನೆನಪು ಮೆಲುಕು ಹಾಕಿದ ನೆನಪಿರಲಿ ಪ್ರೇಮ್

  ಅಕ್ಟೋಬರ್ 29ಕ್ಕೆ ಭಜರಂಗಿ

  ಅಕ್ಟೋಬರ್ 29ಕ್ಕೆ ಭಜರಂಗಿ

  ಜಯಣ್ಣ-ಬೋಗೇಂದ್ರ ನಿರ್ಮಾಣದಲ್ಲಿ ತಯಾರಾಗಿರುವ ಭಜರಂಗಿ 2 ಸಿನಿಮಾ ಅಕ್ಟೋಬರ್ 29ಕ್ಕೆ ಚಿತ್ರಮಂದಿರಕ್ಕೆ ಬರಲಿದೆ. ಈ ಹಿಂದೆ ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಆಗಸ್ಟ್ 20ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ, 50% ಅನುಮತಿ ಇದ್ದ ಕಾರಣ ಬಿಡುಗಡೆಯಿಂದ ಹಿಂದಕ್ಕೆ ಸರಿದಿತ್ತು. ಈಗ ಅಕ್ಟೋಬರ್ 1 ರಿಂದ ಥಿಯೇಟರ್‌ಗಳಿಗೆ ಪೂರ್ಣ ಅನುಮತಿ ಸಿಕ್ಕಿದ್ದು, ಅದೇ ತಿಂಗಳಲ್ಲಿ ಕೊನೆಯಲ್ಲಿ ಭಜರಂಗಿ ಎಂಟ್ರಿಯಾಗಲಿದೆ.

  ಹರ್ಷ-ಶಿವಣ್ಣನ ಕಾಂಬಿನೇಷನ್

  ಹರ್ಷ-ಶಿವಣ್ಣನ ಕಾಂಬಿನೇಷನ್

  ಹರ್ಷ ನಿರ್ದೇಶನದ ಈ ಚಿತ್ರ ಹೆಚ್ಚು ನಿರೀಕ್ಷೆ ಮೂಡಿಸಿದೆ. ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಈಗಾಗಲೇ ಭಜರಂಗಿ ಹಾಡುಗಳು ಹಿಟ್ ಬಾರಿಸಿದೆ. ಶಿವರಾಜ್ ಕುಮಾರ್‌ಗೆ ನಾಯಕಿಯಾಗಿ 'ಜಾಕಿ' ಭಾವನಾ ನಟಿಸಿದ್ದಾರೆ. ನಟಿ ಶ್ರುತಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಸೌರವ್ ಲೋಕೇಶ್, ಶಿವರಾಜ್ ಕೆ.ಆರ್ ಪೇಟೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಶಿವಣ್ಣನೊಂದಿಗೆ ಲವ್ಲಿ ಸ್ಟಾರ್ ಪ್ರೇಮ್

  ಶಿವಣ್ಣನೊಂದಿಗೆ ಲವ್ಲಿ ಸ್ಟಾರ್ ಪ್ರೇಮ್

  ಶಿವಣ್ಣನ ಭಜರಂಗಿ 2 ಚಿತ್ರದೊಂದಿಗೆ ಲವ್ಲಿ ಸ್ಟಾರ್ ಪ್ರೇಮ್ ನಟನೆಯ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ' ಚಿತ್ರವೂ ಥಿಯೇಟರ್‌ಗೆ ಬರ್ತಿದೆ. ಪ್ರೇಮ್ ಅಭಿನಯಿಸಿರುವ ಚಿತ್ರದ ರಿಲೀಸ್ ದಿನಾಂಕವೂ ಘೋಷಣೆಯಾಗಿದ್ದು, ಅಕ್ಟೋಬರ್ 29ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ. ಈ ಚಿತ್ರಕ್ಕೆ ರಾಘವೇಂದ್ರ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಕ್ಷಿತಾ ಕೆಡಂಬಾಡಿ ಮತ್ತು ಡಾ ರಾಜ್ ಕುಮಾರ್ ಜಾನಕಿ ರಾಮನ್ ಇಬ್ಬರು ಬಂಡವಾಳ ಹಾಕಿದ್ದಾರೆ. ಇದೊಂದು ರೋಮ್ಯಾಂಟಿಕ್ ಜಾನರ್ ಸಿನಿಮಾ ಆಗಿದ್ದು, ಈ ಚಿತ್ರದಲ್ಲಿ ಪ್ರೇಮ್ ಹಲವು ಶೇಡ್ ಗಳಲ್ಲಿ ನಟಿಸುತ್ತಿದ್ದಾರಂತೆ. ನವನಟಿ ಬ್ರಿಂದಾ ಆಚಾರ್ಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಲೈಫ್ ಜೊತೆ ಒಂದು ಸೆಲ್ಫಿ' ಸಿನಿಮಾದಲ್ಲಿ ಪ್ರೇಮ್ ಕೊನಯೆದಾಗಿ ಕಾಣಿಸಿಕೊಂಡಿದ್ದರು. 'ಯಜಮಾನ' ಚಿತ್ರದ ಹಾಡೊಂದರಲ್ಲಿ ಅತಿಥಿ ಪಾತ್ರ ಮಾಡಿದ್ದರು.

  ಕೋಟಿಗೊಬ್ಬ vs ಸಲಗ

  ಕೋಟಿಗೊಬ್ಬ vs ಸಲಗ

  ಈ ನಡುವೆ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರವೂ ಹಾಗೂ ದುನಿಯಾ ವಿಜಯ್ ನಟನೆಯ ಸಲಗ ಚಿತ್ರವೂ ಒಂದೇ ದಿನ ತೆರೆಗೆ ಬರುವುದಾಗಿ ಘೋಷಿಸಿದೆ. ದಸರಾ ಹಬ್ಬದ ಪ್ರಯಕ್ತ ಅಕ್ಟೋಬರ್ 14 ರಂದು ಸಲಗ ಮತ್ತು ಕೋಟಿಗೊಬ್ಬ 3 ಚಿತ್ರಗಳು ಮುಖಾಮುಖಿಯಾಗುತ್ತಿದೆ. ಇದರ ಬೆನ್ನಲ್ಲೆ ಭಜರಂಗಿ 2 ಹಾಗೂ ಪ್ರೇಮಂ ಪೂಜ್ಯಂ ಸಿನಿಮಾಗಳು ಎದುರು ಬದರು ಆಗಲಿದೆ.

  English summary
  Lovely star Prem Starrer Premam poojyam movie to release on October 29th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X