»   » 'ಲೂಸಿಯಾ' ಪವನ್ ಹೊಸ ಚಿತ್ರ 'C10H14N2'

'ಲೂಸಿಯಾ' ಪವನ್ ಹೊಸ ಚಿತ್ರ 'C10H14N2'

Posted By:
Subscribe to Filmibeat Kannada

ಲೂಸಿಯಾದಂತಹ ಒಂದು ರೋಮಾಂಚಕ ಹಾಗೂ ಮನೋವೈಜ್ಞಾನಿಕ ಚಿತ್ರವನ್ನು ಕೊಟ್ಟಂತಹ ಪವನ್ ಕುಮಾರ್ ಅವರ ಮತ್ತೊಂದು ಹೊಸ ಚಿತ್ರ ಪ್ರಕಟವಗಿದೆ. ಈ ಬಾರಿಯೂ ಅವರ ಚಿತ್ರದ ಶೀರ್ಷಿಕೆ ಭಿನ್ನವಾಗಿರುವುದು ಚಿತ್ರರಂಗದಲ್ಲಿ ಅತೀವ ಕುತೂಹಲ ಕೆರಳಿಸುವಂತೆ ಮಾಡಿದೆ.

ಬಹಳ ಚರ್ಚೆಗೆ, ವಿಮರ್ಶೆಗೆ ಪಾತ್ರವಾದ 'ಲೂಸಿಯಾ' ಚಿತ್ರದ ಬಳಿಕ ಪವನ್ ಮುಂದೆ ಯಾವ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಬಗ್ಗೆ ನಿರೀಕ್ಷಿಸುವಂತಾಗಿತ್ತು. ಈಗ ಆ ನಿರೀಕ್ಷೆಗೆ ತೆರೆಬಿದ್ದಿದೆ. ಅವರ ಹೊಸ ಚಿತ್ರಕ್ಕೆ 'C10H14N2' ಎಂದು ಹೆಸರಿಡಲಾಗಿದೆ. ['ಲೂಸಿಯಾ' ಚಿತ್ರ ವಿಮರ್ಶೆ]

C10H14N2

ಇದೇನೂ ಎಂದು ಗೂಗಲ್ ನಲ್ಲಿ ಹುಡುಕಿದರೆ, ಇದೊಂದು ರಸಾಯನಿಕ ನಿಕೋಟಿನ್ (C10H14N2) ಅಣುಸೂತ್ರ ಎಂಬುದು ಗೊತ್ತಾಗುತ್ತದೆ. ತಂಬಾಕಿನ ವಿಶಿಷ್ಟ ಗುಣಗಳಿಗೆ ಕಾರಣವಾದ ಅದರ ಮುಖ್ಯ ಸತ್ವವೇ ನಿಕೋಟಿನ್. ಇದರ ಅಣುಸೂತ್ರವನ್ನು ಚಿತ್ರದ ಶೀರ್ಷಿಕೆ ಬಳಸಿಕೊಳ್ಳಲಾಗಿದೆ.

'ಲೂಸಿಯಾ' ಚಿತ್ರದ ನಾಯಕ ನಿದ್ರಾಹೀನತೆಯಿಂದ ಬಳಲುತ್ತಿರುತ್ತಾನೆ. 'ಲೂಸಿಯಾ' ಎಂಬ ಗುಳಿಗೆ ಅವನಿಗೆ ಕಣ್ತುಂಬ ನಿದ್ದೆ ಬರುವಂತೆ ಮಾಡುತ್ತದೆ. ಈ ಬಾರಿಯೂ ಪವನ್ ಕುಮಾರ್ ಅದೇ ರೀತಿಯ ಒಂದು ಮನೋವೈಜ್ಞಾನಿಕ ಕಥೆಯನ್ನು ಕೈಗೆತ್ತಿಕೊಂಡಿದ್ದಾರಾ ಎಂಬುದಕ್ಕೆ ಸದ್ಯಕ್ಕೆ ಉತ್ತರವಿಲ್ಲ.

ಆಡಿಯನ್ಸ್ ಫಿಲಂಸ್ ಅಂಡ್ ಹೋಮ್ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಲಿರುವ ಚಿತ್ರದ ಪಾತ್ರವರ್ಗ, ತಾಂತ್ರಿಕ ಬಳಗದ ವಿವರಗಳು ಇನ್ನಷ್ಟೇ ಪ್ರಕಟಿಸಬೇಕು. ನಿರ್ದೇಶನ, ಕಥೆ, ಚಿತ್ರಕಥೆ ಪವನ್ ಕುಮಾರ್ ಅವರದು.

ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಆಕ್ಷನ್ ಹಾಗೂ ಥ್ರಿಲ್ಲರ್ ಅಂಶಗಳನ್ನು ಹೊಂದಿರುವ ಚಿತ್ರ. ಕನ್ನಡದಲ್ಲೇ ನಿರ್ಮಿಸುತ್ತಾರಾ? ಅಥವಾ ಬೇರೆ ಭಾಷೆಯಲ್ಲಿ ಚಿತ್ರ ನಿರ್ಮಾಣವಾಗಲಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಸ್ವಲ್ಪ ಸಮಯ ಕಾಯಲೇಬೇಕು ಎನ್ನುತ್ತದೆ 'ನಿಕೋಟಿನ್' ಚಿತ್ರದ ಫೇಸ್ ಬುಕ್ ಪುಟ. (ಫಿಲ್ಮಿಬೀಟ್ ಕನ್ನಡ)

English summary
Actor/Director Pawan Kumar has revealed his next movie. After making the highly acclaimed Lucia, the director had been working on the script for his next movie. The movie has been titled as C10H14N2. The film produced under the studio banner Audience Films and Home Talkies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada