For Quick Alerts
ALLOW NOTIFICATIONS  
For Daily Alerts

ಲಂಡನ್ ನಲ್ಲಿ ಲಕ್ಕಿ ಸ್ಟಾರ್ ರಮ್ಯಾ ಮಾಡ್ತಿರೋದು ಇದನ್ನಾ?

By Harshitha
|

''ಲಕ್ಕಿ ಸ್ಟಾರ್ ರಮ್ಯಾ ಲಂಡನ್ ನಲ್ಲಿದ್ದಾರೆ. ಅಲ್ಲಿ ರಾಜ್ಯ ಶಾಸ್ತ್ರದ ಪಠಣ ಮಾಡ್ತಿದ್ದಾರೆ. ಪಾಲಿಟಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸ್ ನಲ್ಲಿ ಪರ್ಫೆಕ್ಟ್ ಆದ್ಮೇಲೆ ಮರಳಿ ಭಾರತಕ್ಕೆ ಬಂದು ಮಂಡ್ಯ ಗದ್ದುಗೆಗೆ ರಾಣಿಯಾಗಲಿದ್ದಾರೆ.''

ಹೀಗಂತ ರಮ್ಯಾ ಆಪ್ತವಲಯದಿಂದ ಆಗಾಗ ಸುದ್ದಿ ಬರುತ್ತಲೇ ಇತ್ತು. ಆದ್ರೆ, ಒಮ್ಮೆ ಲಂಡನ್, ಇನ್ನೊಮ್ಮೆ ನ್ಯೂ ಯಾರ್ಕ್ ಅಂತ ಆಕಾಶದಲ್ಲೇ ಹಾರಾಡುತ್ತಿರುವ ಈ 'ಲಕ್ಕಿ ಸ್ಟಾರ್' ಈಗೆಲ್ಲಿದ್ದಾರೆ? ರಮ್ಯಾ ಮೇಡಂ ಈಗ ಮಾಡುತ್ತಿರುವುದಾದರೂ ಏನು ಅಂದ್ರೆ 'ಮೈಸೂರಿನ ಇತಿಹಾಸ' ಕೆದಕುತ್ತಿದ್ದಾರೆ.

ಮಂಡ್ಯದಲ್ಲಿ ಮನೆ ಖರೀದಿಸಿ ಅಲ್ಲಿನ ಜನಕ್ಕೆ ಸೇವೆ ಮಾಡಬೇಕಿದ್ದ ರಮ್ಯಾಗೆ 'ಮೈಸೂರು ಇತಿಹಾಸ' ಯಾಕೆ ಅಂತ ನೀವು ಕೇಳಬಹುದು. ಟ್ವಿಸ್ಟ್ ಇರುವುದೇ ಇಲ್ಲಿ. ಲಂಡನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ರಮ್ಯಾಗೆ, ಅವರ ಪ್ರೊಫೆಸರ್ ಒಬ್ಬರು Susan Stronge ಬರೆದಿರುವ 'Tipu's Tigers' ಅನ್ನುವ ಪುಸ್ತಕವನ್ನ ಗಿಫ್ಟ್ ಮಾಡಿದ್ದಾರೆ. [ಹೇಗಿದ್ದ ಲಕ್ಕಿ ಸ್ಟಾರ್ ರಮ್ಯಾ ಈಗ ಹೇಗಾಗಿದ್ದಾರೆ ನೋಡಿ]

ಅದೂ, ರಮ್ಯಾ ಕನ್ನಡತಿ, ಕರ್ನಾಟಕದಲ್ಲಿ ಹುಟ್ಟಿ ಬೆಳೆದಾಕೆ ಅಂತ ತಿಳಿದುಕೊಂಡ ಬಳಿಕ. ಮೂಲತಃ ಕಾಮರ್ಸ್ (ವಾಣಿಜ್ಯ) ವಿದ್ಯಾರ್ಥಿಯಾಗಿದ್ದರೂ, ರಮ್ಯಾಗೆ ಇತಿಹಾಸ ಅಂದ್ರೆ ಅಚ್ಚು ಮೆಚ್ಚು.

ಸಮಯ ಸಿಕ್ಕಾಗೆಲ್ಲಾ ಪುರಾತನ ವಾಸ್ತುಶೈಲಿಯ ಬಗ್ಗೆ ತಿಳಿದುಕೊಳ್ಳುತ್ತಿದ್ದ ರಮ್ಯಾ ಪಾಲಿಗೆ 'Tipu's Tigers' ಪುಸ್ತಕ ದೊಡ್ಡ ಉಡುಗೊರೆ. ಟಿಪ್ಪು ಸುಲ್ತಾನನ ಆಡಳಿತ, ವಾಸ್ತುಶಿಲ್ಪ, ಕಲೆ ಬಗ್ಗೆ ರಚಿತವಾಗಿರುವ 'Tipu's Tigers' ಪುಸ್ತಕದಿಂದ 'ವುಡನ್ ಟೈಗರ್' ಐತಿಹ್ಯದ ಬಗ್ಗೆ ತಿಳಿದುಕೊಂಡು ರಮ್ಯಾ ಅಚ್ಚರಿ ಪಟ್ಟಿದ್ದಾರೆ.

ವಿಶ್ವವಿಖ್ಯಾತ ಚೆನ್ನಪಟ್ಟಣದ ಗೊಂಬೆಗಳ ಬಗ್ಗೆ ಓದಿ ತಿಳಿದುಕೊಂಡಿದ್ದ ರಮ್ಯಾ, ಲಂಡನ್ ನಲ್ಲಿರುವ ಪ್ರಸಿದ್ಧ 'ವಿಕ್ಟೋರಿಯಾ ಅಂಡ್ ಆಲ್ಬರ್ಟ್ ಮ್ಯೂಸಿಯಂ'ನಲ್ಲಿ ಅದೇ ಚೆನ್ನಪಟ್ಟಣದ 'ವುಡನ್ ಟೈಗರ್' ಗೊಂಬೆಯನ್ನ ನೋಡಿ ಬಂದಿದ್ದಾರೆ. [ಗೌಡರ ಮನೆ ಸೊಸೆಯಾಗುವರೇ ಲಕ್ಕಿ ಸ್ಟಾರ್ ರಮ್ಯಾ?]

ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದ ಬಳಿಕ ಟಿಪ್ಪು ಸುಲ್ತಾನನ ಅರಮನೆಯಲ್ಲಿದ್ದ ಈ 'ವುಡನ್ ಟೈಗರ್'ನ ಅಂದು ಆಂಗ್ಲರು ಲಂಡನ್ ಗೆ ಒಯ್ದಿದ್ದರು. 200 ವರ್ಷಗಳಷ್ಟು ಪುರಾತನವಾಗಿರುವ ಈ ಗೊಂಬೆ 'ವಿಕ್ಟೋರಿಯಾ ಆಂಡ್ ಆಲ್ಬರ್ಟ್ ಮ್ಯೂಸಿಯಂ' ನಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. [ಅಭಿಮಾನಿಗಳಿಗೆ ಬಕೆಟ್ ತಣ್ಣೀರೆರಚಿದ ನಟಿ ರಮ್ಯಾ]

ಈ ಎಲ್ಲಾ ಅಚ್ಚರಿಗಳನ್ನ 'ಲಂಡನ್' ನಲ್ಲಿ ನೋಡುತ್ತಾ ರಮ್ಯಾ ಬಿಜಿಯಾಗಿದ್ದಾರೆ. ರಾಜ್ಯ ಶಾಸ್ತ್ರದ ಜೊತೆಗೆ ನಮ್ಮ ನೆಲದ ಇತಿಹಾಸ ಕೆದಕುತ್ತಿರುವ ರಮ್ಯಾ, ಅವರ ಅಭಿಮಾನಿಗಳಿಗೆ ಸದಾ ಮಾದರಿ.

English summary
Golden Queen Ramya aka Divya Spandana is keen on studying about the history of Tipu Sultan in London. Ramya was presented a book called 'Tipu's Tigers' by her professor, which made her to get back to History.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more