»   » ಕಿಚ್ಚ ಸುದೀಪ್ ರನ್ನ ಕಿಚಾಯ್ಸಿದ್ರಾ ಗೀತಸಾಹಿತಿ ಹೃದಯಶಿವ?

ಕಿಚ್ಚ ಸುದೀಪ್ ರನ್ನ ಕಿಚಾಯ್ಸಿದ್ರಾ ಗೀತಸಾಹಿತಿ ಹೃದಯಶಿವ?

Posted By:
Subscribe to Filmibeat Kannada

ಎಲ್ಲೆಲ್ಲೂ 'ಬಿಗ್ ಬಾಸ್' ಕಾರ್ಯಕ್ರಮದ್ದೇ ಸೌಂಡು. ಎಲ್ಲರ ಬಾಯಲ್ಲೂ ಹುಚ್ಚ ವೆಂಕಟ್ ರದ್ದೇ ಮಾತು. ಪ್ರತಿದಿನ ರಾತ್ರಿ 9 ಗಂಟೆಗೆ ಕರೆಕ್ಟಾಗಿ ಟಿವಿ ಮುಂದೆ ಅನೇಕರು ಹಾಜರಾಗುವುದಕ್ಕೆ ಕಾರಣ 'ಬಿಗ್ ಬಾಸ್-3'.

ಹೀಗಿರುವ 'ಬಿಗ್ ಬಾಸ್' ಒಂದು ಅರ್ಥವಿಲ್ಲದ ಕಾರ್ಯಕ್ರಮ ಅಂದಿದ್ದಾರೆ ಕನ್ನಡ ಚಿತ್ರರಂಗದ ಖ್ಯಾತ ಗೀತಸಾಹಿತಿ ಹೃದಯಶಿವ. ಇದರ ಜೊತೆಗೆ ಕಿಚ್ಚ ಸುದೀಪ್ ಬಗ್ಗೆ ಕೂಡ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಕಾಮೆಂಟ್ ಮಾಡಿದ್ದಾರೆ. [ಕ್ಲಾಸ್+ಮಾಸ್ ಚಿತ್ರ ಸಾಹಿತಿ ಹೃದಯ ಶಿವಗಿರೊದೊಂದೇ ಆಸೆ!]

ಸುದೀಪ್ ರೀಮೇಕ್ ಮತ್ತು ಸ್ವಮೇಕ್ ಸಿನಿಮಾಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧಗಳೇ ನಡೆದುಹೋಗಿವೆ. ಈಗ ಅದೇ ಟಾಪಿಕ್ ಬಗ್ಗೆ ಹೃದಯಶಿವ ಕಾಮೆಂಟ್ ಮಾಡಿರುವ ಕಾರಣ ಸುದೀಪ್ 'ಅಪ್ಪಟ ಭಕ್ತರು' ಹೃದಯಶಿವ ವಿರುದ್ಧ ಬುಸುಗುಡುತ್ತಿದ್ದಾರೆ. ಮುಂದೆ ಓದಿ.....

ಹೃದಯಶಿವ ಹಾಕಿರುವ ಸ್ಟೇಟಸ್ ಏನು?

''ಬಿಗ್ ಬಾಸ್' ಒಂದು ಅರ್ಥವಿಲ್ಲದ ಕಾರ್ಯಕ್ರಮ. ಪಾಪ ಅವರನ್ನೆಲ್ಲ ಅಲ್ಲಿ ಗುಡ್ಡೆ ಹಾಕಿಕೊಂಡು ಅವರ ಬದುಕಿನ ಅಮೂಲ್ಯ ಕ್ಷಣಗಳನ್ನು ಹಾಳುಮಾಡುತ್ತಿರುವುದು ನನಗೆ ತೀವ್ರ ನೋವುಂಟು ಮಾಡಿದೆ.'' - ಹೃದಯಶಿವ

ಸುದೀಪ್ ಬಗ್ಗೆ ಹೇಳಿರುವುದೇನು?

''ಒಂದಿಷ್ಟು ಪ್ರತಿಭೆ ಇರುವ ಸುದೀಪ್ ಕೂಡ ಇವನ್ನೆಲ್ಲ ಬಿಟ್ಟು ಒಂದು ಸ್ವಮೇಕ್ ಸಿನಿಮಾ ಮಾಡುವುದೊಳಿತು'' - ಹೃದಯಶಿವ. [ಯಾಕೆ ರೀಮೇಕ್ ಮಾಡಬಾರದು? ಸುದೀಪ್ ಖಡಕ್ ಪ್ರಶ್ನೆ!]

ತಿರುಗಿ ಬಿದ್ದ ಸುದೀಪ್ 'ಭಕ್ತ'ರು.!

ಹೃದಯಶಿವ ಹಾಕಿದ ಇದೊಂದು ಸ್ಟೇಟಸ್ ನಿಂದಾಗಿ ಸುದೀಪ್ ಅಪ್ಪಟ ಅಭಿಮಾನಿಗಳು ಕೆರಳಿದ್ದಾರೆ. ಅದರಲ್ಲೊಬ್ಬರು ಸುದೀಪ್ ರವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಸುದೀಪ್ ಅಭಿಮಾನಿ ಹೇಳುವುದೇನು?

ಹ್ರಿದಯ ಶಿವ (Hridaya Shiva) ಅವರೇ ,
೧ - 'ಬಿಗ್ ಬಾಸ್' ಒಂದು ಅರ್ಥವಿಲ್ಲದ ಕಾರ್ಯಕ್ರಮ. ಪಾಪ ಅವರನ್ನೆಲ್ಲ ಅಲ್ಲಿ ಗುಡ್ಡೆ ಹಾಕಿಕೊಂಡು ಅವರ ಬದುಕಿನ ಅಮೂಲ್ಯ ಕ್ಷಣಗಳನ್ನು ಹಾಳುಮಾಡುತ್ತಿರುವುದು ನನಗೆ ತೀವ್ರ ನೋವುಂಟು ಮಾಡಿದೆ". ನಿಮ್ಮ ಈ ಅಭಿಪ್ರಾಯ ಓದಿ ನನಗೂ ತುಂಬಾ ನೋವಾಯಿತು, ಹೃದಯಕ್ಕೆ. ನೀವು ಸತ್ಯವನ್ನೇ ಹೇಳಿದ್ದೀರಿ ಸತ್ಯವನ್ನಲ್ಲದೆ ಬೇರೇನನ್ನೂ ಹೇಳಿಲ್ಲ. ನಿಮ್ಮಲ್ಲಿರುವ ಈ ಜೀವಪರ ಕಾಳಜಿಗೆ ಧನ್ಯವಾದಗಳು.

೨ - ಆದರೆ, ಹಾಗೆ ಮುಂದುವರಿದು ನೀವು "ಒಂದಿಷ್ಟು ಪ್ರತಿಭೆ ಇರುವ ಸುದೀಪ್" ಎಂದು ಹೇಳಿ, ಸುದೀಪ್ ಅವರನ್ನು ಹೀಯಾಳಿಸಿದ್ದೀರಿ. ಹಾಗೆ, ನಿಮ್ಮಲ್ಲಿ ಒಂದು ಪ್ರಖರ ಪ್ರತಿಭೆಯನ್ನು ಗುರುತಿಸುವ ಪ್ರತಿಭೆ ನಿಮ್ಮಲ್ಲಿಲ್ಲವೆನ್ನುವುದನ್ನೂ ಸಾಬೀತು ಪಡಿಸಿದ್ದೀರಿ. ಭಾರತದ ಎಲ್ಲಾ ಚಿತ್ರರಂಗದ ಘಟಾನುಘಟಿಗಳು ಅವರ ಪ್ರತಿಭೆಯನ್ನು ನೋಡಿ ಬೆರಗಾಗಿ ಶಹಭಾಸ್ ಗಿರಿ ಕೊಟ್ಟದ್ದಾಗಿದೆ. ನಿಮ್ಮಿಂದ ಅವರಿಗೆ ಅದ್ಯಾವುದೂ ಬೇಕಾಗಿಲ್ಲ. ಸುದೀಪ್ ಅವರು ನಟ ಅಷ್ಟೇ ಅಲ್ಲ, ಅವರಲ್ಲಿ ಅತ್ಯುತ್ತಮ ಗಾಯಕ, ನಿರ್ದೇಶಕ, ಗಿಟಾರಿಸ್ಟ್, ಕ್ರೀಡಾಪಟು ಇದ್ದಾನೆಂಬುದು ನೆನಪಿರಲಿ. - ಗೋವರ್ಧನ ನವಿಲೆಹಾಳ್

ಸುದೀಪ್ ಗೆ ಕ್ಷಮೆ ಕೇಳಿ...

೩. ಒಬ್ಬ ತಳ ಸಮುದಾಯದ ಸುದೀಪ್ ಅವರ ಪ್ರಖಾಂಡ ಪ್ರತಿಭೆ, ಮತ್ತು ಬೆಳವಣಿಗೆಯನ್ನು ಸಹಿಸಲಾಗದೆ ಈ ಮಾತನ್ನು ಹೇಳಿದ್ದೀರೆನಿಸುತ್ತದೆ. ಸಾಹಿತ್ಯದ ಸಾಂಗತ್ಯದಲ್ಲಿರುವ ನೀವು ಸಹೃದಯತೆ ಬೆಳೆಸಿಕೊಂಡರೆ ಒಳ್ಳೆಯದು.

೪. ಸುದೀಪ್ ಅವರು ಸ್ವಮೇಕ್ ಸಿನಿಮಾ ಮಾಡಲಿ ಎಂಬುದು ಕನ್ನಡಿಗರಾದ ನಮ್ಮೆಲ್ಲರ ಬೇಡಿಕೆ ವ್ಯಕ್ತ ಪಡಿಸೋದು ಸರಿ, ಆದರೆ " ಸುದೀಪ್ ಕೂಡ ಇವನ್ನೆಲ್ಲ ಬಿಟ್ಟು ಒಂದು ಸ್ವಮೇಕ್ ಸಿನಿಮಾ ಮಾಡುವುದೊಳಿತು" ಎಂಬ ಅಕ್ಷರ ಅಹಂ ನಿಂದ ನೀವು ಹೇಳಿರುವುದನ್ನು ನೋಡಿದರೆ ಬೇಜಾರಾಗುತ್ತದೆ.

೫. ಇವರ ಈ ಸ್ಟೇಟಸ್ ಅನ್ನು ಲೈಕಿಸಿದವರು ಮತ್ತು ಕಮೆಂಟಿಸಿದವರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿತ್ತು. ಅಂಧಾಭಿಮಾನ ತೋರಿಸಿ ಬಿಟ್ಟಿರಾ ಎನಿಸುತ್ತದೆ. ೬. ಆದದ್ದಾಯಿತು ಒಮ್ಮ್ರೆ ಸುದೀಪ್ ಅವರಿಗೆ ಇಲ್ಲಿಂದಲೇ ಕ್ಷಮೆ ಕೇಳಿ..ನಮಸ್ಕಾರಗಳೊ೦ದಿಗೆ - ಗೋವರ್ಧನ ನವಿಲೆಹಾಳ್

ಹೃದಯಶಿವ ಕೊಟ್ಟ ಸಮರ್ಥನೆ

''ನಿಮ್ಮ ಈ ಬಾಲಿಶ ಕೀಟಲೆಗೆ ಪ್ರತಿಕ್ರಿಯೆ ನೀಡಬೇಕೋ ಬೇಡವೋ ಎಂಬ ಗೊಂದಲದಲ್ಲೇ ಈ ಮಾತುಗಳನ್ನು ಇಲ್ಲಿ ಹೇಳುತಿದ್ದೇನೆ ಗೋವರ್ಧನ...

ಒಂದಿಷ್ಟು ಪ್ರತಿಭೆ ಎಂದರೆ ನೀವು ವಿವರವಾಗಿ ಹೇಳಿರುವ ಪ್ರತಿಭೆಗಳು ಎಂಬುದೇ ನನ್ನ ಮಾತಿನ ಅರ್ಥ. ಒಂದು ಮಾತನ್ನು ಸಕಾರಾತ್ಮಕ ಕೋನದಿಂದ ನೋಡುವುದನ್ನು ಕಲಿಯಿರಿ. ಸುದೀಪ್ ಪ್ರತಿಭಾವಂತರಲ್ಲ ಅಂತ ಯಾರು ಹೇಳಿದ್ದು. ನನಗೂ ಅವರ ಅಭಿನಯ ಇಷ್ಟ. ಒಬ್ಬ ಕನ್ನಡಿಗನಾಗಿ ಭಾರತದಾದ್ಯಂತ ಕೀರ್ತಿ ಗಳಿಸಿರುವುದು ಪ್ರಶಂಸನೀಯ. ಇಂತಹ ಒಬ್ಬ ಪ್ರತಿಭಾನ್ವಿತ ನಟ, ನಿರ್ದೇಶಕನಿಂದ ನಾನು ಸಿನಿಮಾಗಳನ್ನಷ್ಟೇ ನಿರೀಕ್ಷಿಸುವುದು ತಪ್ಪೇ ಹಾಗಾದರೆ? ಸುದೀಪ್ ಥರದ ಪ್ರತಿಭಾವಂತರು ತಮ್ಮೆಲ್ಲ ಪ್ರತಿಭೆಯನ್ನು ಸಿನಿಮಾಗೆ ವಿನಿಯೋಗಿಸಲಿ ಎಂದು ಒಬ್ಬ ಸಿನಿಮಾ ಪ್ರೇಮಿಯಾದ ನಾನು ನಿರೀಕ್ಷಿಸುವುದೇ ತಪ್ಪೇ? ಇನ್ನು ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ನಾನು ಹೆಚ್ಚು ಮಾತಾಡಲು ಬಯಸುವುದಿಲ್ಲ. ಆ ಕಾರ್ಯಕ್ರಮ ನನಗೆ ಇಷ್ಟವಿಲ್ಲ. ಇಷ್ಟವಿದ್ದವರಿಗೆ ನೋಡುವ ಸ್ವಾತಂತ್ರ್ಯವಂತೂ ಖಂಡಿತವಿದೆ. ಕ್ಷಮೆ ಕೇಳುವಂತ ಅಪರಾಧ ನಾನೇನೂ ಮಾಡಿಲ್ಲಪ್ಪ.'' - ಹೃದಯಶಿವ

ಸುದೀಪ್ ವಿರುದ್ಧ ಗೂಗ್ಲಿ

ಕಿಚ್ಚನ ಅಭಿಮಾನಿಗಳ ಪ್ರತಿಕ್ರಿಯೆಗೆ ಕೆಲವರು ಸುದೀಪ್ ವಿರುದ್ಧ ಗೂಗ್ಲಿ ಬಾಲ್ ಹಾಕಿದ್ದಾರೆ. ''Govardhana Girishyam ಅವರೇ... Hridaya Shiva ಅವರ ಸ್ಟೇಟಸ್ ಅನ್ನು ಇಷ್ಟು ಕೂಲಂಕುಶವಾಗಿ ಓದಿ, ಅರ್ಥೈಸಿಕೊಂಡು ಈ ರೀತಿಯ ಸುದೀರ್ಘ ಪ್ರತಿಕ್ರಿಯೆ ಕೊಟ್ಟಿರುವುದಕ್ಕೆ ತಮಗೆ ಧನ್ಯವಾದ ಹೇಳಬೇಕೋ ಅಥವ ಬಾಲಿಶ ಅನ್ನಬೇಕೊ ಅನ್ನೊ ಅನುಮಾನ ನನಗೂ ಇದೆ... ಸುದೀಪ್ ಅವರ ಕಲಾಕೌಶಲ್ಯಕ್ಕೆ ಅಭಿಮಾನಿ ಬಳಗಗಳೇ ಇವೆ. ನಿಮ್ಮ ಹೇಳಿಕೆ ಎಲ್ಲರೂ ಅಭಿಮಾನಿಸಲೇ ಬೇಕು ಎಂದು ಕಟ್ಟಾಜ್ಞೆ ಹೊರಡಿಸೊ ಹಾಗಿದೆ. ವಿಮರ್ಶೆಗಳು ವಿಷಯಕ್ಕೆ ಇರಬೇಕೆ ಹೊರತು ವೈಯುಕ್ತಿಕವಾಗಬಾರದು. ಸುದೀಪ್ ಒಬ್ಬ ತಳ ಸಮುದಾಯದವ ಎನ್ನುವ ಮಾತನ್ನ ನಾನು ಖಂಡಿಸುತ್ತೆನೆ. ಅಪ್ಪನ ದುಡ್ಡು ಅವರನ್ನ ಸಿನಿಮಾರಂಗಕ್ಕೆ ಪ್ರವೇಶ ಬಳಸಲು ಅನುವು ಮಾಡಿಕೊಟ್ಟಿತು ನಂತರ ಹಂತ ಹಂತವಾಗಿ ಸಿನಿಮಾರಂಗದಲ್ಲಿ ಬೆಳೆದಿದ್ದಾರೆ. ತಳಮಟ್ಟದಿಂದ ಮೇಲೆ ಬಂದವರು ಈ ರಂಗದಲ್ಲಿ ತುಂಬಾ ಜನ ಇದ್ದಾರೆ. ಅದರಲ್ಲಿ ಸಾಧನೆ ಮೆಟ್ಟಿಲು ಏರಿದವರು ಇದ್ದಾರೆ, ಇನ್ನು ಏರುತ್ತಿರುವವರು ಇದ್ದಾರೆ, ಏರಲಾಗದೆ ಸೋತವರು ಇದ್ದಾರೆ. ಈ ತಳಸಮುದಾಯ ಎನ್ನುವ ಮಾತು ಬಳಸಿ ಅವರಿಗೆಲ್ಲ ಅವಮಾನಿಸಬೇಡಿ. ಇನ್ನೂ ಹೃದಯಶಿವ ಅವರ ಸ್ಟೇಟಸ್ ಲೈಕಿಸಿದವರು ಮತ್ತೆ ಕಮೆಂಟಿಸಿದವರನ್ನ ಅಂದಾಭಿಮಾನಿಗಳು ಎನ್ನುವುದು ಯಾವ ನ್ಯಾಯ...? ಪ್ರತಿಭೆಗೆ ಪುರಸ್ಕಾರ ತಿರಸ್ಕಾರ ಕೊಡುವುದು ಜನರ ಹಕ್ಕು ಅದನ್ನ ಪ್ರಶ್ನಿಸುವುದಕ್ಕೆ ನಿಮಗ್ಯಾವ ಅರ್ಹತೆಯು ಇಲ್ಲ...! ನಿಮ್ಮ ಪ್ರತಿಕ್ರಿಯೆಯ ವಿಧಾನವನ್ನೇ ಅಂಧಾಭಿಮಾನ ಅನ್ನುವುದು...!'' ವೆಂಕಟೇಶ್ ಎ.ಆರ್.

ಇದು ಮೊದಲೇನಲ್ಲ.!

ಫೇಸ್ ಬುಕ್ ನಲ್ಲಿ ಇಂತಹ ಸಮರ ನಡೆದಿರುವುದು ಇದೇ ಮೊದಲೇನಲ್ಲ. ಇತ್ತೀಚೆಗೆಷ್ಟೇ ಸುದೀಪ್ ಮೇಲೆ ಹುಚ್ಚ ವೆಂಕಟ್ ಏಕವಚನ ಪ್ರಯೋಗ ಮಾಡಿದ್ದಕ್ಕೆ ಸುದೀಪ್ ಅಭಿಮಾನಿಗಳು ಕೆರಳಿದ್ದರು. ಇನ್ನೂ ಸುದೀಪ್ ರೀಮೇಕ್ ಚಿತ್ರಗಳ ಬಗ್ಗೆ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಅದರಿಂದ ಬೇಸೆತ್ತ ಕಿಚ್ಚ ಸುದೀಪ್ ತಮ್ಮ ರೀಮೇಕ್ ಚಿತ್ರಗಳ ಬಗ್ಗೆ ಟ್ವೀಟ್ ಕೂಡ ಮಾಡಿದ್ದರು. [ಸುದೀಪ್ ರೀಮೇಕ್ ಚಿತ್ರಗಳ ಚಿದಂಬರ ರಹಸ್ಯ ಬಯಲು]

English summary
Lyricist Hridayashiva has taken his Facebook account to express his opinion on Bigg Boss Kannada reality show and Sudeep's remake films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada