»   » ಆಕ್ಷನ್ ಕಟ್ ಹೇಳಲಿರುವ ಗೀತಸಾಹಿತಿ ಕವಿರಾಜ್

ಆಕ್ಷನ್ ಕಟ್ ಹೇಳಲಿರುವ ಗೀತಸಾಹಿತಿ ಕವಿರಾಜ್

Posted By:
Subscribe to Filmibeat Kannada
Lyricist Kaviraj
ನಡೆದಾಡುವ ಕಾಮನಬಿಲ್ಲು (ಪರಿಚಯ), ನೀನು ಬಂದ ಮೇಲೆ ತಾನೆ (ಕೃಷ್ಣ), ಏನೋ ಒಂಥರಾ (ಹುಡಿಗಾಟ), ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ (ಚಪ್ಪಾಳೆ)...ಈ ರೀತಿಯ ಅದೆಷ್ಟೋ ಗೀತೆಗಳನ್ನು ಹೆಣೆದ ಗೀತಸಾಹಿತಿ ಕವಿರಾಜ್. ಈಗವರು ನಿರ್ದೇಶಕನ ಕ್ಯಾಪ್ ಧರಿಸಲು ಸಿದ್ಧವಾಗಿದ್ದಾರೆ.

ಅವರ ನಿರ್ದೇಶನದ ಚಿತ್ರ ಇದೇ ವರ್ಷ ಸೆಟ್ಟೇರಲಿದೆಯಂತೆ. ಸದ್ಯಕ್ಕೆ ಚಿತ್ರಕಥೆ ಹೆಣೆಯುವುದರಲ್ಲಿ ಅವರು ಬಿಜಿ. ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ ಎಲ್ಲರನ್ನೂ ಮನರಂಜಿಸಲಿದೆ ಎಂಬ ವಿಶ್ವಾಸ ಅವರಿಗಿದೆ. ಈಗಾಗಲೆ ಅವರು ಹಲವಾರು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಇತ್ತೀಚೆಗಷ್ಟೇ ತೆರೆಕಂಡ ದುನಿಯಾ ವಿಜಯ್ ಅಭಿನಯದ ರಜಿನಿಕಾಂತ ಚಿತ್ರದಲ್ಲಿ ಅವರು ಒಂದು ಸಣ್ಣ ಪಾತ್ರವನ್ನು ಪೋಷಿಸಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿನಯಿಸುತ್ತಿರುವ ಚಿತ್ರವೊಂದಕ್ಕೆ ಕವಿರಾಜ್ ಸಹಾಯ ನಿರ್ಮಾಪರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ತಮ್ಮ ನಿರ್ದೇಶನದ ಸಿನಿಮಾದ ಚಿತ್ರಕಥೆ ಸಂಪೂರ್ಣವಾದ ಬಳಿಕಷ್ಟೇ ಪಾತ್ರವರ್ಗದ ಆಯ್ಕೆ ಎಂದಿದ್ದಾರೆ. ಮೊದಲು ಚಿತ್ರಕಥೆ ಕಡೆಗೆ ಗಮನ ಹರಿಸಿದ್ದೇನೆ. ಅದು ಪೂರ್ಣವಾದ ಬಳಿಕ ಅದಕ್ಕೆ ಹೊಂದುವ ನಟರನ್ನು ಆಯ್ಕೆ ಮಾಡುತ್ತೇನೆ. ಬಹುಶಃ ಈ ವರ್ಷದ ಕೊನೆಗೆ ಚಿತ್ರ ಸೆಟ್ಟೇರಬಹುದು. (ಏಜೆನ್ಸೀಸ್)

English summary
Kannada lyricist Kaviraj all set to direct a film this year end. The script is in the initial stages, I assure that my film will be an entertainer says Kaviraj.
Please Wait while comments are loading...