»   » ಮಲ್ಪಿಪ್ಲೆಕ್ಸ್ ನಿಂದ ಮತ್ತೆ ಅನ್ಯಾಯ: ಈ ಬಾರಿ 'ಮಾಸ್ತಿಗುಡಿ' ಬಲಿ

ಮಲ್ಪಿಪ್ಲೆಕ್ಸ್ ನಿಂದ ಮತ್ತೆ ಅನ್ಯಾಯ: ಈ ಬಾರಿ 'ಮಾಸ್ತಿಗುಡಿ' ಬಲಿ

Posted By: Naveen
Subscribe to Filmibeat Kannada

ಮಲ್ಟಿಪೆಕ್ಸ್ ಗಳಿಂದ ಕನ್ನಡ ಸಿನಿಮಾಗಳಿಗೆ ಆಗುತ್ತಿರುವ ಅನ್ಯಾಯ ಒಂದಾ.. ಎರಡಾ..? ಇತ್ತೀಚೆಗಷ್ಟೆ ಕರ್ನಾಟಕ ಸರ್ಕಾರ ಏಕರೂಪ ಪ್ರವೇಶ ದರ ನಿಗದಿ ಮಾಡಿದ್ರಿಂದ, ಸ್ವಲ್ಪ ಮಟ್ಟಿಗೆ ಮಲ್ಟಿಪ್ಲೆಕ್ಸ್ ಗಳ ದಬ್ಬಾಳಿಕೆಗೆ ಬ್ರೇಕ್ ಹಾಕಿತ್ತು. ಅದ್ರೆ ಈಗ ಮಲ್ಟಿಪ್ಲೆಕ್ಸ್ ಗಳು ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದೆ.[ಅಮೂಲ್ಯ ಮದುವೆ ದಿನವೇ ಹುಲಿ ಬೇಟೆಯಾಡಲಿರುವ ದುನಿಯಾ ವಿಜಯ್]

ಈ ಬಾರಿ ಮಲ್ಟಿಪ್ಲೆಕ್ಸ್ ಅನ್ಯಾಯಕ್ಕೆ ಬಲಿಯಾಗಿರುವುದು ಕನ್ನಡದ 'ಮಾಸ್ತಿಗುಡಿ' ಸಿನಿಮಾ. ಈ ಸಿನಿಮಾ ನಾಳೆ (ಮೇ12) ರಾಜ್ಯಾದ್ಯಂತ ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ಆದರೆ, ಮಲ್ಟಿಪ್ಲೆಕ್ಸ್ ಗಳಲ್ಲಿ ಈ ಸಿನಿಮಾಗೆ ಹೆಚ್ಚಿನ ಸ್ಕ್ರೀನ್ ನೀಡದೆ ಅನ್ಯಾಯ ಮಾಡಲಾಗುತ್ತಿದೆ.['ಮಾಸ್ತಿ ಗುಡಿ' ದುರಂತ: ಆರು ಮಂದಿ ವಿರುದ್ಧ ಚಾರ್ಜ್ ಶೀಟ್]

'Maasti Gudi' Team gives complaint against Multiplex to KFCC

ಮಲ್ಟಿಪ್ಲೆಕ್ಸ್ ವಿರುದ್ಧ ಸಿಟ್ಟಾಗಿರುವ 'ಮಾಸ್ತಿಗುಡಿ' ಚಿತ್ರತಂಡ ಈಗಾಗಲೇ ಫಿಲ್ಮ್ ಚೆಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ರವರನ್ನ ಭೇಟಿ ಮಾಡಿ ದೂರು ನೀಡಿದೆ. ಚಿತ್ರದ ನಟ ದುನಿಯಾ ವಿಜಯ್, ನಿರ್ದೇಶಕ ನಾಗಶೇಖರ್, ನಿರ್ಮಾಪಕ ಸುಂದರ್ ಪಿ.ಗೌಡ ಮತ್ತು ವಿತರಕ ಜಾಕ್ ಮಂಜು ಫಿಲ್ಮ್ ಚೆಂಬರ್ ಅಧ್ಯಕ್ಷರಿಗೆ ತಮ್ಮ ದೂರನ್ನ ಸಲ್ಲಿಸಿದ್ದಾರೆ.[ಬಿಡುಗಡೆಗೂ ಮುನ್ನವೇ ಭರ್ಜರಿ ಬೇಟೆ ಆಡಿದ ವಿಜಯ್ 'ಮಾಸ್ತಿಗುಡಿ' ]

'ಮಾಸ್ತಿಗುಡಿ' ಸಿನಿಮಾ ಬಹುನಿರೀಕ್ಷೆಯ ಚಿತ್ರವಾಗಿದ್ದರೂ, ಮಲ್ಟಿಪ್ಲೆಕ್ಸ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಕ್ರೀನ್ ಸಿಕ್ಕಿಲ್ಲ. ಜೊತೆಗೆ ಸಿಕ್ಕಿರುವ ಸ್ಕ್ರೀನ್ ಗಳ ಪೈಕಿ ಪೈಮ್ ಟೈಮ್ ನಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ. ಬೆಳ್ಳಗೆ 10 ಮತ್ತು ಮಧ್ಯಾಹ್ನ 1 ಗಂಟೆಗೆ ಶೋ ನೀಡಿದ್ದಾರೆ. ಅಲ್ಲದೆ, ನೂರು ಇನ್ನೂರು ಜನ ಕುಳಿತುಕೊಳ್ಳುವ ಅತಿ ಚಿಕ್ಕ ಸ್ಕೀನ್ ಗಳನ್ನ ಮಾತ್ರ 'ಮಾಸ್ತಿಗುಡಿ' ಚಿತ್ರಕ್ಕೆ ನೀಡಿದ್ದು ಚಿತ್ರತಂಡದ ಆಕ್ರೋಶಕ್ಕೆ ಕಾರಣವಾಗಿದೆ.[ಮತ್ತೆ 'ಜಾನಿ' ಜಪ ಮಾಡಲು ಆರಂಭಿಸಿದ ದುನಿಯಾ ವಿಜಯ್-ಪ್ರೀತಂ ಗುಬ್ಬಿ]

English summary
'Maasti Gudi' Team gives complaint to KFCC against Multiplexes.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada