»   » 'ಮಾಸ್ತಿ ಗುಡಿ' ತನಿಖೆ: ದುನಿಯಾ ವಿಜಯ್ ವಿರುದ್ಧ ಸ್ಫೋಟಕ ಮಾಹಿತಿ ಬಯಲು.!

'ಮಾಸ್ತಿ ಗುಡಿ' ತನಿಖೆ: ದುನಿಯಾ ವಿಜಯ್ ವಿರುದ್ಧ ಸ್ಫೋಟಕ ಮಾಹಿತಿ ಬಯಲು.!

Posted By: ಒನ್ಇಂಡಿಯಾ ಸಿಬ್ಬಂದಿ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ನವೆಂಬರ್ 7....ಕನ್ನಡ ಚಿತ್ರರಂಗದ ಪಾಲಿಗೆ ಕರಾಳ ದಿನ. ದುರ್ಘಟನೆಯಲ್ಲಿ ಇಬ್ಬರು ಖಳನಟರು ಸಾವನ್ನಪ್ಪಿದ ದುರಂತ ದಿನ.

  ನಿಷೇಧಿತ ಪ್ರದೇಶಗಳಲ್ಲಿ ಶೂಟಿಂಗ್ ಮಾಡಬಾರದು ಎಂದು ಜಲಮಂಡಳಿ ಅಧಿಕಾರಿಗಳಿಂದ ಕಟ್ಟಪ್ಪಣೆ ಇದ್ದರೂ, ಅದನ್ನ ಮೀರಿ ತಿಪ್ಪಗೊಂಡನಹಳ್ಳಿ ಕೆರೆಯ ಮಧ್ಯ ಭಾಗದಲ್ಲಿ 'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನ ಚಿತ್ರೀಕರಿಸಲಾಗಿತ್ತು. ಹೆಲಿಕಾಫ್ಟರ್ ನಿಂದ ಅನಿಲ್ ಮತ್ತು ಉದಯ್ ಎಂಬ ಉದಯೋನ್ಮುಖ ಕಲಾವಿದರು ಧುಮುಕಿ ನೀರು ಪಾಲಾದರು. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]


  ಅಷ್ಟಕ್ಕೂ, ತಿಪ್ಪಗೊಂಡನಹಳ್ಳಿ ಕೆರೆಯ ಮಧ್ಯೆ ಚಿತ್ರೀಕರಣ ನಡೆಸಬೇಕು ಅಂತ ಐಡಿಯಾ ಕೊಟ್ಟಿದ್ದು ಯಾರು? ಡ್ಯೂಪ್ ಹಾಕದೇ 'ಎಲ್ಲವನ್ನೂ ನ್ಯಾಚುರಲ್ ಆಗಿ ಶೂಟಿಂಗ್ ಮಾಡಬೇಕು' ಎಂಬ ಒತ್ತಾಯ ಶುರು ಆಗಿದ್ದು ಯಾರಿಂದ? ಎಂಬ ಸ್ಫೋಟಕ ಮಾಹಿತಿ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ ಓದಿರಿ...


  ಇಡೀ ದುರಂತ ಪ್ರಕರಣದ ರೂವಾರಿ ಯಾರು.?

  'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ನಡೆದ ದುರಂತ ಪ್ರಕರಣದ ರೂವಾರಿ ನಟ ದುನಿಯಾ ವಿಜಯ್ ಎಂಬ ಸಂಗತಿ ಪೊಲೀಸರ ತನಿಖೆ ವೇಳೆ ಬಯಾಲಾಗಿದೆ. [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]


  ಐಡಿಯಾ ಕೊಟ್ಟಿದ್ದೇ ದುನಿಯಾ ವಿಜಯ್.!

  'ಪಬ್ಲಿಕ್ ಟಿವಿ' ಮಾಡಿರುವ ವರದಿ ಪ್ರಕಾರ, 'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಐಡಿಯಾ ಕೊಟ್ಟವರು ನಟ ದುನಿಯಾ ವಿಜಯ್. ['ಮಾಸ್ತಿಗುಡಿ' ಸಾಹಸ ನಿರ್ದೇಶಕ ರವಿವರ್ಮಗೆ ಜಗ್ಗೇಶ್ ಛೀಮಾರಿ]


  ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ ನಿರ್ಮಾಪಕ ಸುಂದರ್ ಗೌಡ.!

  ಇಡೀ ದುರ್ಘಟನೆಯ ರೂವಾರಿ ನಟ ದುನಿಯಾ ವಿಜಯ್... ಕ್ಲೈಮ್ಯಾಕ್ಸ್ ಸೀನ್ ಗೆ ಐಡಿಯಾ ಕೊಟ್ಟಿದ್ದೂ ಕೂಡ ದುನಿಯಾ ವಿಜಯ್... ಡ್ಯೂಪ್ ಬಳಸದೇ ಚಿತ್ರೀಕರಿಸುವಂತೆ ಹೇಳಿದ್ದೂ ಕೂಡ ದುನಿಯಾ ವಿಜಯ್... ಅಂತ ಪೊಲೀಸರ ಮುಂದೆ ನಿರ್ಮಾಪಕ ಸುಂದರ್ ಗೌಡ ಹೇಳಿಕೆ ನೀಡಿದ್ದಾರೆ ಅಂತ 'ಪಬ್ಲಿಕ್ ಟಿವಿ' ವರದಿ ಮಾಡಿದೆ. ['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]


  ಸುಂದರ್ ಗೌಡ ನೀಡಿರುವ ಹೇಳಿಕೆಯಲ್ಲಿ ಏನಿದೆ?

  ''ಮಾಸ್ತಿ ಗುಡಿ' ಕ್ಲೈಮ್ಯಾಕ್ಸ್ ಸೀನ್ ಬಗ್ಗೆ ನಾಗಶೇಖರ್ ತಲೆಕೆಡಿಸಿಕೊಂಡಿದ್ದಾಗ, ಈ (ದುಸ್ಸಾಹಸದ) ಸೀನ್ ಐಡಿಯಾ ಕೊಟ್ಟವರೇ ದುನಿಯಾ ವಿಜಯ್. ಅದೂ ಅಲ್ಲದೇ, ಡ್ಯೂಪ್ ಬೇಡ..ನಮ್ಮ ಹುಡುಗರೇ ಮಾಡುತ್ತಾರೆ. ಅವರನ್ನು ಒಪ್ಪಿಸುವ ಜವಾಬ್ದಾರಿ ನನ್ನದು ಅಂತ ದುನಿಯಾ ವಿಜಯ್, ನಿರ್ದೇಶಕ ನಾಗಶೇಖರ್ ಹಾಗೂ ನನ್ನ ಮುಂದೆ ಹೇಳಿದ್ದರು'' ಅಂತ ಪೊಲೀಸರಿಗೆ ನಿರ್ಮಾಪಕ ಸುಂದರ್ ಗೌಡ ಹೇಳಿದ್ದಾರೆ.


  'ನಾನಿದ್ದೀನಿ' ಎಂದಿದ್ದ ದುನಿಯಾ ವಿಜಯ್

  ''ನೀರಿನ ಬಗ್ಗೆ ಭಯಗೊಂಡಿದ್ದ ಉದಯ್, 'ನನಗೆ ಈಜು ಬರೋಲ್ಲ' ಅಂದರೂ 'ನಾನಿದ್ದೀನಿ, ನಾನು ಇರುವ ತನಕ ಏನೂ ಆಗಲ್ಲ' ಅಂತ ದುನಿಯಾ ವಿಜಯ್ ಹೇಳಿದ್ದರು'' ಎಂದೂ ಕೂಡ ಪೊಲೀಸರ ಮುಂದೆ ಸುಂದರ್ ಗೌಡ ಹೇಳಿದ್ದಾರಂತೆ.


  ಮಾಧ್ಯಮಗಳ ಮುಂದೆ ಕೂಡ ಉದಯ್ ಇದೇ ಮಾತನ್ನ ಹೇಳಿದ್ದರು.!

  'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಪಾಲ್ಗೊಳ್ಳುವ ಮುನ್ನ, ''ಸ್ವಿಮ್ಮಿಂಗ್ ಲೈಟ್ ಆಗಿ ಬರುತ್ತದೆ ಅಷ್ಟೆ. ಅಷ್ಟು ದೊಡ್ಡ ಸ್ವಿಮ್ಮರ್ ಅಲ್ಲ. ಭಯ ಇದೆ. ಮೂರು ಜನ ಇದ್ದೀವಿ. ಮುಖ ಮುಖ ನೋಡ್ಕೊಂಡು ಬೀಳ್ತೀವಿ. ಅದೊಂದೇ ಗೊತ್ತಿರೋದು. ಅದಾದ ಮೇಲೆ ದೇವರ ಪಾದ'' ಅಂತ ಉದಯ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. [ನಿಮಗೆಲ್ಲಾ ಗೊತ್ತಿಲ್ಲದ 'ಮಾಸ್ತಿ ಗುಡಿ' ವಿಲನ್ ಉದಯ್ ಅಸಲಿ ಕಹಾನಿ]


  ಅನಿಲ್ ಹೇಳಿದ್ದೇನು.?

  'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಪಾಲ್ಗೊಳ್ಳುವ ಮುನ್ನ, ''ನನಗೆ ಬಾವಿಯಲ್ಲಿ ಈಜು ಹೊಡೆದಿರುವ ಅನುಭವ ಅಷ್ಟೇ ಇರುವುದು. 20-30 ಅಡಿ ಉದ್ದ ಸ್ವಿಮ್ ಮಾಡಿ ಅಭ್ಯಾಸವಿಲ್ಲ. ಎರಡೇ ಸಲ ಮೇಲೆ ಬರೋದು, ಮೂರನೇ ಸಲ ಬಂದಿಲ್ಲ ಅಂದ್ರೆ ಭಗವಂತ ಹಿಡಿದುಕೊಳ್ತಾನೆ ಅಷ್ಟೇ'' ಅಂತ ಮಾಧ್ಯಮಗಳ ಮುಂದೆ ಅನಿಲ್ ಹೇಳಿದ್ದರು. [ದುರಂತ ಸಾವಿಗೀಡಾದ ಅನಿಲ್ ಯಾರು.? ನಿಜ ಬದುಕಿನ ಕಥೆ ಇಲ್ಲಿದೆ...]


  ಸಾವಿನ ಮುನ್ಸೂಚನೆ ಇತ್ತು.!

  ಈಜಿನಲ್ಲಿ ನೈಪುಣ್ಯತೆ ಹೊಂದಿಲ್ಲ ಎಂಬುದನ್ನು ಸ್ವತಃ ಅನಿಲ್ ಹಾಗೂ ಉದಯ್ ರವರೇ ಹೇಳಿಕೊಂಡಿದ್ದಾರೆ. ಇನ್ನೂ ''ನಾವು ನೀರಿಗೆ ಹಾರಿದ ತಕ್ಷಣ, ನಮ್ಮ ರಕ್ಷಣೆಗೆ ಸಿಬ್ಬಂದಿಗಳು ಸಿದ್ದವಾಗಿದ್ದಾರೆ. ಅವರು ಬೋಟಿನಲ್ಲಿ ಬರುತ್ತಾರೆ'' ಎಂಬ ನಂಬಿಕೆ ಅವರಿಗೆ ಇತ್ತು. ಒಂದು ಪಕ್ಷ ಸಿಬ್ಬಂದಿ ಬಾರದೇ ಹೋದರೆ ಸಾವು ಖಚಿತ ಎಂಬ ಆತಂಕ ಅವರನ್ನು ಕಾಡಿತ್ತು ಎನ್ನುವುದಕ್ಕೆ ಅವರ ಮಾತುಗಳೇ ಸಾಕ್ಷಿ.


  ದುನಿಯಾ ವಿಜಯ್ ಮಾತ್ರ ಲೈಫ್ ಜಾಕೆಟ್ ತೊಟ್ಟಿದ್ದರು.!

  ಡ್ಯೂಪ್ ಇಲ್ಲದೇ, ಲೈಫ್ ಜಾಕೆಟ್ ಬಳಸದೆ ಉದಯ್ ಮತ್ತು ಅನಿಲ್ ನೀರಿಗೆ ಹಾರಿದ್ರೆ, ಇತ್ತ ದುನಿಯಾ ವಿಜಯ್ ಮಾತ್ರ ಲೈಫ್ ಜಾಕೆಟ್ ಬಳಸಿ ತಿಪ್ಪಗೊಂಡನಹಳ್ಳಿ ಕೆರೆಗೆ ಹಾರಿದ್ದರು.


  ನಾಗಶೇಖರ್, ರವಿವರ್ಮ ರವರ ನಿರ್ಲಕ್ಷ್ಯ.!

  ಪ್ಲಾನ್ ಏನೇ ಇದ್ದರೂ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ 'ಮಾಸ್ತಿ ಗುಡಿ' ನಿರ್ದೇಶಕ ನಾಗಶೇಖರ್ ಮತ್ತು ರವಿವರ್ಮ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಮೆರೆದಿರುವುದು ಮಾತ್ರ ಸುಳ್ಳಲ್ಲ.


  ದುನಿಯಾ ವಿಜಯ್ ವಿರುದ್ಧ ಎಫ್.ಐ.ಆರ್.?

  ನಿರ್ಮಾಪಕ ಸುಂದರ್ ಗೌಡ ನೀಡಿರುವ ಹೇಳಿಕೆ ಆಧರಿಸಿ, 'ಮಾಸ್ತಿ ಗುಡಿ' ನಾಯಕ ನಟ ದುನಿಯಾ ವಿಜಯ್ ವಿರುದ್ಧ ಎಫ್.ಐ.ಆರ್ ಫೈಲ್ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.


  ನ್ಯಾಯಾಂಗ ಬಂಧನದಲ್ಲಿದ್ದಾರೆ ನಿರ್ಮಾಪಕ ಸುಂದರ್.!

  ಮಾಸ್ತಿ ಗುಡಿ' ನಿರ್ಮಾಪಕ ಸುಂದರ್.ಪಿ.ಗೌಡ ಅವರನ್ನು ತಾವರೆಕೆರೆ ಪೊಲೀಸರು ಮಂಗಳವಾರ (ನವೆಂಬರ್ 8) ಸಂಜೆ ಬಂಧಿಸಿದ್ದರು. ರಾಮನಗರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ಮೇಲೆ, ಸುಂದರ್.ಪಿ.ಗೌಡ ರವರಿಗೆ 14 ದಿನಗಳ ನ್ಯಾಯಾಂಗ ಬಂಧನದ ಶಿಕ್ಷೆ ವಿಧಿಸಲಾಗಿದೆ. [ಎ-1 ಆರೋಪಿ 'ಮಾಸ್ತಿ ಗುಡಿ' ನಿರ್ಮಾಪಕ ಸುಂದರ್ ಗೌಡ ಅರೆಸ್ಟ್.!]


  ಅರೆಸ್ಟ್ ಆಗಿದ್ದಾರೆ ನಾಗಶೇಖರ್

  'ಮಾಸ್ತಿ ಗುಡಿ' ಚಿತ್ರದ ನಿರ್ದೇಶಕ ನಾಗಶೇಖರ್ ಅವರನ್ನು ತಾವರೆಕೆರೆ ಪೊಲೀಸರು ಬುಧವಾರ (ನವೆಂಬರ್ 9) ಮಧ್ಯಾಹ್ನ ವಶಕ್ಕೆ ಪಡೆದುಕೊಂಡರು. [ನಾಪತ್ತೆ ಆಗಿದ್ದ 'ಮಸಣ ಗುಡಿ' ಸೂತ್ರಧಾರ ನಾಗಶೇಖರ್ ಪೊಲೀಸರ ವಶಕ್ಕೆ.!]


  ರವಿವರ್ಮ ಇನ್ನೂ ಕೈಗೆ ಸಿಕ್ಕಲ್ಲ

  ಅನಿಲ್ ಮತ್ತು ಉದಯ್ ದುರಂತ ಸಾವಿಗೀಡಾದ ಬಳಿಕ, ಕಳೆದ ಮೂರು ದಿನಗಳಿಂದ ಸಾಹಸ ನಿರ್ದೇಶಕ ರವಿವರ್ಮ ನಾಪತ್ತೆ ಆಗಿದ್ದಾರೆ. ಪೊಲೀಸರ ಕೈಗೆ ಅವರಿನ್ನೂ ಸಿಕ್ಕಿಲ್ಲ.


  ಈಗಿರುವ ಕೇಸ್ ನಲ್ಲಿ ನಿರ್ಮಾಪಕ ಎ-1 ಆರೋಪಿ.!

  ಜಲಮಂಡಳಿ ಅಧಿಕಾರಿಗಳು ನೀಡಿರುವ ದೂರಿನ ಅನ್ವಯ, 'ಮಾಸ್ತಿ ಗುಡಿ' ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರು ಎ-1 ಆರೋಪಿಯಾಗಿದ್ದು, ನಿರ್ದೇಶಕ ನಾಗಶೇಖರ್ ಅವರು ಎ-2 ಆರೋಪಿ, ಸಹ ನಿರ್ದೇಶಕ ಎ-3 ಆರೋಪಿ, ಸಾಹಸ ನಿರ್ದೇಶಕ ರವಿವರ್ಮ ಅವರನ್ನು ಎ-4 ಆರೋಪಿಯನ್ನಾಗಿಸಿ ಪ್ರಕರಣ ದಾಖಲಿಸಲಾಗಿದೆ.


  ಅಂತ್ಯ ಸಂಸ್ಕಾರ

  ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಅನಿಲ್ ಮತ್ತು ಉದಯ್ ಮೃತದೇಹ ಪತ್ತೆ ಆಗಿದ್ದು, ಉದಯ್ ಅವರ ಅಂತ್ಯ ಕ್ರಿಯೆ ಬೆಂಗಳೂರಿನ ಬನಶಂಕರಿ ರುದ್ರಭೂಮಿಯಲ್ಲಿ ನಡೆದಿದೆ. [ಮಣ್ಣಲ್ಲಿ ಮಣ್ಣಾದ 'ಮಾಸ್ತಿ ಗುಡಿ' ನಟ ರಾಘವ ಉದಯ್]


  ವಿಡಿಯೋ ನೋಡಿ....

  'ಮಾಸ್ತಿ ಗುಡಿ' ಚಿತ್ರೀಕರಣದ ವೇಳೆ ಆದ ಅವಘಡದ ವಿಡಿಯೋ ಇಲ್ಲಿದೆ ನೋಡಿ....


  English summary
  According to Public TV Report, Producer Sundar.P.Gowda has revealed during Police Interrogation that Kannada Actor Duniya Vijay was the one who gave 'Maasti Gudi' Climax shooting idea. Based on Producer's statement Police is planning to file FIR against Duniya Vijay.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more