twitter
    For Quick Alerts
    ALLOW NOTIFICATIONS  
    For Daily Alerts

    'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರಕ್ಕೆ 14 ವರ್ಷ: ಸುದೀಪ್‌ಗೆ ಸ್ಮರಣೀಯ ನೆನಪು

    |

    ಸಾಹಸಸಿಂಹ ಡಾ ವಿಷ್ಣುವರ್ಧನ್ ನಟನೆಯಲ್ಲಿ ಮೂಡಿ ಬಂದಿದ್ದ 'ಮಾತಾಡ್ ಮಾತಾಡ್ ಮಲ್ಲಿಗೆ' ಸಿನಿಮಾ 14 ವರ್ಷ ಪೂರೈಸಿದೆ. ಆಗಸ್ಟ್ 24, 2017ರಲ್ಲಿ ತೆರೆಕಂಡಿದ್ದ ಈ ಚಿತ್ರಕ್ಕೆ ಹದಿನಾಲ್ಕು ವರ್ಷ ತುಂಬಿದ ಸಂತಸವನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    'ಮೇಷ್ಟ್ರು' ಎಂದೇ ಗುರುತಿಸಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಬಂದ ಬಹಳ ವಿಶೇಷ ಚಿತ್ರಗಳು ಪೈಕಿ 'ಮಾತಾಡ್ ಮಾತಾಡ್ ಮಲ್ಲಿಗೆ' ಸಿನಿಮಾ ಸಹ ಒಂದು. ಅಮೆರಿಕಾ ಅಮೆರಿಕಾ, ಅಮೃತಧಾರೆ ಅಂತಹ ಹಿಟ್ ಚಿತ್ರಗಳ ನಂತರ ಮಾತಾಡ್ ಮಾತಾಡ್ ಮಲ್ಲಿಗೆ ಕೈಗೆತ್ತಿಕೊಂಡಿದ್ದರು.

    ಚಮಚಗಳನ್ನು ದೂರವಿಟ್ಟು ಕೆಲಸ ಮಾಡಿ; ನೂತನ ಸಿಎಂಗೆ ನಾಗತಿಹಳ್ಳಿ ಚಂದ್ರಶೇಖರ್ ಮನವಿಚಮಚಗಳನ್ನು ದೂರವಿಟ್ಟು ಕೆಲಸ ಮಾಡಿ; ನೂತನ ಸಿಎಂಗೆ ನಾಗತಿಹಳ್ಳಿ ಚಂದ್ರಶೇಖರ್ ಮನವಿ

    ಪಕ್ಕಾ ಆಕ್ಷನ್ ಸಿನಿಮಾಗಳಲ್ಲಿ ಘರ್ಜಿಸುತ್ತಿದ್ದ ವಿಷ್ಣುವರ್ಧನ್ ಅವರ ಜೊತೆ ಕಲಾತ್ಮಕ ಚಿತ್ರವೊಂದು ಮಾಡುವ ಪ್ರಯತ್ನದಲ್ಲಿ ಗೆದ್ದು ಬೀಗಿದ್ದರು. ಕೆ ಮಂಜು ನಿರ್ಮಾಣ ಮಾಡಿದ್ದ ಈ ಚಿತ್ರದಲ್ಲಿ ವಿಷ್ಣುವರ್ಧನ್, ಸುಹಾಸಿನಿ, ಕಿಚ್ಚ ಸುದೀಪ್, ನಿವೇದಿತಾ, ಅರುಣ್ ಸಾಗರ್, ರಂಗಾಯಣ ರಘು, ತಾರಾ, ಮಂಡ್ಯ ರಮೇಶ್, ಸಿಹಿ ಕಹಿ ಚಂದ್ರು, ಕೋಮಲ್ ಸೇರಿದಂತೆ ಅನೇಕರು ನಟಿಸಿದ್ದರು.

    ನನ್ನ ಸಿದ್ಧಾಂತಗಳನ್ನು ಹೇಳಿದ ಸಿನಿಮಾ

    ನನ್ನ ಸಿದ್ಧಾಂತಗಳನ್ನು ಹೇಳಿದ ಸಿನಿಮಾ

    'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರ 14 ವರ್ಷ ಪೂರೈಸಿದ ಹಿನ್ನೆಲೆ ನಾಗತಿಹಳ್ಳಿ ಚಂದ್ರಶೇಖರ್ ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ''ನನ್ನ ನಂಬಿಕೆಯ ಸಿದ್ಧಾಂತಗಳನ್ನು ಹೇಳಲು ಸಾಧ್ಯವಾದ ಮೆಚ್ಚಿನ ಸಿನಿಮಾ. ವಿಷ್ಣು ಅವರ ಅಪರಿಮಿತ ಸ್ನೇಹ, ವಿಷ್ಣು-ಸುದೀಪ್ ಅವರ ಮನೋಜ್ಞ ಮುಖಾಮುಖಿ ದೃಶ್ಯ, ಪ್ರಿಯ ಶಿಷ್ಯ ಕೆ ಮಂಜು ಪಟ್ಟ ಶ್ರಮ ಎಲ್ಲ ನೆನಪಾಗುತ್ತದೆ'' ಎಂದು ಪೋಸ್ಟ್ ಮಾಡಿದ್ದಾರೆ.

    ಎಂಎನ್‌ಸಿ vs ರೈತರು

    ಎಂಎನ್‌ಸಿ vs ರೈತರು

    ಎಂಎನ್‌ಸಿ ಕಂಪನಿಗಳು ರಾಷ್ಟ್ರೀಯ ಹೆದ್ದಾರಿ, ನೈಸ್ ರಸ್ತೆ, ಫ್ಯಾಕ್ಟರಿ ಎಂಬ ಕಾರಣಗಳನ್ನು ನೀಡಿ ರೈತರ ಭೂಮಿಯನ್ನು ಕಬಳಿಸುತ್ತದೆ. ಎಂಎನ್‌ಸಿ ಕಂಪನಿಗಳ ದಬ್ಬಾಳಿಕೆ ವಿರುದ್ಧ ಹೂವಯ್ಯ (ವಿಷ್ಣುವರ್ಧನ್) ತಿರುಗಿಬಿದ್ದು ತಮ್ಮ ಶಾಂತಿಯುತ ಹೋರಾಟದಿಂದ ರೈತರ ಭೂಮಿ, ತಮ್ಮ ಊರು ಉಳಿಸಿಕೊಳ್ಳಲು ಯಶಸ್ವಿಯಾಗ್ತಾರೆ. ಕ್ರಾಂತಿಕಾರಿಯಾಗಿ ಮೂಡಿಬಂದಿದ್ದ ಈ ಸಿನಿಮಾ ಜನಮನ ಗೆದ್ದಿತ್ತು. ವಿಷ್ಣುವರ್ಧನ್ ಅವರ ವಿಶಿಷ್ಟ ಅಭಿನಯ ಮೆಚ್ಚುಗೆ ಗಳಿಸಿಕೊಂಡಿತ್ತು.

    ವಿಷ್ಣುವರ್ಧನ್ ಜೊತೆ ಮೊದಲ ಚಿತ್ರ

    ವಿಷ್ಣುವರ್ಧನ್ ಜೊತೆ ಮೊದಲ ಚಿತ್ರ

    ಕಿಚ್ಚ ಸುದೀಪ್ ಅವರು ವಿಷ್ಣುವರ್ಧನ್ ಅವರ ಅಭಿಮಾನಿ. ಅವರ ಆದರ್ಶ, ವ್ಯಕ್ತಿತ್ವವನ್ನು ಅನುಸರಿಸುವ ಸುದೀಪ್‌ಗೆ ಮೊದಲ ಬಾರಿಗೆ ಅವರೊಟ್ಟಿಗೆ ನಟಿಸುವ ಅವಕಾಶ ಸಿಕ್ಕಿದ್ದು 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರದಲ್ಲಿ. ನಕ್ಸಲ್ ನಾಯಕನ ಪಾತ್ರದಲ್ಲಿ ಸುದೀಪ್ ನಟಿಸಿದ್ದು, ವಿಷ್ಣುವರ್ಧನ್ ಮತ್ತು ಸುದೀಪ್ ಮುಖಾಮುಖಿ ದೃಶ್ಯಗಳನ್ನು ನೋಡುಗರಿಗೆ ಬಹಳ ಇಷ್ಟವಾಗಿತ್ತು. ಶಾಂತಿ ಮತ್ತು ಕ್ರಾಂತಿ ಕೊನೆಯಲ್ಲಿ ಶಾಂತಿ ಗೆಲ್ಲುತ್ತದೆ ಎಂದು ವಿಷ್ಣುವರ್ಧನ್-ಸುದೀಪ್ ಪಾತ್ರಗಳು ಪ್ರತಿಬಿಂಬಿಸಿದ್ದವು. ವಿಷ್ಣುವರ್ಧನ್ ಅವರ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಸುದೀಪ್ ಯಾವಾಗಲೂ 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರವನ್ನು ಸ್ಮರಿಸಿಕೊಳ್ಳುತ್ತಾರೆ.

    ಎರಡು ರಾಜ್ಯ ಪ್ರಶಸ್ತಿ

    ಎರಡು ರಾಜ್ಯ ಪ್ರಶಸ್ತಿ

    'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರಕ್ಕೆ ಎರಡು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ಮೂರನೇ ಸಿನಿಮಾ ಹಾಗೂ ಅತ್ಯುತ್ತಮ ಗೀತೆ ರಚನೆಗಾಗಿ ರಾಜ್ಯ ಪ್ರಶಸ್ತಿ ಲಭಿಸಿತ್ತು. ಮನೋಮೂರ್ತಿ ಸಂಗೀತ ನಿರ್ದೇಶಿಸಿದ್ದರು. ವ್ಯವಹಾರಿಕವಾಗಿ ಈ ಚಿತ್ರ ಅಷ್ಟು ದೊಡ್ಡ ಗಳಿಕೆ ಕಂಡಿಲ್ಲ. ಈ ಬಗ್ಗೆ ನಿರ್ಮಾಪಕ ಕೆ ಮಂಜು ಬೇಸರ ವ್ಯಕ್ತಪಡಿಸಿದ್ದರು. ಒಂದೊಳ್ಳೆ ಸಿನಿಮಾ, ರೈತರ ಪರವಾಗಿದ್ದ ಚಿತ್ರ ಬಿಸಿನೆಸ್‌ನಲ್ಲಿ ನಿರೀಕ್ಷೆಯ ಮಟ್ಟ ತಲುಪಲಿಲ್ಲ ಎಂದು ನಿರಾಸೆಯಾಗಿದ್ದರು.

    English summary
    Kannada Late actor dr Vishnuvardhan and kiccha Sudeep Starrer Maathaad Maathaadu Mallige Movie Completes 14 Years. the movie directed by Nagathihalli Chandrashekhar.
    Tuesday, August 24, 2021, 17:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X