twitter
    For Quick Alerts
    ALLOW NOTIFICATIONS  
    For Daily Alerts

    'ಯಾರಿವನು' ಮಹಿಳೆಯರಿಗೆ ಉಚಿತ ಪ್ರದರ್ಶನ

    By Rajendra
    |

    ನಟ, ನಿರ್ಮಾಪಕ, ನಿರ್ದೇಶಕ ಹಾಗೂ ಸಕ್ರಿಯ ರಾಜಕಾರಣಿ ಮದನ್ ಪಟೇಲ್ ಅವರು ಮಹಿಳೆಯರಿಗೆ ವಿಶೇಷ ಕೊಡುಗೆ ಪ್ರಕಟಿಸಿದ್ದಾರೆ. ತಮ್ಮ ನಿರ್ಮಾಣ, ನಿರ್ದೇಶನದ 'ಯಾರಿವನು' ಚಿತ್ರವನ್ನು ಮಹಿಳೆಯರಿಗೆ ಉಚಿತವಾಗಿ ಪ್ರದರ್ಶಿಸಲು ನಿರ್ಧರಿಸಿದ್ದಾರೆ.

    "ಯಾರಿವನು ಚಿತ್ರ ಪ್ರತಿಯೊಬ್ಬ ಮಹಿಳೆಯೂ ನೋಡಲೇಬೇಕಾದ ಚಿತ್ರವಾಗಿರುವುದರಿಂದ ಇಂದಿನಿಂದ (ಮಾ.20) 5 ದಿನಗಳ ಕಾಲ ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ಮಹಿಳೆಯರಿಗೆ ಮಾತ್ರ ಉಚಿತ ಪ್ರವೇಶ ಇರುತ್ತದೆ" ಎಂದಿದ್ದಾರೆ.

    "ಇದು ಸತ್ಯಾನಂದ ಅಲ್ಲ. ಯಾರಿವನು, ನೀವೇ ಹೇಳಿ" ಎಂದು ಪ್ರೇಕ್ಷಕರ ಮುಂದೆ ಬಂದ ಮದನ್ ಪಟೇಲ್ ಅವರ ಚಿತ್ರವಿದು. ಮೀಡಿಯಾ ಇಂಟರ್ ನ್ಯಾಷನಲ್ ಲಾಂಛನದಲ್ಲಿ ಮದನ್ ಪಟೇಲ್ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಈ ಹಿಂದೆ 'ಸತ್ಯಾನಂದ' ಎಂದು ಹೆಸರಿಡಲಾಗಿತ್ತು.

    ಮದನ್ ಪಟೇಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಆನಂದಪ್ರಿಯ, ಶಿವಶಂಕರ್, ದಿನಕರ್ ಸಂಭಾಷಣೆ ಬರೆದಿದ್ದಾರೆ. ರಘು ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಮದನ್ ಪಟೇಲ್ ಅವರೇ ಸಂಗೀತ ನೀಡಿದ್ದಾರೆ. ನಾಗೇಂದ್ರ ಅರಸ್ ಸಂಕಲನ, ಮದನ್-ಹರಿಣಿ, ಮುರಳಿ ನೃತ್ಯ ನಿರ್ದೇಶನವಿರುವ ಯಾರಿವನು' ಚಿತ್ರಕ್ಕೆ ಮಯೂರ್ ಪಟೇಲ್ ಕಾರ್ಯಕಾರಿ ನಿರ್ಮಪಕರಾಗಿದ್ದಾರೆ.

    ರವಿಚೇತನ್, ಅನೂಕಿ, ನೇಹಾ, ಮಿತ್ರ, ಮಿಮಿಕ್ರಿ ದಯಾನಂದ್, ಸುರೇಶ್ಚಂದ್ರ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರ ಪ್ರದರ್ಶನ ಉಚಿತ ಎಂದ ಮೇಲೆ ಒಮ್ಮೆ ಯಾಕೆ ಹೋಗಿ ನೋಡಬಾರದು. ಮಹಿಳೆಯರು ಒಮ್ಮೆ ಯೋಚಿಸಬೇಕಾದ ವಿಷಯವಿದು. ಚಿತ್ರದ ವಿಮರ್ಶೆ ಒಮ್ಮೆ ಓದಿ. (ಒನ್ಇಂಡಿಯಾ ಕನ್ನಡ)

    English summary
    Actor, director and producer Mandan Patel arranged free screening for his latest Kannada film 'Yaarivanu' for women audience. Starting from 20th March to 5 days women may watch the movie at Triveni theatre Bangalore for free of cost.
    Wednesday, March 20, 2013, 16:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X