»   » ಹಿಂದಿ, ತಮಿಳು, ತೆಲುಗು ಚಿತ್ರಗಳನ್ನ ಹಿಂದಿಕ್ಕಿದ ಕನ್ನಡದ 'ಮಫ್ತಿ'

ಹಿಂದಿ, ತಮಿಳು, ತೆಲುಗು ಚಿತ್ರಗಳನ್ನ ಹಿಂದಿಕ್ಕಿದ ಕನ್ನಡದ 'ಮಫ್ತಿ'

Posted By:
Subscribe to Filmibeat Kannada

ಮಲ್ಟಿಫ್ಲೆಕ್ಸ್ ಗಳಲ್ಲಿ ಕನ್ನಡ ಸಿನಿಮಾಗಳಿಗೆ ಮಾನ್ಯತೆ ಕಮ್ಮಿ ಎಂಬ ಮಾತಿದೆ. ಆದ್ರೆ, ಈ ಮಾತಿಗೆ ವಿರುದ್ಧವಾಗಿ ಸ್ಯಾಂಡಲ್ ವುಡ್ ಬೆಳದು ನಿಂತಿದೆ. ಇತ್ತಿಚೀನ ದಿನಗಳಲ್ಲಿ ಕನ್ನಡದ ಚಿತ್ರಗಳು ಇತರೆ ಭಾಷೆಯ ಸಿನಿಮಾಗಳಿಗಿಂತ ಹೆಚ್ಚು ರೇಟಿಂಗ್ ಪಡೆದುಕೊಳ್ಳುತ್ತಿದೆ.

ಅದರಲ್ಲೂ 'ಬುಕ್ ಮೈ ಶೋ' ಅಂತಹ ಜಾಲತಾಣಗಳಲ್ಲಿ ಕನ್ನಡ ಸಿನಿಮಾಗಳು ಪರಾಕ್ರಮ ಮೆರೆಯುತ್ತಿದೆ. ಕಳೆದ ವಾರವಷ್ಟೇ ತೆರೆಕಂಡಿರುವ 'ಮಫ್ತಿ' ಸಿನಿಮಾ ಇದಕ್ಕೆ ತಾಜಾ ಉದಾಹರಣೆ.

'ಮಫ್ತಿ' ವಿಮರ್ಶೆ : ಹಿತವನು ಬಯಸುವ ಕಡು ರಾಕ್ಷಸನ ಕಥೆ !

Mafti Movie is Top Rating in Book My show

ಹೌದು, ಶ್ರೀಮುರಳಿ ಮತ್ತು ಶಿವರಾಜ್ ಕುಮಾರ್ ಅಭಿನಯದ 'ಮಫ್ತಿ' ಚಿತ್ರಕ್ಕೆ 'ಬುಕ್ ಮೈ ಶೋ'ನಲ್ಲಿ ಅತಿ ಹೆಚ್ಚು ರೇಟಿಂಗ್ ಸಿಕ್ಕಿದೆ. ಹಿಂದಿ, ತೆಲುಗು, ತಮಿಳು ಹಾಗೂ ಇಂಗ್ಲೀಷ್ ಸಿನಿಮಾಗಳನ್ನ ಹಿಂದಿಕ್ಕಿರುವ ಕನ್ನಡದ ಈ ಚಿತ್ರ ಚಿತ್ರಪ್ರೇಮಿಗಳ ಮನಗೆದ್ದಿದೆ.

Mafti Movie is Top Rating in Book My show

ಅಂದ್ಹಾಗೆ, ಕನ್ನಡದ 'ಮಫ್ತಿ' ಚಿತ್ರದ ಜೊತೆಗೆ 'ತುಮಾರಿ ಸುಲು', 'ಜವಾನ್', 'ಜಸ್ಟೀಸ್ ಲೀಗ್', 'ಆಕ್ಸಿಜನ್', 'ಕಾಲೇಜ್ ಕುಮಾರ್', 'ಫರಂಗಿ', 'ಮರ್ಡರ್ ಆನ್ ದಿ ಒರಿಯೆಂಟ್ ಎಕ್ಸ್ ಪ್ರೆಸ್', 'ವಂಡರ್' ಸೇರಿದಂತೆ ಹಲವು ಚಿತ್ರಗಳು ಪ್ರದರ್ಶನವಾಗುತ್ತಿವೆ.

ನರ್ತನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಶಿವಣ್ಣ, ಶ್ರೀಮುರಳಿ, ವಸಿಷ್ಠ ಸಿಂಹ, ಶಾನ್ವಿ ಶ್ರೀವಾಸ್ತವ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಜಯಣ್ಣ-ಬೋಗೇಂದ್ರ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.

ಶಿವಣ್ಣ, ಶ್ರೀಮುರಳಿಯ 'ಮಫ್ತಿ' ಬಗ್ಗೆ ವಿಮರ್ಶಕರು ಏನಂದ್ರು..?

English summary
Hatrick hero Shivarajkumar and Sri Murali Starrer Mafti Movie is Top Rating in Book My show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada