twitter
    For Quick Alerts
    ALLOW NOTIFICATIONS  
    For Daily Alerts

    ಹಾಸ್ಯಚಕ್ರವರ್ತಿಗೆ ರಾಜ್ಯ ಸರಕಾರ ನೀಡಿದ ಮರ್ಯಾದೆ

    |

    ಡಾ. ರಾಜಕುಮಾರ್ ಮತ್ತು ನರಸಿಂಹರಾಜು ಜೋಡಿ ಕನ್ನಡ ಬೆಳ್ಳಿತೆರೆಗೆ ಹೊಸ ರಂಗನ್ನು ನೀಡಿದ ಕಾಲವದು. ರಾಜ್ ಕಾಲ್ ಶೀಟ್ ಸಿಕ್ಕಿದರೂ ನರಸಿಂಹರಾಜು ಅವರ ಕಾಲ್ ಶೀಟ್ ಸಿಗುತ್ತಿರಲಿಲ್ಲವಂತೆ. ಆ ಮಟ್ಟಿಗೆ ಕಲಾಜಗತ್ತಿನಲ್ಲಿ ನರಸಿಂಹರಾಜು ತಮ್ಮ ಪ್ರಭಾವವನ್ನು ಬೀರಿದ್ದರು.

    ಹಾಸ್ಯ ಚಕ್ರವರ್ತಿ ಎಂದೇ ಬಿರುದು ಪಡೆದುಕೊಂಡಿದ್ದ ನರಸಿಂಹರಾಜು ತಮ್ಮ ಆಂಗಿಕ ಹಾವಭಾವಗಳಿಂದಲೇ ಎಲ್ಲರನ್ನೂ ರಂಜಿಸುತ್ತಿದ್ದರು, ಮತ್ತು ಈಗಲೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರ ಕಲಾಶಕ್ತಿಗೆ ನಮ್ಮ ಕಡೆಯಿಂದಲೂ ಒಂದು ಸಲಾಂ.

    ತಡವಾಗಿಯಾದರೂ ಸರಕಾರ ಮತ್ತು ಬಿಬಿಎಂಪಿ ಎಚ್ಚೆತ್ತುಕೊಂಡು ಹಾಸ್ಯ ಚಕ್ರವರ್ತಿಗೆ ಸೂಕ್ತ ಮತ್ತು ಈ ಹಿಂದೆನೇ ಸಲ್ಲಬೇಕಾಗಿದ್ದ ಗೌರವ ಮತ್ತು ಮರ್ಯಾದೆಯನ್ನು ನೀಡಿದೆ. ರಾಜಧಾನಿ ಬೆಂಗಳೂರಿನ ರಸ್ತೆಯೊಂದಕ್ಕೆ ನರಸಿಂಹರಾಜು ಅವರ ಹೆಸರನ್ನು ಇಟ್ಟು ಸಾರ್ಥಕ ಕೆಲಸವನ್ನು ಮಾಡಿದೆ. (ಜೂ.ನರಸಿಂಹರಾಜು ಕೊಟ್ಟ ಹಾಸ್ಯ ರಸಾಯನ)

    ನಗರದ ಹೃದಯ ಭಾಗದಲ್ಲಿರುವ ಮಹಾಲಕ್ಷ್ಮೀಪುರ ವಿಧಾನಸಭಾ ವ್ಯಾಪ್ತಿಯ ಸ್ವಿಮ್ಮಿಂಗ್ ಪೂಲ್ ರಸ್ತೆಗೆ 'ಹಾಸ್ಯ ಚಕ್ರವರ್ತಿ ನರಸಿಂಹರಾಜು ರಸ್ತೆ" ಎಂದು ಮರುನಾಮಕರಣ ಮಾಡಿದೆ. ಬೆಂಗಳೂರು ನಗರ ಉಸ್ತುವಾರಿ ಮತ್ತು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ರಸ್ತೆಗೆ ನರಸಿಂಹರಾಜು ಹೆಸರಿಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಕಟ್ಟೆ ಸತ್ಯನಾರಾಯಣ ಕೂಡಾ ಉಪಸ್ಥಿತರಿದ್ದರು.

    ರಾಮಲಿಂಗ ರೆಡ್ಡಿ

    ರಾಮಲಿಂಗ ರೆಡ್ಡಿ

    ನರಸಿಂಹರಾಜು ಅವರ ನೂರಕ್ಕೂ ಹೆಚ್ಚು ಚಿತ್ರವನ್ನು ನಾನು ನೋಡಿದ್ದೇನೆ. ಎಂತಹಾ ಮಹಾನ್ ಕಲಾವಿದರು ಅವರು. ಅವರ ಹೆಸರನ್ನು ಪ್ರಮುಖ ರಸ್ತೆಯೊಂದಕ್ಕೆ ಇಟ್ಟಿರುವುದು ನನಗೆ ಸಂತಸ ತಂದಿದೆ. ತಡವಾಗಿಯಾದರೂ ಮಹಾನ್ ಕಲಾವಿದನಿಗೆ ಸೂಕ್ತ ಗೌರವ ಸಂದಿದೆ -ಸಚಿವ ರೆಡ್ಡಿ

    ಸ್ಮಾರಕಕ್ಕೆ ಪ್ರಸ್ತಾಪ ಇಲ್ಲ

    ಸ್ಮಾರಕಕ್ಕೆ ಪ್ರಸ್ತಾಪ ಇಲ್ಲ

    ಡಾ.ರಾಜ್ ಮತ್ತು ಡಾ.ವಿಷ್ಣುವರ್ಧನ್ ಮಾದರಿಯಲ್ಲೇ ನರಸಿಂಹರಾಜು ಅವರ ಸ್ಮಾರಕವನ್ನು ಮಾಡಿದರೆ ಒಳ್ಳೆಯದು. ಆದರೆ ಸರಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾಪ ಇಲ್ಲ ಎಂದು ಸಚಿವ ರಾಮಲಿಂಗ ರೆಡ್ದಿ ಹೇಳಿದ್ದಾರೆ.

    ಕಟ್ಟೆ ಸತ್ಯನಾರಾಯಣ

    ಕಟ್ಟೆ ಸತ್ಯನಾರಾಯಣ

    ನರಸಿಂಹರಾಜು ಅವರ ಮಗಳು ಸುಧಾ ನರಸಿಂಹರಾಜು ರಸ್ತೆಯೊಂದಕ್ಕೆ ತನ್ನ ತಂದೆಯ ಹೆಸರನ್ನು ಇಡಲು ಮನವಿ ಮಾಡಿದ್ದರು. ಅದರಂತೆ ಬೆಂಗಳೂರಿನ ಪ್ರಮುಖ ರಸ್ತೆಯೊಂದಕ್ಕೆ ನರಸಿಂಹರಾಜು ಹೆಸರಿಡಲಾಗಿದೆ - ಮೇಯರ್ ಕಟ್ಟೆ ಸತ್ಯನಾರಾಯಣ.

    ತಂದೆಯ ಹೆಸರು ಬೆಂಗಳೂರಿನ ರಸ್ತೆಗೆ

    ತಂದೆಯ ಹೆಸರು ಬೆಂಗಳೂರಿನ ರಸ್ತೆಗೆ

    ತಂದೆಯ ಹೆಸರು ಬೆಂಗಳೂರಿನ ರಸ್ತೆಯೊಂದಕ್ಕೆ ಇರಬೇಕೆನ್ನುವುದು ನನ್ನ ಆಸೆಯಾಗಿತ್ತು. ಪಾಲಿಕೆಯ ಸದಸ್ಯರಾದ ಕೇಶವಮೂರ್ತಿ ಅವರನ್ನು ಕೇಳಿಕೊಂಡಿದ್ದೆ. ಅವರು ನನ್ನ ಆಶಯಕ್ಕೆ ಸ್ಪಂದಿಸಿದರು ಎಂದು ಸುಧಾ ನರಸಿಂಹರಾಜು ಹೇಳಿದ್ದಾರೆ.

    ಪ್ರಮುಖರು ಹಾಜರು

    ಪ್ರಮುಖರು ಹಾಜರು

    ರಸ್ತೆಗೆ ಹೆಸರಿಡುವ ಕಾರ್ಯಕ್ರಮದಲ್ಲಿ ರಾಮಲಿಂಗ ರೆಡ್ಡಿ, ಕಟ್ಟೆ ಸತ್ಯನಾರಾಯಣ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಪಾಲಿಗೆ ಸದಸ್ಯ ಕೇಶವಮೂರ್ತಿ, ಸುಧಾ ನರಸಿಂಹರಾಜು ಮುಂತಾದವರು ಉಪಸ್ಥಿತರಿದ್ದರು.

    English summary
    One of the road in Mahalakshmipura, Bangalore named after 'Hasya Chakravarthi' Narasimha Raju.
    Saturday, June 14, 2014, 11:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X