For Quick Alerts
  ALLOW NOTIFICATIONS  
  For Daily Alerts

  'ಮಹರ್ಷಿ' 50 ಡೇಸ್ ಸಂಭ್ರಮಾಚರಣೆ ಕಾರ್ಯಕ್ರಮ ರದ್ದು

  |

  ಮಹೇಶ್ ಬಾಬು ನಟನೆಯ 'ಮಹರ್ಷಿ' ಸಿನಿಮಾ ಸೂಪರ್ ಹಿಟ್ ಆಗಿದೆ. ಟಾಲಿವುಡ್ ನ ಈ ವರ್ಷದ ಬೆಸ್ಟ್ ಸಿನಿಮಾಗಳ ಪೈಕಿ ಈ ಚಿತ್ರ ಕೂಡ ಒಂದಾಗಿದೆ. ಸಿನಿಮಾ 50 ದಿನವನ್ನು ಪೂರೈಸಿದೆ.

  50 ಡೇಸ್ ಆದ ಕಾರಣ ಚಿತ್ರತಂಡ ಒಂದು ಅದ್ದೂರಿ ಕಾರ್ಯಕ್ರಮ ಮಾಡಬೇಕು ಎಂದು ನಿರ್ಧಾರ ಮಾಡಿತ್ತು. ನಾಳೆ ಈ ಕಾರ್ಯಕ್ರಮವನ್ನು ಮಾಡಲು ಎಲ್ಲ ತಯಾರಿ ನಡೆದಿತ್ತು. ಆದರೆ, ನಿರ್ದೇಶಕಿ ನಿರ್ಮಾಪಕಿ, ನಟಿ ವಿಜಯ ನಿರ್ಮಲ ಅವರ ನಿಧನದ ಕಾರಣ ಈ ಕಾರ್ಯಕ್ರಮವನ್ನು ಸದ್ಯಕ್ಕೆ ರದ್ದು ಮಾಡಲಾಗಿದೆ.

  ತೆಲುಗು ನಟ ಮಹೇಶ್ ಬಾಬು ಮಲತಾಯಿ ವಿಜಯ ನಿರ್ಮಲಾ ವಿಧಿವಶ

  ಅಂದ್ಹಾಗೆ, ವಿಜಯ ನಿರ್ಮಲಾ ಅವರು ತೆಲುಗು ಸೂಪರ್ ಸ್ಟಾರ್ ಕೃಷ್ಣ ಅವರ ಪತ್ನಿ ಹಾಗೂ ಮಹೇಶ್ ಬಾಬು ಅವರ ಮಲತಾಯಿ. ವಿಜಯ ನಿರ್ಮಲಾ ಕೃಷ್ಣಮೂರ್ತಿ ಎಂಬುವರನ್ನ ವಿವಾಹವಾಗಿದ್ದರು. ಈ ದಂಪತಿಗೆ ನರೇಶ್ ಎಂಬ ಮಗ ಇದ್ದಾನೆ. ನರೇಶ್ ಕೂಡ ಚಿತ್ರರಂಗದಲ್ಲಿ ನಟ. ಕೃಷ್ಣಮೂರ್ತಿ ಅವರಿಂದ ವಿಚ್ಛೇದನ ಪಡೆದ ನಿರ್ಮಲಾ, ಬಳಿಕ ಸೂಪರ್ ಸ್ಟಾರ್ ಕೃಷ್ಣ ಅವರ ಜೊತೆ ಮದುವೆಯಾದರು.

  ವಿಜಯ ನಿರ್ಮಲಾ ಸುಮಾರು 44ಕ್ಕೂ ಅಧಿಕ ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ. ಮಹಿಳೆಯೊಬ್ಬರು ಅತಿ ಹೆಚ್ಚು ಸಿನಿಮಾ ನಿರ್ದೇಶನ ಮಾಡಿರುವ ಕಾರಣ ಇದು 2002ರಲ್ಲಿ ಗಿನ್ನಿಸ್ ದಾಖಲೆಯಾಗಿದೆ.

  ಇನ್ನು, 'ಮಹರ್ಷಿ' ಸಿನಿಮಾ 200 ಸೆಂಟರ್ ಗಳಲ್ಲಿ 50 ದಿನವನ್ನು ಪೂರೈಸಿದೆ. ಮಹೇಶ್ ಬಾಬು, ಪೂಜಾ ಹೆಗ್ಡೆ ಹಾಗೂ ಅಲ್ಲಾರಿ ನರೇಶ್ ಸಿನಿಮಾದಲ್ಲಿ ನಟಿಸಿದ್ದಾರೆ.

  English summary
  Actor Mahesh Babu and Pooja hegde starrer Maharshi's 50 Days celebration event cancelled after actress, director and producer Vijaya Nirmala's death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X