For Quick Alerts
  ALLOW NOTIFICATIONS  
  For Daily Alerts

  ಮ್ಯೂಸಿಯಂ ಸೇರಿತು ರಜನಿಕಾಂತ್ ಬಳಸಿದ ಜೀಪ್

  By Pavithra
  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲಾ' ಸಿನಿಮಾದಲ್ಲಿ ಜೀಪ್ ಅನ್ನು ಬಳಕೆ ಮಾಡಿಕೊಳ್ಳಲಾಗಿದೆ. ಸದ್ಯ ಅದೇ ಜೀಪ್ ಮಹೀಂದ್ರಾ ಕಂಪನಿಯ ಮ್ಯೂಸಿಯಂ ಸೇರಿಕೊಂಡಿದೆ. ಮಹೀಂದ್ರಾ ಕಂಪನಿಯ ಅಧ್ಯಕ್ಷ ಆನಂದ್ ಮಹೀಂದ್ರಾ ಅವರಿಗೆ ಹಿಂದಿನಿಂದಲೂ ಒಂದು ಅಭ್ಯಾಸವಿದೆಯಂತೆ. ಎಲ್ಲಿಯೇ ವಿಶೇಷ ಎನ್ನಿಸುವ ವಾಹನ ಕಂಡರೆ ಅದು ಅವರ ಮ್ಯೂಸಿಯಂ ಸೇರಿಕೊಳ್ಳುತ್ತದೆ.

  ಸದ್ಯ ಈಗ ಕಾಲಾನ ಜೀಪ್ ಮಹೀಂದ್ರಾ ಕಂಪನಿಯ ಮ್ಯೂಸಿಯಂನಲ್ಲಿ ಸ್ಥಾನ ಪಡೆದುಕೊಂಡಿದೆ. ಸದಾ ಟ್ವಿಟ್ಟರ್ ನಲ್ಲಿ ಆಕ್ಟಿವ್ ಆಗಿರುವ ಆನಂದ್ ಮಹೀಂದ್ರಾ ಈ ಬಗ್ಗೆಯೂ ಟ್ವೀಟ್ ಮಾಡಿದ್ದಾರೆ. ಚೆನೈನ ಚಿತ್ರಮಂದಿರದ ಮುಂದೆ ಜೀಪ್ ಅನ್ನು ಕೆಲ ದಿನಗಳು ಪ್ರದರ್ಶನಕ್ಕೆ ಇಟ್ಟಿದ್ದು ಅಭಿಮಾನಿಗಳು ಕಾಲಾನ ಜೀಪ್ ಜೊತೆ ಸೆಲ್ಫಿ ತೆಗೆದುಕೊಳ್ಳಬಹುದು.

  ಕಾಲಾ ಸಿನಿಮಾದ ಪೋಸ್ಟರ್ ನಲ್ಲಿ ಥಾರ್‌ ಎಸ್‌ಯುವಿ ಮೇಲೆ ರಜನಿ ಸ್ಟೈಲಾಗಿ ಕುಳಿತಿರುವುದು ಎಲ್ಲರನ್ನು ಆಕರ್ಷಣೆ ಮಾಡಿದೆ. ಚಿತ್ರ ಆರಂಭದಲ್ಲಿ ಪೋಸ್ಟರ್ ಬಿಡುಗಡೆ ಮಾಡಿದಾಗಲೇ ಆನಂದ್ ಅವರು ಎಸ್ ಯುವಿ ಜೀಪ್ ನಮಗೆ ಬೇಕು ಎನ್ನುವ ಬೇಡಿಕೆ ಇಟ್ಟಿದ್ದರಂತೆ.

  ಸದ್ಯ ಸಿನಿಮಾ ನಿರ್ಮಾಪಕ ಧನುಷ್ ಅದಕ್ಕೆ ಪ್ರತಿಕ್ರಿಯೆ ನೀಡಿ ವಾಹನವನ್ನು ಕೊಟ್ಟಿದ್ದಾರೆ. ಮಹೀಂದ್ರಾ ರೀಸರ್ಚ್‌ವ್ಯಾಲಿಯಲ್ಲಿ ಅದು ಸುರಕ್ಷಿತವಾಗಿದೆ, ಮಹೀಂದ್ರಾ ಕಂಪನಿಯ ಮ್ಯೂಸಿಯಂ ಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ ಅದೇ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಮಾತ್ರ ಅಪರೂಪದ ವಾಹನ ನೋಡುವ ಅವಕಾಶವಿದೆ.

  English summary
  The Mahindra Thar SUV jeep used in kaala cinema is located at the mahindra Museum

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X