For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ 2' ಏಪ್ರಿಲ್ 28 ರಂದೇ ರಿಲೀಸ್ ಮಾಡಲು ಮುಖ್ಯ ಕಾರಣವಿದು!

  By Suneel
  |

  ಭಾರತದ ಬಹು ನಿರೀಕ್ಷಿತ ಸಿನಿಮಾ 'ಬಾಹುಬಲಿ 2' ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಇನ್ನೊಂದು ವಿಶೇಷ ಅಂದ್ರೆ ಬಾಹುಬಲಿ ಮೇನಿಯಾ ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಹೆಚ್ಚಿದೆ. ಅದಕ್ಕೆ ಕಾರಣ 'ಬಾಹುಬಲಿ -ದಿ ಬಿಗಿನ್ನಿಂಗ್' ಚಿತ್ರ ಹುಟ್ಟುಹಾಕಿದ್ದ ಮಿಲಿಯನ್ ಡಾಲರ್ ಪ್ರಶ್ನೆ.[ಬಿಡುಗಡೆಗೂ ಮುನ್ನವೇ ಲೀಕ್ ಆಯ್ತು 'ಬಾಹುಬಲಿ'ಯ ಪಟ್ಟಾಭಿಷೇಕ ದೃಶ್ಯ!]

  ಅದೇನೇ ಇರಲಿ... ಅಂತೂ ನಿರ್ದೇಶಕ ಎಸ್.ಎಸ್.ರಾಜಮೌಳಿ ಯ 5 ವರ್ಷಗಳ ಕನಸಿನ ಕೂಸು 'ಬಾಹುಬಲಿ - ದಿ ಕನ್ ಕ್ಲೂಶನ್' ಚಿತ್ರ ನಾಳೆ(ಏಪ್ರಿಲ್ 28) ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ. ಒಂದು ಕಡೆ ಸಿನಿ ರಸಿಕರಿಗೆ ಚಿತ್ರವನ್ನು ಬಹುಬೇಗ ಕಣ್ತುಂಬಿಕೊಳ್ಳಬೇಕು ಎಂಬ ಕಾತುರ ಹೆಚ್ಚಾಗೆ ಇದೆ. ಆದರೆ ನಿರ್ದೇಶಕ ರಾಜಮೌಳಿ ಏಪ್ರಿಲ್ 28 ರಂದೇ ಚಿತ್ರ ಬಿಡುಗಡೆ ಮಾಡಲು ಬಲವಾದ ಕಾರಣವೊಂದಿದೆ.

  ನಾಳೆ(ಏಪ್ರಿಲ್ 28) ಅಕ್ಷಯ ತೃತೀಯ. ಹಿಂದುಗಳ ಪವಿತ್ರ ದಿನಗಳಲ್ಲಿ ಅತ್ಯಂತ ಪವಿತ್ರವಾದ ದಿನ ಅಕ್ಷಯ ತೃತೀಯ ಎಂಬ ಬಲವಾದ ನಂಬಿಕೆ ಇದೆ. ಈ ದಿವಸ ಯಾವುದೇ ಶುಭ ಕೆಲಸವನ್ನು ಆರಂಭಿಸಿದರೂ ಅಕ್ಷಯವಾಗಿ(ಶುಭವಾಗಿ) ಪರಿಣಮಿಸುವುದು. ಆದ್ದರಿಂದಲೇ ಈ ದಿವಸ ಬಹುತೇಕವಾಗಿ ಹಿಂದುಗಳು ಹೊಸ ಹೊಸ ಉದ್ಯೋಗಗಳನ್ನು ಆರಂಭಿಸುವುದು. ಚಿನ್ನ ಖರೀದಿಸುವುದು, ಭೂಮಿ ಖರೀದಿಸುವ ಕೆಲಸಗಳನ್ನು ಮಾಡುತ್ತಾರೆ. ಅಲ್ಲದೇ ಗೃಹ ಪ್ರವೇಶ, ವಿವಾಹ ಮತ್ತು ಇತರೆ ಶುಭಕಾರ್ಯಗಳಿಗೆ ಸಂಪೂರ್ಣ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ.

  ಅಕ್ಷಯ ತೃತೀಯ ದಿನ ಯಾವುದೇ ಕಾರ್ಯ ಆರಂಭಿಸಿದರು ಉತ್ತಮ ಪ್ರತಿಫಲ ಸಿಗಲಿದೆ ಎಂಬ ನಂಬಿಕೆ 'ಬಾಹುಬಲಿ' ಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರಿಗೂ ಇದೆ. 'ಬಾಹುಬಲಿ - ದಿ ಕನ್ ಕ್ಲೂಶನ್' ಚಿತ್ರಕ್ಕೆ 250 ಕೋಟಿಗೂ ಅಧಿಕ ಬಂಡವಾಳ ಹೂಡಲಾಗಿದೆ. ಭಾರತೀಯ ಸಿನಿಮಾ ರಂಗದ ಅತಿದೊಡ್ಡ ಬಜೆಟ್ ಸಿನಿಮಾ ಇದಾಗಿರುವುದರಿಂದ ನಿರ್ದೇಶಕರು ಸೃಜನಶೀಲತೆ ಜೊತೆಗೆ ದೈವ ಭಕ್ತಿಯನ್ನು ನಂಬಿರುವುದರಿಂದ ಚಿತ್ರವನ್ನು ಅಕ್ಷಯ ತೃತೀಯ ದಿವಸದಂದೇ ಬಿಡುಗಡೆ ಮಾಡುತ್ತಿದ್ದಾರೆ.['ಬಾಹುಬಲಿ-2' ಮೊಟ್ಟ ಮೊದಲ ವಿಮರ್ಶೆ: ಭಾರತಕ್ಕಿಳಿದ ಹಾಲಿವುಡ್.!]

  English summary
  Main Reason to release 'Baahubli -The Conclusion' film on april 28.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X