»   » 'ದರ್ಶನ್-ಸುದೀಪ್' ಬಿರುಕು: 'ಮೆಜೆಸ್ಟಿಕ್' ನಿರ್ಮಾಪಕ ಬಾ.ಮಾ ಹರೀಶ್ ಸ್ಪಷ್ಟನೆ!

'ದರ್ಶನ್-ಸುದೀಪ್' ಬಿರುಕು: 'ಮೆಜೆಸ್ಟಿಕ್' ನಿರ್ಮಾಪಕ ಬಾ.ಮಾ ಹರೀಶ್ ಸ್ಪಷ್ಟನೆ!

Posted By:
Subscribe to Filmibeat Kannada

ಸುದೀಪ್ ಮತ್ತು ದರ್ಶನ್ ನಡುವಿನ ಸ್ನೇಹ ಸಮರಕ್ಕೆ 'ಮೆಜೆಸ್ಟಿಕ್' ಚಿತ್ರವೇ ಅಸಲಿ ಕಾರಣ ಎಂಬುದು ಸದ್ಯದ ಮಟ್ಟಿಗೆ ನಿಜವಾಗಿದೆ.

ಸಂದರ್ಶನವೊಂದರಲ್ಲಿ ಸುದೀಪ್ ಅವರು ಮಾತನಾಡುವಾಗ, 'ಮೆಜೆಸ್ಟಿಕ್' ಚಿತ್ರಕ್ಕೆ ದರ್ಶನ್ ಅವರನ್ನ ನಾನು ಸೂಚಿಸಿದ್ದೆ ಎಂದು ಹೇಳಿರುವುದನ್ನ ಖಂಡಿಸಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚನ ಬಳಿ ಸ್ಪಷ್ಟೀಕರಣ ಕೇಳುತ್ತಿದ್ದಾರೆ. ಇದರಿಂದ ಬೇಸರಗೊಂಡಿರುವ ದಾಸ ಟ್ವಿಟ್ಟರ್ ನಲ್ಲಿ ಕುಚಿಕು ಗೆಳಯನ ವಿರುದ್ಧ ಸಮರ ಸಾರುತ್ತಿದ್ದಾರೆ.['ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!]

ದರ್ಶನ್ ಮತ್ತು ಸುದೀಪ್ ನಡುವಿನ ವಿವಾದ ಬಗ್ಗೆ ಮೆಜೆಸ್ಟಿಕ್ ಚಿತ್ರದ ನಿರ್ಮಾಪಕರ ಬಾ.ಮಾ ಹರೀಶ್ ಟಿವಿ9 ಗೆ ಪ್ರತಿಕ್ರಿಯೆ ನೀಡಿದ್ದು, ಅಭಿಮಾನಿಗಳನ್ನ ಕಾಡ್ತಿದ್ದ ಕುತೂಹಲ, ಗೊಂದಲಗಳಿಗೆ ಒಂದು ಮಟ್ಟಕ್ಕೆ ಬ್ರೇಕ್ ಹಾಕಿದ್ದಾರೆ. ಮುಂದೆ ಓದಿ....

'ಮೆಜೆಸ್ಟಿಕ್' ಮೊದಲು ಸುದೀಪ್ ಮಾಡಬೇಕಿತ್ತು!

''ಮೆಜೆಸ್ಟಿಕ್' ಸಿನಿಮಾ ಮೊದಲು ಮಾಡಬೇಕಿದ್ದಿದ್ದು ಸುದೀಪ್ ಅವರೇ. ಆದ್ರೆ, ಅವರ ಡೇಟ್ಸ್ ಹೊಂದಾಣಿಕೆ ಆಗದೇ ಇದ್ದ ಕಾರಣ ಅವರು ಮಾಡಲು ಸಾಧ್ಯವಾಗಲಿಲ್ಲ.'' ಎಂದು ಬಾ.ಮಾ ಹರೀಶ್ ಸ್ವಷ್ಟಪಡಿಸಿದ್ದಾರೆ.[ದರ್ಶನ್ 'ಮೆಜೆಸ್ಟಿಕ್' ಬಗ್ಗೆ ಸಂದರ್ಶನದಲ್ಲಿ ಸುದೀಪ್ ಹೇಳಿದ್ದೇನು? ಇಲ್ಲಿದೆ ನೋಡಿ]

ದರ್ಶನ್ ಬಗ್ಗೆ ಸುದೀಪ್ ಹೇಳಿದ್ದರು!

''ಮೆಜೆಸ್ಟಿಕ್' ಚಿತ್ರಕ್ಕಾಗಿ ನಟ ದರ್ಶನ್ ಅವರನ್ನ ಸೂಚಿಸಿದ್ದು ಕೂಡ ಸುದೀಪ್ ಅವರೇ. ಈ ಚಿತ್ರದ ಬಗ್ಗೆ ಸುದೀಪ್ ಅವರ ಬಳಿ ಮಾತನಾಡುವಾಗ, ದರ್ಶನ್ ಒಳ್ಳೆ ಹೈಟ್ ಇದ್ದಾನೆ, ಪರ್ಸನಾಲಿಟಿ ಎಲ್ಲ ಚೆನ್ನಾಗಿದೆ, ನೀನಾಸಂನಲ್ಲಿ ಆಕ್ಟಿಂಗ್ ಕಲಿತಿದ್ದಾನೆ ಮಾಡಿ ಎಂದಿದ್ದರು.''

ಸುದೀಪ್ ಸಲಹೆ ಕೊಟ್ಟರು!

'' ಸುದೀಪ್ ಅವರು ಆರ್ಡರ್ ಮಾಡ್ಲಿಲ್ಲ. ಸಪೋರ್ಟ್ ಮಾಡಿದ್ರು. ಆಮೇಲೆ, ಉದಯ್ ಪ್ರಕಾಶ್ ಎಂಬ ನಿರ್ದೇಶಕರ ಮುಖಾಂತರ ದರ್ಶನ್ ಅವರನ್ನ ಸಂರ್ಪಕಿಸಿ, ಮಾತನಾಡಿದೆವು. ಅಂದು ದರ್ಶನ್ ಅವರ ಜೊತೆಯಲ್ಲಿ ಅಣಜಿ ನಾಗರಾಜ್ ಕೂಡ ಬಂದಿದ್ದರು. ''. ಎಂದು ಭಾ.ಮಾ ಹರೀಶ್ [ದರ್ಶನ್ ಗೆ ಟ್ವಿಟ್ಟರ್, ಫೇಸ್ ಬುಕ್ ಬಳಸಲು ಬರಲ್ವಂತೆ! ಟ್ವೀಟ್ ಮಾಡೋದ್ಯಾರು]

ಸುದೀಪ್ ಹೇಳಿದ್ರಲ್ಲಿ ತಪ್ಪಿಲ್ಲ!

''ಸುದೀಪ್ ಅವರು ಹೇಳಿದ್ರಲ್ಲಿ ಯಾವುದೇ ತಪ್ಪೇನು ಇಲ್ಲ. ಅದನ್ನ ಒಳ್ಳೆ ದೃಷ್ಠಿಯಿಂದ ನೋಡಿದ್ರೆ, ಒಳ್ಳೆದು ಕಾಣುತ್ತೆ, ಕೆಟ್ಟ ದೃಷ್ಠಿಯಿಂದ ನೋಡಿದ್ರೆ ಕೆಟ್ಟದ್ದೇ ಕಾಣುತ್ತೆ. ನಾವು ನೋಡೋ ದೃಷ್ಠಿ ಮತ್ತು ಹಾಡೋ ಮಾತುಗಳು ಸರಿಯಾಗಿರಬೇಕು'' ಎಂದು ಬಾ.ಮಾ ಹರೀಶ್ ಸ್ವಷ್ಟಪಡಿಸಿದ್ದಾರೆ.

'ಮೆಜೆಸ್ಟಿಕ್' ಚಿತ್ರದ ವಿವಾದ

'ಮೆಜೆಸ್ಟಿಕ್' ಚಿತ್ರಕ್ಕೆ ದರ್ಶನ್ ನಾಯಕನಾಗಲು, ಸುದೀಪ್ ಸೂಚಿಸಿದ್ದರು ಎಂಬುದನ್ನ ಸಂದರ್ಶನವೊಂದರಲ್ಲಿ ಮಾತನಾಡುವಾಗ ಸುದೀಪ್ ಹೇಳಿದ್ದರು. ಇದಕ್ಕೆ ಕ್ಲಾರಿಟಿ ಕೊಡಿ ಎಂದು ದರ್ಶನ್ ತಮ್ಮ ಟ್ವಿಟ್ಟರ್ ನಲ್ಲಿ ಸುದೀಪ್ ಅವರನ್ನ ಆಗ್ರಹಿಸಿದ್ದಾರೆ. ಈ ಕಾರಣದಿಂದ ಸುದೀಪ್ ಮತ್ತು ದರ್ಶನ್ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ನಾವಿಬ್ಬರೂ ಸ್ನೇಹಿತರಲ್ಲ, ಕಲಾವಿದರಷ್ಟೇ ಎಂದು ದರ್ಶನ್ ಟ್ವೀಟ್ ಮಾಡಿದ್ದರು.[ಬೆಂಕಿ ಹೊತ್ತಿ ಉರಿಯುತ್ತಿದ್ದರೂ, ತುಟಿ ಎರಡು ಮಾಡಲು ಸುದೀಪ್ ರೆಡಿ ಇಲ್ಲ.!]

English summary
Majestic Producer Bha ma Harish Has Clarified About Majestic Movie Controversy Between Darshan and Sudeep.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada