For Quick Alerts
  ALLOW NOTIFICATIONS  
  For Daily Alerts

  ಹೆಣ್ಣುಮಕ್ಕಳ ದಿನಾಚರಣೆಗೆ ಮಗಳಿಗೆ ಶುಭಾಶಯ ತಿಳಿಸಿದ ಮಾಲಾಶ್ರೀ

  |

  ನಿನ್ನೆ (ಭಾನುವಾರ) ಹೆಣ್ಣು ಮಕ್ಕಳ ದಿನಾಚರಣೆ. ಈ ವಿಶೇಷ ದಿನದಂದು ಹಲವಾರು ಸೆಲೆಬ್ರಿಟಿಗಳು ತಮ್ಮ ಹೆಣ್ಣುಮಕ್ಕಳಿಗೆ ಮಗಳ ದಿನಾಚರಣೆ ಶುಭಾಶಯ ತಿಳಿಸಿದ್ದಾರೆ.

  ನಟಿ ಮಾಲಾಶ್ರೀ ಸಹ ತಮ್ಮ ಪ್ರೀತಿಯ ಮಗಳಿಗೆ 'ಮಗಳ ದಿನಾಚರಣೆ' ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಮಗಳ ಕೆಲವು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.

  ಮಾಲಾಶ್ರೀ ಮತ್ತು ಪತಿ ರಾಮು ಹಾಗೂ ಮಗಳು ಅನನ್ಯಾ ಒಟ್ಟಿಗಿರುವ ಚಿತ್ರ ಪ್ರಕಟಿಸಿರುವ ಮಾಲಾಶ್ರಿ. 'ನೀನು ಸದಾ ನನ್ನ ಪುಟ್ಟ ಬೊಂಬೆ, ನನ್ನ ದೇವತೆ, ನನ್ನ ಸರ್ವಸ್ವವೂ ನೀನೆ' ಎಂದು ಬರೆದಿದ್ದಾರೆ ನಟಿ ಮಾಲಾಶ್ರಿ.

  ಸಿನಿಮಾ ಲೋಕಕ್ಕೆ ಎಂಟ್ರಿ ಕೊಡುತ್ತಾರೆಯೇ ಅನನ್ಯಾ

  ಸಿನಿಮಾ ಲೋಕಕ್ಕೆ ಎಂಟ್ರಿ ಕೊಡುತ್ತಾರೆಯೇ ಅನನ್ಯಾ

  ನಟಿ ಮಾಲಾಶ್ರೀ-ರಾಮು ಪುತ್ರಿ ಅನನ್ಯ ಸಿನಿಮಾ ನಟಿಯಾಗಿ ಎಂಟ್ರಿ ಕೊಡುತ್ತಾರೆ ಎನ್ನಲಾಗಿತ್ತು. ಆದರೆ ಮಾಲಾಶ್ರೀ ಅಥವಾ ರಾಮು ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಬಿಶಪ್‌ ಕಾಟನ್ ಗರ್ಲ್ಸ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದ್ದಾರೆ.

  ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ

  ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ

  ಮಾಲಾಶ್ರೀ ಮಾತ್ರವಲ್ಲ ಅನೇಕ ಸೆಲೆಬ್ರಿಟಿಗಳು ಮಗಳ ದಿನಾಚರಣೆಗೆ ತಮ್ಮ-ತಮ್ಮ ಹೆಣ್ಣು ಮಕ್ಕಳ ಚಿತ್ರ ಪ್ರಕಟಿಸಿ ಶುಭಾಶಯಗಳನ್ನು ತಿಳಿಸಿದ್ದಾರೆ. ಅಮಿತಾಬ್ ಬಚ್ಚನ್ ತಮ್ಮ ಪುತ್ರಿ ಶ್ವೇತಾ ಜೊತೆಗಿರುವ ಚಿತ್ರ ಪ್ರಕಟಿಸಿದ್ದಾರೆ.

  ಅಕ್ಷಯ್ ಕುಮಾರ್ ಪುತ್ರಿ ನಿತಾರಾ

  ಅಕ್ಷಯ್ ಕುಮಾರ್ ಪುತ್ರಿ ನಿತಾರಾ

  ನಟ ಅಕ್ಷಯ್ ಕುಮಾರ್, ತಮ್ಮ ಮಗ ನಿತಾರಾ ಜೊತೆಗೆ ಆಡುತ್ತಿರುವ ಚಿತ್ರ ಪ್ರಕಟಿಸಿ, 'ನಿನ್ನನ್ನು ಎಷ್ಟು ಪ್ರೀತಿಸುತ್ತೇನೆಂದರೆ ಭೂಮಿಯಿಂದ ಚಂದ್ರ ಹಾಗೂ ಮರಳಿ ಚಂದ್ರನಿಗೆ ಭೂಮಿಗೆ ಬರುವ ಅಂತರದಷ್ಟು' ಎಂದು ಬರೆದಿದ್ದಾರೆ.

  ಶಿಲ್ಪಾ ಶೆಟ್ಟಿ ಮಗಳೊಂದಿಗೆ ಚಿತ್ರ

  ಶಿಲ್ಪಾ ಶೆಟ್ಟಿ ಮಗಳೊಂದಿಗೆ ಚಿತ್ರ

  ಶಿಲ್ಪಾ ಶೆಟ್ಟಿ ಸಹ ತಮ್ಮ ಮಗಳು ಶಮಿಶಾ ಜೊತೆಗೆ ಚಿತ್ರ ಪ್ರಕಟಿಸಿದ್ದು, 'ಯಾರು ಹೇಳಿದ್ದು ಅದ್ಭುತಗಳು ನಡೆಯುವುದಿಲ್ಲವೆಂದು, ನಿನ್ನನ್ನು ಕೈಯಲ್ಲಿ ಹಿಡಿದಾಗ ಅದ್ಭುತವೇ ನಡೆಯಿತು. ಅದು ನನ್ನ ಜೀವನದ ಅತ್ಯದ್ಭುತ ದಿನ' ಎಂದಿದ್ದಾರೆ ಶಿಲ್ಪಾ ಶೆಟ್ಟಿ.

  ಜೊತೆ ಜೊತೆಯಲಿ ಮೇಘ ಶೆಟ್ಟಿಗೆ ಬಂತು ಬಂಪರ್ ಆಫರ್ | Filmibeat Kannada
  ನಟಿ ಅಜಯ್ ದೇವಗನ್ ಕಾಜೊಲ್ ದಂಪತಿ ಪೋಸ್ಟ್

  ನಟಿ ಅಜಯ್ ದೇವಗನ್ ಕಾಜೊಲ್ ದಂಪತಿ ಪೋಸ್ಟ್

  ನಟ ಅಜಯ್ ದೇವಗನ್ ಹಾಗೂ ಕಾಜೊಲ್ ಪತ್ನಿ ಸಹ ಮಗಳ ದಿನಾಚರಣೆ ತಮ್ಮ ಮುದ್ದು ಮಗಳು ನೈಸಾ ಳ ಬಗ್ಗೆ ಪೋಸ್ಟ್ ಹಾಕಿದ್ದಾರೆ. ನನ್ನ ಮಗಳು ನನ್ನ ಮೊದಲ ವಿಮರ್ಶಕಿ, ನನ್ನ ಬಲಹೀನತೆ ಮತ್ತು ಬಲ, ಆಕೆ ಈತ ತರುಣಿ ಆದರೆ ನನಗೆ ಮತ್ತು ಕಾಜೊಲ್‌ಗೆ ಈಗಲೂ ಆಕೆ ಮುದ್ದು ಪುಟಾಣಿ ಎಂದಿದ್ದಾರೆ ಅಜಯ್ ದೇವಗನ್.

  English summary
  Actress Malashree and many other stars celebrated daughter's day. Many posted their daughter's photo on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X