For Quick Alerts
  ALLOW NOTIFICATIONS  
  For Daily Alerts

  20 ವರ್ಷಗಳ ಹಿಂದಿನ ಆ ನೆನಪು ಹಂಚಿಕೊಂಡ ಮಾಲಾಶ್ರೀ

  |

  ಸ್ಯಾಂಡಲ್ ವುಡ್ ನ ಕನಸಿನಿ ರಾಣಿ ಮಾಲಾಶ್ರೀ 20 ವರ್ಷಗಳ ಹಿಂದಿನ ಮಧುರ ನೆನಪೊಂದನ್ನ ಹಂಚಿಕೊಂಡಿದ್ದಾರೆ. ಅದು ಯಾವ ನೆನಪು ಅಂದರೆ 20 ವರ್ಷಗಳ ಹಿಂದೆ ಸೆಟ್ಟೇರಿದ್ದ ಸೂಪರ್ ಹಿಟ್ 'ಎಕೆ 47' ಚಿತ್ರದ ಮುಹೂರ್ತ ಸಮಯವನ್ನು ನೆನೆದು ಸಂತಸ ವ್ಯಕ್ತಪಡಿಸಿದ್ದಾರೆ.

  ಮಾಲಾಶ್ರೀ ಪತಿ ರಾಮು ಅವರ ನಿರ್ಮಾಣದಲ್ಲಿ ಮೂಡಿಬಂದಿದ್ದ 'ಎಕೆ 47' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ನಾಯಕನಾಗಿ ಮಿಂಚ್ಚಿದ್ದರು. ವಿಶೇಷ ಅಂದರೆ ಈ ಸಿನಿಮಾ ಸೆಂಚುರಿ ಸ್ಟಾರ್ ಅಭಿನಯದ 50ನೇ ಸಿನಿಮಾವಾಗಿತ್ತು. ಹಾಗಾಗಿ ಅದ್ಧೂರಿಯಾಗಿ ಚಿತ್ರದ ಮುಹೂರ್ತವನ್ನು ಮಾಡಲಾಗಿತ್ತು.

  ವಿಶೇಷ ವ್ಯಕ್ತಿಗಳಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ 'ಕನಸಿನ ರಾಣಿ', ಯಾಕೆ?ವಿಶೇಷ ವ್ಯಕ್ತಿಗಳಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ 'ಕನಸಿನ ರಾಣಿ', ಯಾಕೆ?

  ಸದ್ಯ ಮಾಲಾಶ್ರೀ ಅಪ್ ಲೋಡ್ ಮಾಡಿರುವ ಫೋಟೋದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಉಪೇಂದ್ರ, ರಮೇಶ್ ಅರವಿಂದ್, ರವಿಚಂದ್ರನ್ ಮತ್ತು ಶಿವಣ್ಣ ಜೊತೆಗೆ ನಿರ್ಮಾಪಕ ರಾಮು ಮತ್ತು ಮಾಲಾಶ್ರೀ ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಅಪರೂಪದ ಫೋಟೋವನ್ನು ಹಂಚಿಕೊಂಡ ಮಾಲಾಶ್ರೀ 'ವಾವ್' ಅಂತ ಕ್ಯಾಪ್ಷನ್ ಹಾಕಿದ್ದಾರೆ.

  ಇದರ ಜೊತೆಗೆ ತೆಲುಗಿನಲ್ಲೂ ಸೆಟ್ಟೇರಿದ್ದ ಎಕೆ 47 ಸಿನಿಮಾದ ಮುಹೂರ್ತದ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ತೆಲುಗಿನ ಲೆಜೆಂಡ್ಸ್ ಎಲ್ಲಾ ಈ ಒಂದೇ ಪೋಟೋದಲ್ಲಿ ಸೆರೆಯಾಗಿದ್ದಾರೆ. ರಾಘವೇಂದ್ರ ರಾವ್, ರಾಮ ನಾಯ್ಡು ಸೇರಿದಂತೆ ಅನೇಕ ಖ್ಯಾತ ನಟರು ಇರುವ ಫೋಟೋ ಹಾಕಿ 'ಮರೆಯಲಾಗದ ಕ್ಷಣ' ಎಂದು ಹೇಳಿಕೊಂಡಿದ್ದಾರೆ ಕನಸಿನರಾಣಿ.

  ಎಕೆ 47 ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ರಿಲೀಸ್ ಆಗಿತ್ತು. ಈ ಎರಡೂ ಭಾಷೆಗೂ ನಿರ್ಮಾಪಕ ರಾಮು ಬಂಡವಾಳ ಹೂಡಿದ್ದರು. 1999ರಲ್ಲಿ ರಿಲೀಸ್ ಆಗಿದ್ದ ಎಕೆ 47 ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕನಾಗಿ ಮಿಂಚಿದ್ರೆ ಬಾಲಿವುಡ್ ನ ಖ್ಯಾತ ನಟ ಓಂ ಪುರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  English summary
  kannada actress Malashree shared a unforgettable moments to social media. she has shared a kannada super hit movie 'AK 47' muhurtha photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X