For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ಸುಂದರಿಯರು; ಅಪರೂಪದ ಫೋಟೋ ಹಂಚಿಕೊಂಡ ಮಾಲಾಶ್ರೀ, ಶ್ರುತಿ

  |

  ಒಂದು ಕಾಲದಲ್ಲಿ ಚಂದನವನವನ್ನು ಆಳಿದ ಸುಂದರಿಯರು. ಚಿತ್ರ ಪ್ರೇಕ್ಷಕರ ನಿದ್ದೆ ಕದ್ದ ಚೋರಿಯರಿವರು. ದಕ್ಷಿಣ ಭಾರತದ ಸಿನಿಮಾರಂಗದ ಪ್ರಸಿದ್ಧ ನಟಿಯರು ಒಂದೇ ಫ್ರೇಮಿನಲ್ಲಿ ಸೆರೆಯಾಗಿರುವ ಸುಂದರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಹೌದು, 90ರ ದಶಕದಲ್ಲಿ ಸ್ಯಾಂಡಲ್ ವುಡ್ ಸಿನಿಮಾರಂಗದಲ್ಲಿ ಸ್ಟಾರ್ ನಟಿಯರಾಗಿ ಮೆರೆದ ಮಾಲಾಶ್ರೀ, ಶ್ರುತಿ, ಸಿತಾರಾ, ಶುಭಶ್ರೀ ಅವರು ನಟಿ ಜಯಂತಿ ಜೊತೆ ಕ್ಯಾಮರಾಗೆ ಪೊಸ್ ನೀಡುತ್ತಿರುವ ಫೋಟೋ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಕಾರ್ಯಕ್ರಮವೊಂದರಲ್ಲಿ ಹಿರಿಯ ನಟಿ ಜಯಂತಿ ಅವರಿಗೆ ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸುತ್ತಿರುವ ಅಪರೂಪದ ಕ್ಷಣವದು.

  ಒಂದೇ ವರ್ಷದಲ್ಲಿ ಬಿಡುಗಡೆಯಾಗಿತ್ತು ಮಾಲಾಶ್ರೀ ಅಭಿನಯದ 19 ಸಿನಿಮಾಗಳು! ಗೆದ್ದಿದ್ದೆಷ್ಟು..ಸೋತಿದ್ದೆಷ್ಟು?ಒಂದೇ ವರ್ಷದಲ್ಲಿ ಬಿಡುಗಡೆಯಾಗಿತ್ತು ಮಾಲಾಶ್ರೀ ಅಭಿನಯದ 19 ಸಿನಿಮಾಗಳು! ಗೆದ್ದಿದ್ದೆಷ್ಟು..ಸೋತಿದ್ದೆಷ್ಟು?

  ಮಾಲಾಶ್ರೀ, ಜಯಂತಿ, ಸಿತಾರಾ, ಮಾಲಾಶ್ರೀ ಸಹೋದರಿ ಶುಭಶ್ರೀ ಮತ್ತು ಶ್ರುತಿ ಎಲ್ಲರೂ ಒಂದೆಡೆ ಒಟ್ಟಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಅಪರೂಪದ ಫೋಟೋವನ್ನು ನಟಿ ಶ್ರುತಿ ಮತ್ತು ಮಾಲಾಶ್ರೀ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

  ನಟಿ ಶ್ರುತಿ ಈ ಫೋಟೋ ಶೇರ್ ಮಾಡಿ, 'ಈ ಅಪರೂಪದ ಫೋಟೋ ಕಳುಹಿಸಿದ ಸಿನಿಮಾ ಛಾಯಾಗ್ರಾಹಕ ಡಿಸಿ ನಾಗೇಶ್ ಅವರಿಗೆ ಧನ್ಯವಾದಗಳು' ಎಂದು ಬರೆದುಕೊಂಡು ಚಿತ್ರದಲ್ಲಿರುವವರು ಯಾರು ಎಂದು ಬರೆದುಕೊಂಡಿದ್ದಾರೆ.

  ಇನ್ನು ಇದೇ ಫೋಟೋವನ್ನು ನಟಿ ಮಾಲಾಶ್ರೀ ಅವರು ಸಹ ಹಂಚಿಕೊಂಡು, ಸುಂದರ ನೆನಪುಗಳು ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೆ ಹರಿದುಬರುತ್ತಿದೆ. ಅಭಿಮಾನಿಗಳು ಲೈಕ್ಸ್ ಒತ್ತಿ ಕಾಮೆಂಟ್ ಮಾಡುತ್ತಿದ್ದಾರೆ.

  Recommended Video

  ಧ್ರುವ ಸರ್ಜಾಗೆ ನಿಜಕ್ಕೂ ಮೈಲೇಜ್ ಕೊಡುತ್ತಾ ಪೊಗರು | Fimibeat Kannada

  ಒಂದೇ ಫ್ರೇಮಿನಲ್ಲಿ ಸೆರೆಯಾಗಿರುವ ಈ ನಟಿಯರಲ್ಲಿ ಶುಭಶ್ರೀ ಅವರನ್ನು ಹೊರತು ಪಡಿಸಿ ಉಳಿದೆಲ್ಲಾ ನಟಿಯರು ಇಂದಿಗೂ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ನಟಿ ಮಾಲಾಶ್ರೀ ಮತ್ತು ಶ್ರುತಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇನ್ನೂ ಸಿತಾರಾ ಸಹ ಬೇರೆ ಬೇರೆ ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಶುಭಶ್ರೀ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಲ್ಲ.

  English summary
  Kannada senior Actress Malashri and Shruthi share rare photo with Actress Jayanthi, Sitara And Shubhashree.
  Friday, January 22, 2021, 9:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X