»   » ಕೊಬ್ರಿ ಮಂಜು-ಇಮ್ರಾನ್ ವಿರುದ್ಧ ಗುಡುಗಿದ ಮಾಲಾಶ್ರೀ ಪತಿ ರಾಮು!

ಕೊಬ್ರಿ ಮಂಜು-ಇಮ್ರಾನ್ ವಿರುದ್ಧ ಗುಡುಗಿದ ಮಾಲಾಶ್ರೀ ಪತಿ ರಾಮು!

Posted By:
Subscribe to Filmibeat Kannada

ತಮ್ಮ ಬ್ಯಾನರ್ ನ ಯಾವುದೇ ಚಿತ್ರದ ಪ್ರೆಸ್ ಮೀಟ್ ಆಗಲಿ, ಇದುವರೆಗೂ ಪತ್ರಿಕಾ ಹಾಗೂ ಮಾಧ್ಯಮಗಳ ಮುಂದೆ ತುಟಿ ಎರಡು ಮಾಡದ ನಿರ್ಮಾಪಕ ರಾಮು, ಇವತ್ತು ಒಂದು ಗಂಟೆಗೂ ಹೆಚ್ಚು ಕಾಲ ಪತ್ನಿ ಮಾಲಾಶ್ರೀ ಪರ ವಹಿಸಿಕೊಂಡು ಸುದ್ದಿಗೋಷ್ಠಿ ನಡೆಸಿದರು. ನೃತ್ಯ ಸಂಯೋಜಕ ಕಮ್ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹಾಗೂ ನಿರ್ಮಾಪಕ ಕೆ.ಮಂಜು ವಿರುದ್ಧ ನಿರ್ಮಾಪಕ ರಾಮು ಗುಡುಗಿದರು.

ನಟಿ ಮಾಲಾಶ್ರೀ ರವರಿಗೆ ಕೆ.ಮಂಜು ಹಾಗೂ 'ಉಪ್ಪು ಹುಳಿ ಖಾರ' ಚಿತ್ರದ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಮಾಡಿರುವ ಅವಮಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಿರ್ಮಾಪಕ ರಾಮು ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. [ತುರ್ತು ಸುದ್ದಿಗೋಷ್ಠಿ ಕರೆದು ನಟಿ ಮಾಲಾಶ್ರೀ ಕಣ್ಣೀರಿಟ್ಟಿದ್ದು ಯಾಕೆ?]

ನಿರ್ಮಾಪಕ ಕೆ.ಮಂಜು ಹಾಗೂ ನಿರ್ದೇಶಕ ಇಮ್ರಾನ್ ಸರ್ದಾರಿಯಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ನಟಿ ಮಾಲಾಶ್ರೀ ಜೊತೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ರಾಮು ತಿಳಿಸಿದರು. [ಕೆ.ಮಂಜು, ಇಮ್ರಾನ್ ಏಟಿಗೆ ತಿರುಗೇಟು ಕೊಡಲು ಮಾಲಾಶ್ರೀ ತಯಾರು!]

ಬೆಂಗಳೂರಿನ ಗಾಂಧಿನಗರದಲ್ಲಿರುವ ಸಿಲ್ವರ್ ಸ್ಟಾರ್ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆ.ಮಂಜು ಹಾಗೂ ಇಮ್ರಾನ್ ವಿರುದ್ಧ ರಾಮು ಏನೆಲ್ಲಾ ಹೇಳಿದರು ಎಂಬುದನ್ನ ತಿಳಿಯಲು ಕೆಳಗಿರುವ ಸ್ಲೈಡ್ ಗಳಲ್ಲಿ, ಅವರ ಮಾತುಗಳಲ್ಲೇ ಓದಿರಿ.....

ಕೆ.ಮಂಜು ನಿರ್ಮಾಪಕ ಅಲ್ಲ ಅಂತ ಗೊತ್ತಿರ್ಲಿಲ್ಲ!

''ಉಪ್ಪು ಹುಳಿ ಖಾರ' ಚಿತ್ರಕ್ಕೆ ಕೆ.ಮಂಜು ನಿರ್ಮಾಪಕ ಅಂತ ಅಂದುಕೊಂಡಿದ್ವಿ. ಆದ್ರೆ, ಮುಹೂರ್ತ ಸಮಾರಂಭದಲ್ಲಿ ಸುಧಾಮೂರ್ತಿ ಅವರೇ ಪ್ರೊಡ್ಯೂಸರ್ ತರಹ ನಡೆದುಕೊಂಡಿದ್ದಾರೆ'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ [ಮಾಲಾಶ್ರೀ 'ಉಪ್ಪು ಹುಳಿ ಖಾರ'ದ 'ಕಹಿ' ಸತ್ಯ ಬಿಚ್ಚಿಟ್ಟ ಇಮ್ರಾನ್.!]

ಟೈಮ್ ಸೆನ್ಸ್ ಇರಬೇಕು ಅಂತ ನಾನೇ ಸೂಚಿಸಿದ್ದೆ!

''ಟೈಮ್ ಗೆ ಸರಿಯಾಗಿ ಶೂಟಿಂಗ್ ಗೆ ಹಾಜರಾಗುವಂತೆ ಮಾಲಾಶ್ರೀಗೆ ನಾನೇ ಸೂಚಿಸಿದ್ದೆ. 10 ಗಂಟೆಗೆ ಸ್ಪಾಟ್ ನಲ್ಲಿ ಇರುತ್ತೇನೆ ಅಂತ ಮಾಲಾಶ್ರೀ ಇಮ್ರಾನ್ ಗೆ ಹೇಳಿದ್ದಾರೆ'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ ['ನಾನೇನು ಮಾಲಾಶ್ರೀ ಮನೆ ಕೆಲಸದವನಾ' ಎಂದ ಕೊಬ್ರಿ ಮಂಜು.!]

ಮೊದಲನೇ ದಿನ ಶೂಟಿಂಗ್ ತಡವಾಗಲು ಇಮ್ರಾನ್ ಪತ್ನಿ ಕಾರಣ!

''ಮೊದಲನೇ ದಿನ 10 ಗಂಟೆಗೆ ಸರಿಯಾಗಿ ಶೂಟಿಂಗ್ ಸ್ಪಾಟ್ ನಲ್ಲಿ ಮಾಲಾಶ್ರೀ ಇದ್ದಾರೆ. 'ಉಪ್ಪು ಹುಳಿ ಖಾರ' ಸಿನಿಮಾಗೆ ಇಮ್ರಾನ್ ಸರ್ದಾರಿಯಾ ಹೆಂಡತಿ ಕಾಸ್ಟ್ಯೂಮ್ ಡಿಸೈನರ್. ಕೆಲವು ಕಾಸ್ಟ್ಯೂಮ್ ಗಳು ಇನ್ನೂ ಬಂದಿಲ್ಲ ಎಂಬ ಕಾರಣಕ್ಕೆ ಎರಡು ಗಂಟೆ ಶೂಟಿಂಗ್ ತಡವಾಗಿದೆ. ನಿನ್ನೆ ಪ್ರೆಸ್ ಮೀಟ್ ನಲ್ಲಿ ಇಮ್ರಾನ್ ಸರ್ದಾರಿಯಾ ಹೇಳುವಂತೆ ಮೊದಲ ದಿನ ಮಾಲಾಶ್ರೀ ಲೇಟ್ ಆಗಿ ಹೋಗಿಲ್ಲ'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ

ಪತ್ನಿಗೆ ಇಮ್ರಾನ್ ಬೈದಿದ್ರು!

''ಉಪ್ಪು ಹುಳಿ ಖಾರ' ಚಿತ್ರದ ಶೂಟಿಂಗ್ ಯೂನಿಟ್ ನವರು ಹೇಳುವ ಹಾಗೆ, ಇಮ್ರಾನ್ ಅವರು ಅವರ ಹೆಂಡತಿಗೆ ಬಾಯಿಗೆ ಬಂದಂತೆ ಬೈದರು. ಆಮೇಲೆ ಲೇಟ್ ಆಗಿ ಶೂಟಿಂಗ್ ಶುರು ಮಾಡಿದರು'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ [ಮಾಲಾಶ್ರೀ ಆಪಾದನೆಗಳಿಗೆ ಉತ್ತರಿಸಲು ಕೆ.ಮಂಜು ಸಿದ್ಧ.!]

ಎರಡನೇ ದಿನ ಲೇಟ್ ಆಗಿದ್ದು ನಿಜ!

''ಎರಡನೇ ದಿನ ಮಾಲಾಶ್ರೀಗೆ ಮೈಗ್ರೇನ್ ಇತ್ತು. ಡಾಕ್ಟರ್ ಹತ್ರ ಮಾತನಾಡಿ ಮಾತ್ರೆ ತೆಗೆದುಕೊಂಡ ಮೇಲೆ ಎರಡು ಗಂಟೆ ರೆಸ್ಟ್ ಮಾಡಿ ಅಂತ ಹೇಳಿದರು. ಮಾಲಾಶ್ರೀ ಇಮ್ರಾನ್ ಗೆ ಫೋನ್ ಮಾಡಿ 12.30ಗೆ ಬರ್ತೀನಿ ಅಂತ ಹೇಳಿದ್ದಾರೆ. ಅಲ್ಲಿಗೆ ಹೋದಮೇಲೆ, ಶೂಟಿಂಗ್ ಮಾಡಲ್ಲ ಅಂತ ವಾಪಸ್ ಕಳುಹಿಸಿದ್ದಾರೆ'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ

ಮೂರನೇ ದಿನ ಮೆಸೇಜ್ ಬಂದಿದೆ

''ಮೂರನೇ ದಿನ ಇಮ್ರಾನ್ ಕಡೆಯಿಂದ ಮೆಸೇಜ್ ಬಂದಿದೆ. ಮೆಸೇಜ್ ನೋಡಿ ಮಾಲಾಶ್ರೀ ಕುಸಿದು ಬಿದ್ದು ಅಳುತ್ತಿದ್ದರು'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ [ಮಾಲಾಶ್ರೀ ನಟನೆ ಬಗ್ಗೆ ಅಂಬಿ, ಶ್ರುತಿ, ಉಮಾಶ್ರೀ ಮಾಡಿದ ಕಾಮೆಂಟ್ ಏನು?]

ಯಾರಿಗೆ ದುಡ್ಡು ವಾಪಸ್ ಕೊಡ್ಬೇಕು?

''ಕೆ.ಮಂಜು ದುಡ್ಡು ವಾಪಸ್ ಕೊಡುವಂತೆ ಹೇಳಿದ್ದಾರೆ ಅಂತ ಇಮ್ರಾನ್ ಸರ್ದಾರಿಯಾ ಮೆಸೇಜ್ ಕಳುಹಿಸಿದ್ದಾರೆ. 'ಉಪ್ಪು ಹುಳಿ ಖಾರ' ಚಿತ್ರಕ್ಕೆ ನಾನು ನಿರ್ಮಾಪಕ ಅಲ್ಲ ಅಂತ ಒಮ್ಮೆ ಕೆ.ಮಂಜು ಹೇಳುತ್ತಾರೆ. ಇನ್ನೊಮ್ಮೆ ಇನ್ ಕಮ್ ಟ್ಯಾಕ್ಸ್ ಸಮಸ್ಯೆ ಇರುವ ಕಾರಣ ಬೇನಾಮಿ ಹೆಸರಲ್ಲಿ ನಾನೇ ನಿರ್ಮಾಣ ಮಾಡುತ್ತಿದ್ದೇನೆ ಎನ್ನುತ್ತಾರೆ. ಮತ್ತೊಮ್ಮೆ ರಮೇಶ್ ರೆಡ್ಡಿ ಪ್ರೊಡ್ಯೂಸರ್ ಎನ್ನುತ್ತಾರೆ. ಹೀಗಿರುವಾಗ, ನಾವು ಯಾರಿಗೆ ದುಡ್ಡು ವಾಪಸ್ ಕೊಡ್ಬೇಕು?'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ

ನಷ್ಟ ಆಗಿದ್ರೆ ಭರಿಸಲು ಸಿದ್ಧ

''ನಮ್ಮಿಂದ ದುಡ್ಡು ವೇಸ್ಟ್ ಆಗಿದೆ ಅಂದ್ರೆ ನಾವು ಭರಿಸಲು ಸಿದ್ಧ. ನಾನೂ ಚಿತ್ರ ನಿರ್ಮಾಪಕ. ವೇಸ್ಟೇಜ್ ಅಂತಲೇ ಒಂದಷ್ಟು ದುಡ್ಡು ಖರ್ಚಾಗುತ್ತೆ. ಎಲ್ಲಾ ಕಷ್ಟ ಸುಖ ಅನುಭವಿಸುವವನೇ ನಿರ್ಮಾಪಕ'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ

ನಿರ್ದೇಶನ ಮಾಡ್ಬೇಕು ಅಂದ್ರೆ ಡ್ಯಾನ್ಸ್ ಬಿಡಬೇಕು!

''ಇಮ್ರಾನ್ ಸರ್ದಾರಿಯಾ ಡ್ಯಾನ್ಸ್ ನಲ್ಲಿ ಬಿಜಿಯಿದ್ದಾರೆ. ನಿರ್ದೇಶನ ಒಂದು ಜವಾಬ್ದಾರಿಯುತ ಕೆಲಸ. ನಿರ್ದೇಶನ ಮಾಡುವಾಗ ಡ್ಯಾನ್ಸ್ ಬಿಟ್ಟು ಡೈರೆಕ್ಷನ್ ಮಾಡ್ಬೇಕು. ಅವರಿಗೆ ಬೇರೆ ಕಮಿಟ್ಮೆಂಟ್ ಇರುವ ಕಾರಣ ಮಾಲಾಶ್ರೀ ರವರನ್ನ ಕಾರಣವಿಲ್ಲದೇ ಬ್ಲೇಮ್ ಮಾಡುತ್ತಿದ್ದಾರೆ'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ

ಮಾಲಾಶ್ರೀ ಒಂದೇ ಟೇಕ್ ನಲ್ಲಿ ಅಭಿನಯಿಸುತ್ತಾರೆ!

''ಸ್ಕ್ರಿಪ್ಟ್ ಕೊಟ್ಟಿದ್ದೆ, ರಿಹರ್ಸಲ್ ಮಾಡಿಲ್ಲ ಅಂತಾರೆ. ಮಾಲಾಶ್ರೀ ಅಂತಹ ನಟಿಗೆ ಒಮ್ಮೆ ಹೇಳಿದರೆ ಸಾಕು, ಒಂದೇ ಟೇಕ್ ನಲ್ಲಿ ಓಕೆ ಮಾಡುತ್ತಾರೆ'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ

ರೌಡಿಸಂ ಮಾಡುತ್ತಾರೆ!

''ರಮೇಶ್ ರೆಡ್ಡಿ ಯಾರು ಅನ್ನೋದು ನಮಗೆ ಗೊತ್ತಿಲ್ಲ. ಇದರಲ್ಲಿ ಸುಧಾ ಮೂರ್ತಿ ಪಾತ್ರ ಏನು ಅನ್ನೋದು ನಮಗೆ ಗೊತ್ತಾಗುತ್ತಿಲ್ಲ. ಪ್ರೆಸ್ ಮೀಟ್ ನಲ್ಲಿ ಹೆದರಿಸಿ ಮಾತನಾಡುವ ಧಾಟಿಯಲ್ಲಿ ರೌಡಿಸಂ ತರಹ ಮಾತನಾಡುತ್ತಾರೆ. ಆರ್ಟಿಸ್ಟ್ ಗಳು ತುಂಬಾ ಸೂಕ್ಷ್ಮ. ಅವರಿಗೆ ಹೆದರಿಸಿ ಮಾತನಾಡಿದರೆ, ಆಕ್ಟ್ ಮಾಡುವುದಕ್ಕೆ ಬರಲ್ಲ. ಅಳುತ್ತಾರೆ'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ

Don't talk stupidly ಅಂತ ಹೇಳಿದ್ದು.!

ಮಾಲಾಶ್ರೀ ಅವರು ಹೇಳಿದ್ದು, ''Don't talk stupidly'' ಅಂತ. ಫೋನ್ ನಲ್ಲಿ ಕೆ.ಮಂಜು ಏನು ಮಾತನಾಡಿದ್ದಾರೋ, ಅದಕ್ಕೆ ಮಾಲಾಶ್ರೀ ಹಾಗೆ ರಿಪ್ಲೈ ಮಾಡಿದ್ದಾರೆ. ಆ ಕಡೆಯಿಂದ ಕೆ.ಮಂಜು ಏಕವಚನದಲ್ಲಿ ಮಾತನಾಡಿದ್ದಕ್ಕೆ, ಮಾಲಾಶ್ರೀ ಕೂಡ ಹಾಗೆ ಅಂದಿದ್ದಾರೆ. ಹಾಗಾದ್ರೆ, 'ಏಯ್, ಕೊಬ್ರಿ ಮಂಜು ಕಳುಹಿಸೋ ದುಡ್ಡು' ಅಂತ ಮೆಸೇಜ್ ಮಾಡ್ಬೇಕಿತ್ತು. 'ಮಂಜು ಜಿ, ಪ್ಲೀಸ್ ದುಡ್ಡು ಕಳುಹಿಸಿ' ಅಂತ ಯಾಕೆ ಮೆಸೇಜ್ ಮಾಡಿದ್ರು?'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ

ಮೊದಲು ಅರ್ಥ ತಿಳಿದುಕೊಳ್ಳಲಿ!

''Don't talk stupidly'' ಅಂದ್ರೆ 'ಆ ತರಹ ಮಾತನಾಡಬೇಡಿ'' ಎಂದು ಅರ್ಧ. ಅದನ್ನ ಮೊದಲು ಕೆ.ಮಂಜು ಅರ್ಥಮಾಡಿಕೊಳ್ಳಲಿ'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ

ಜವಾಬ್ದಾರಿ ಇರುವ ನಿರ್ಮಾಪಕ ಮಾಡುವ ಕೆಲಸ ಇದಾ?

''ಮೂರು ನಾಲ್ಕು ದಿನದಿಂದ ಮಾಲಾಶ್ರೀ ಕಣ್ಣೀರು ಹಾಕುತ್ತಿದ್ದಾರೆ. ಅದನ್ನ ಅಣಕು ಮಾಡಿ ಕೆ.ಮಂಜು ತೋರಿಸುತ್ತಾರೆ. ಇದು ಜವಾಬ್ದಾರಿ ನಿರ್ಮಾಪಕ ನಡೆದುಕೊಳ್ಳುವ ರೀತಿನಾ?'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ

ಅವಮಾನ ಮಾಡುವ ಕೆಲಸ ಮಾತ್ರ!

''ಮಾಲಾಶ್ರೀಗೆ ಅವಮಾನ ಮಾಡುವುದಕ್ಕೆ ಹೀಗೆಲ್ಲಾ ಮಾಡುತ್ತಿದ್ದಾರೆ ಅಷ್ಟೆ'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ

ಇಮ್ರಾನ್ ಫೋರ್ಜರಿ ಮಾಡಿದ್ದಾರೆ!

''ಉಪ್ಪು ಹುಳಿ ಖಾರ' ಚಿತ್ರದ ಕಥೆಯನ್ನ ನಾಲ್ಕು ವರ್ಷದ ಹಿಂದೆ ಹೇಳಿದ್ದೀನಿ ಅಂದ್ರು. ಟೈಟಲ್ ಗಾಗಿ ಡ್ಯೂಪ್ಲಿಕೇಟ್ ಅಗ್ರೀಮೆಂಟ್ ಮಾಡಿದ್ದಾರೆ. ಅದು ಕಳೆದ ವರ್ಷ. ಶೀರ್ಷಿಕೆ ವಿಚಾರವಾಗಿ ನಿರ್ಮಾಪಕ ಅಗ್ರೀಮೆಂಟ್ ಮಾಡ್ಬೇಕು. ಆದ್ರೆ, ಇಮ್ರಾನ್ ಸರ್ದಾರಿಯಾ ಫೋರ್ಜರಿ ಮಾಡಿದ್ದಾರೆ'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ

ಪರ್ಫಾಮೆನ್ಸ್ ಸರಿ ಇಲ್ಲ ಅಂದ್ರೆ ಏನರ್ಥ?

''ಮಾಲಾಶ್ರೀ ಹಾಗೂ ರಾಮು ಮೋಸಗಾರರು ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಮಾಲಾಶ್ರೀ ಲೇಟ್ ಆಗಿ ಬರುವುದರಿಂದ ಲಾಸ್ ಆಗಿದೆ ಅಂತ ಮೆಸೇಜ್ ಬಂದಿದ್ರೆ ಒಪ್ಪಿಕೊಳ್ಳುತ್ತೇವೆ. ನಷ್ಟ ಭರಿಸುತ್ತೇವೆ. ಪರ್ಫಾಮೆನ್ಸ್ ಸರಿ ಇಲ್ಲ ಅಂದ್ರೆ ಅರ್ಥ ಏನು?'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ

ಪ್ರಾಜೆಕ್ಟ್ ಯಾಕೆ ನಿಲ್ಲಿಸಬೇಕು?

''ಪರ್ಫಾಮೆನ್ಸ್ ಅಪ್ ಟು ದಿ ಮಾರ್ಕ್' ಅಂದ್ರೆ ನಟನೆ ನಿರೀಕ್ಷೆಗೆ ತಕ್ಕಂತೆ ಇಲ್ಲ ಅನ್ನೋದು ಓಕೆ. ಆದ್ರೆ, ಅದೇ ಕಾರಣಕ್ಕೆ ಪ್ರಾಜೆಕ್ಟ್ ನಿಲ್ಲಿಸುತ್ತಿದ್ದೇವೆ ಅಂದ್ರೆ ಏನರ್ಥ? ಮಾಲಾಶ್ರೀ ಎಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ಬಾಲನಟಿ ಆಗಿ ಕಮಲ್ ಹಾಸನ್, ಎನ್.ಟಿ.ಆರ್ ಜೊತೆ ನಟಿಸಿರುವವವರು ಅವರು. ಒಂದೇ ಟೇಕ್ ನಲ್ಲಿ ಎರಡು ಪೇಜ್ ಡೈಲಾಗ್ ಹೇಳುವ ಪ್ರತಿಭೆ ಇದೆ ಅವರಿಗೆ'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ

ಇಮ್ರಾನ್ ಸರ್ದಾರಿಯಾ ಫ್ಲಾಪ್ ಡೈರೆಕ್ಟರ್!

''ಇಮ್ರಾನ್ ಸರ್ದಾರಿಯಾ ಯಾವ ಸಿನಿಮಾ ಮಾಡಿದ್ದಾರೆ? 'ಎಂದೆಂದಿಗೂ' ಚಿತ್ರವನ್ನ ಅವರು ಏನು ಮಾಡಿದ್ದಾರೆ? ಅದರಿಂದ ನಿರ್ಮಾಪಕರಿಗೆ ಎಷ್ಟು ಲಾಸ್ ಆಗಿದೆ? ಇಮ್ರಾನ್ ಸಾಧನೆ ಏನಿದೆ? ಸಿನಿಮಾ ಮಾಡಿ ಏನು ಸಕ್ಸಸ್ ಮಾಡಿದ್ದಾರೆ? ಒಂದು ಸಿನಿಮಾ ಮಾಡಿ ಫ್ಲಾಪ್ ಮಾಡಿ ನಿರ್ಮಾಪಕರಿಗೆ ಕೋಟಿ ಕೋಟಿ ಲಾಸ್ ಮಾಡಿದ್ದಾರೆ. ಕೊರಿಯೋಗ್ರಫಿ ಜೊತೆ ನಿರ್ದೇಶನ ಮಾಡಿ ಇಮ್ರಾನ್ ದುಡ್ಡು ಮಾಡುತ್ತಿದ್ದಾರೆ. ಆದರೆ, ಅದರಿಂದ ನಿರ್ಮಾಪಕರಿಗೆ ನಷ್ಟ ಆಗುತ್ತಿದೆ'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ

ಇಂಡಸ್ಟ್ರಿ ಗಲೀಜು ಮಾಡುತ್ತಿದ್ದಾರೆ.!

''ಇಡೀ ಇಂಡಸ್ಟ್ರಿ ಗಲೀಜು ಮಾಡುತ್ತಿದ್ದಾರೆ. ನಿನ್ನೆ ಪ್ರೆಸ್ ಮೀಟ್ ನಲ್ಲಿ ಮಂಜು ಮಾತನಾಡಿದ್ದೆಲ್ಲಾ ಸುಳ್ಳು. ಪೇಪರ್ ನಲ್ಲಿ ಬರೆದುಕೊಂಡು ಮಂಜು ಮಾತನಾಡಿದ್ದನ್ನ ನಾನೇ ನೋಡಿದ್ದೀನಿ'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ

ಮಾಲಾಶ್ರೀಗೆ ಹೇಳಿಕೊಡಬಹುದಿತ್ತು!

''ನಮ್ಮ ಕಡೆಯಿಂದ ಯಾವುದೇ ತೊಂದರೆ ಆಗಿಲ್ಲ. ಪರ್ಫಾಮೆನ್ಸ್ ಬಗ್ಗೆ ಮಾತನಾಡಿದ್ದು ಯಾಕೆ? ಹೇಗೆ ಮಾಡಬೇಕು ಅಂದ್ರೆ ಮಾಲಾಶ್ರೀ ಮಾಡುತ್ತಾರೆ. ಯಾಕೆ ಅವರಿಗೆ ಹೇಳಲಿಲ್ಲ'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ

ನಾನು ಮಾಲಾಶ್ರೀಗೆ ದುಡ್ಡು ಕೊಡಲ್ವಾ?

''ನಾನು ಮಾಲಾಶ್ರೀಗೆ ದುಡ್ಡು ಕೊಡುತ್ತಿಲ್ಲ'' ಅಂತ ಮಂಜು ಹೇಳ್ತಾರೆ. ಯಾರಾದರೂ ಹೇಳುವ ಮಾತಾ ಇದು? ಸಭ್ಯಸ್ತರು ಅಂತ ಹೇಳುವ ಅವರು ಹೀಗೆಲ್ಲಾ ಮಾತನಾಡುತ್ತಾರಾ? ನಿಮಗೆ ಹಾಗೆ ಯಾರಾದರೂ ಹೇಳಿದ್ರೆ, ನಿಮಗೆ ಎಷ್ಟು ನೋವಾಗಲ್ಲ'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ

ಮಾನನಷ್ಟ ಮೊಕದ್ದಮೆ ಹಾಕುತ್ತೇನೆ!

''ಕಾನೂನು ಪ್ರಕಾರ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ನಮಗೆ ಅವರು ಮಾನನಷ್ಟ ಮಾಡಿದ್ದಾರೆ. ಅದಕ್ಕೆ ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ'' - ರಾಮು, ನಿರ್ಮಾಪಕ, ನಟಿ ಮಾಲಾಶ್ರೀ ಪತಿ

English summary
Kannada Actress Malashri husband, Producer Ramu hit back against Choreographer turned Director Imran Sardhariya and Producer K.Manju in the press meet held today in Silver Star hotel, Gandhinagar, Bengaluru. Producer Ramu has decided to file defamation case against both.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada