»   » ಮಾಲಾಶ್ರೀ 'ವೀರ' ಚಿತ್ರದ ಬಗ್ಗೆ ರಾಮು ಏನಂತಾರೆ?

ಮಾಲಾಶ್ರೀ 'ವೀರ' ಚಿತ್ರದ ಬಗ್ಗೆ ರಾಮು ಏನಂತಾರೆ?

Posted By:
Subscribe to Filmibeat Kannada

ಕನ್ನಡ ಬೆಳ್ಳಿಪರದೆ ಮೇಲೆ ದುರ್ಗಿ, ಚಾಮುಂಡಿ, ಶಕ್ತಿ, ಭವಾನಿ, ಭಾರ್ಗವಿ, ಭೈರವಿಯಾಗಿ ಮಿಂಚಿದ ಮಾಲಾಶ್ರೀ ಈಗ ಪ್ರೇಕ್ಷಕರ ಮುಂದೆ 'ವೀರ'ನಾರಿಯಾಗಿ ಬರುತ್ತಿದ್ದಾರೆ. ಈ ಚಿತ್ರದ ವಿಶೇಷಗಳು ಒಂದೆರಡಲ್ಲ ಎನ್ನುತ್ತಾರೆ ಮಾಲಾಶ್ರೀ ಅವರ ಪತಿ ಕಮ್ ನಿರ್ಮಾಪಕ ರಾಮು.

'ವೀರ' ಚಿತ್ರವನ್ನು ಸಂಪೂರ್ಣವಾಗಿ ವಿದೇಶದಲ್ಲೇ ಚಿತ್ರೀಕರಿಸಲಾಗಿದೆ. ಈ ಚಿತ್ರವನ್ನು ನೋಡುತ್ತಿರುವಷ್ಟೂ ಸಮಯ ಇದು ಸ್ಯಾಂಡಲ್ ವುಡ್ ಸಿನಿಮಾ ಅನ್ನಿಸುವುದೇ ಇಲ್ಲ. ಹಾಲಿವುಡ್ ಸಿನಿಮಾ ನೋಡಿದ ಅನುಭವವಾಗುತ್ತದೆ ಎಂದಿದ್ದಾರೆ ರಾಮು.

A still from Veera

ಮೊದಲೇ ಕೋಟಿ ನಿರ್ಮಾಪಕ. ಇನ್ನು ವಿದೇಶದಲ್ಲಿ ಚಿತ್ರೀಕರಣ ಎಂದರೆ ಕೇಳಬೇಕು. ಅದನ್ನು ನೋಡಿಯೇ ಅನುಭವಿಸಬೇಕು. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ 33ನೇ ಕಾಣಿಕೆ ಇದು. ಸಂಪೂರ್ಣ ಆಕ್ಷನ್ ಪ್ರಧಾನವಾದ ಈ ಚಿತ್ರದಲ್ಲಿ ಒಂದಷ್ಟು ಸೆಂಟಿಮೆಂಟು, ಕಾಮಿಡಿ, ಸಸ್ಪೆನ್ಸ್ ಸನ್ನಿವೇಶಗಳಿಗೂ ಜಾಗ ನೀಡಲಾಗಿದೆಯಂತೆ.

ಈ ಚಿತ್ರವನ್ನು ಹಾಂಕಾಂಗ್ ಮತ್ತು ಥೈಲ್ಯಾಂಡ್ ನಲ್ಲಿ ಚಿತ್ರೀಕರಿಸಲಾಗಿದೆ. ತಾಂತ್ರಿಕ ಹಾಗೂ ತಾಂತ್ರಿಕೇತರ ಅಂಶಗಳಿಂದ ಚಿತ್ರ ಸಂಪದ್ಭರಿತವಾಗಿದ್ದು ಯಾವುದಕ್ಕೂ ರಾಜಿಯಾಗದಂತೆ ಚಿತ್ರವನ್ನು ನಿರ್ಮಿಸಿದ್ದೇನೆ ಎನ್ನುತ್ತಾರೆ ರಾಮು.

ಒಟ್ಟಿನಲ್ಲಿ ಪ್ರೇಕ್ಷಕರು ಚಿತ್ರವನ್ನು ವೀಕ್ಷಿಸುತ್ತಿರುವಷ್ಟೂ ಸಮಯ ಮೈಮರೆಯುತ್ತಾರೆ. ಮಾಲಾಶ್ರೀ ಅವರ ಫೈಟ್ಸ್ ಗೆ ಮರುಳಾಗುತ್ತಾರೆ. ಸಸ್ಪೆನ್ಸ್ ನೋಡಿ ಥ್ರಿಲ್ ಆಗುತ್ತಾರೆ. ಕಾಮಿಡಿಗೆ ಕಮ್ಮಿ ಎಂದರೂ ಎರಡೆರಡು ಬಾರಿ ನಗುತ್ತಾರೆ. 'ವೀರ' ಚಿತ್ರ ಆ ರೀತಿ ಮೂಡಿಬಂದಿದೆ ಎಂಬ ಒಕ್ಕಣೆಯನ್ನು ರಾಮು ನೀಡಿದ್ದಾರೆ.

ಇದೇ ಮಾರ್ಚ್ 29ರಂದು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ವೀರ ಚಿತ್ರ ತೆರೆಕಾಣುತ್ತಿದೆ. ರಾಮು ಎಂಟರ್ ಪ್ರೈಸಸ್ ಈ ಚಿತ್ರವನ್ನು ಸರಿಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದೆ. ನೋಡಿ ಆನಂದಿಸಿ. ಗ್ಯಾಲರಿ ಮೇಲೂ ಒಮ್ಮೆ ಕಣ್ಣಾಡಿಸಿ. (ಏಜೆನ್ಸೀಸ್)

English summary
Kannada films action queen Malashri's action entertainer Veera all set to release on 29th March. The film will release in around 200 screens. Producer Ramu says, It is like Hollywood film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada