For Quick Alerts
  ALLOW NOTIFICATIONS  
  For Daily Alerts

  ಮತ್ತೆ ಕೆಲಸಕ್ಕೆ ಮರಳಿದ ಮಾಳವಿಕಾ: ದೊಡ್ಡ ಚಿತ್ರದ ಡಬ್ಬಿಂಗ್ ಮಾಡಿದ ನಟಿ

  |

  ಕೋವಿಡ್ ಲಾಕ್‌ಡೌನ್‌ನಿಂದ ಚಿತ್ರರಂಗ ಸ್ತಬ್ದವಾಗಿತ್ತು. ಶೂಟಿಂಗ್, ಚಿತ್ರಪ್ರದರ್ಶನ, ಸಿನಿ ಕಾರ್ಯಕ್ರಮಗಳು ಯಾವುದು ನಡೆದಿಲ್ಲ. ರಾಜ್ಯದಲ್ಲಿ ಅನ್‌ಲಾಕ್ ಪ್ರಕ್ರಿಯೆ ಶುರುವಾಗಿದ್ದು, ಒಂದೊಂದೆ ಕೆಲಸ ಪುನರಾರಂಭಿಸಲು ಸಿನಿ ಇಂಡಸ್ಟ್ರಿ ಸಹ ಸಜ್ಜಾಗುತ್ತಿದೆ.

  ಇದೀಗ, ಹಿರಿಯ ನಟಿ ಮಾಳವಿಕಾ ಅವಿನಾಶ್ 50 ದಿನಗಳ ಬಳಿಕ ಕೆಲಸಕ್ಕೆ ಮರಳಿದ್ದಾರೆ. ಸೌತ್ ಇಂಡಿಯಾದ ಬಹುದೊಡ್ಡ ಸಿನಿಮಾ ಎನಿಸಿಕೊಂಡಿರುವ ಕೆಜಿಎಫ್ ಚಾಪ್ಟರ್ 2 ಡಬ್ಬಿಂಗ್ ಆರಂಭಿಸಿದ್ದಾರೆ.

  ಕೆಜಿಎಫ್ 2 ಹೊಸ ದಾಖಲೆ: ಭಾರತೀಯ ಚಿತ್ರರಂಗದಲ್ಲೇ ಇದು ಮೊದಲುಕೆಜಿಎಫ್ 2 ಹೊಸ ದಾಖಲೆ: ಭಾರತೀಯ ಚಿತ್ರರಂಗದಲ್ಲೇ ಇದು ಮೊದಲು

  ಈ ಕುರಿತು ಟ್ವಿಟ್ಟರ್‌ನಲ್ಲಿ ಫೋಟೋ ಶೇರ್ ಮಾಡಿರುವ ಮಾಳವಿಕಾ ''ಜೀವನ ಮೊದಲಿನಂತೆ ವಾಪಸ್ ಬರಲ್ಲ. ಆದರೂ ಕೆಲವು ಹೋಲುತ್ತದೆ. 50 ದಿನಗಳ ನಂತರ ಕೆಲಸ ಆರಂಭಿಸಿದೆ'' ಎಂದು ಪೋಸ್ಟ್ ಹಾಕಿದ್ದಾರೆ.

  ಇದಕ್ಕೂ ಮುಂಚೆ ಯಶ್ ಸಹ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಡಬ್ಬಿಂಗ್ ಮುಗಿಸಿದರು. ಸಂಪೂರ್ಣ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಸಹ ಬಹುತೇಕ ಮುಗಿದಿದೆ ಎಂದು ತಿಳಿದು ಬಂದಿದೆ.

  ಇನಾಯತ್ ಖಲೀಲ್ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಪ್ರಶಾಂತ್ ನೀಲ್ಇನಾಯತ್ ಖಲೀಲ್ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಪ್ರಶಾಂತ್ ನೀಲ್

  ಸದ್ಯಕ್ಕೆ ಪ್ರಕಟ ಮಾಡಿರುವಂತೆ ಜುಲೈ 16 ರಂದು ಕೆಜಿಎಫ್ ಚಾಪ್ಟರ್ 2 ಸಿನಿಮಾ ತೆರೆಗೆ ಬರಬೇಕಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗುತ್ತಿರುವ ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ.

  Recommended Video

  Sudeep ಅವರು Chess ಆಡುವಾಗ ಮೋಸ ಮಾಡಿದ ಆರೋಪ | Filmibeat Kannada

  ಯಶ್ ಜೊತೆ ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ರಾವ್ ರಮೇಶ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

  English summary
  Senior Actress Malavika Avinash Starts Dubbing for KGF Chapter 2 after 50 days.
  Thursday, June 17, 2021, 8:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X