For Quick Alerts
  ALLOW NOTIFICATIONS  
  For Daily Alerts

  ಪ್ರಿಯಾ ಬರ್ತಡೇಗಾಗಿ ಮಲಯಾಳಂ ನಟಿ ತೆಗೆದುಕೊಂಡ ತೊಂದರೆಗೆ ಧನ್ಯವಾದ ಹೇಳಿದ ಸುದೀಪ್

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ರಿಯಾ ಸುದೀಪ್ ಬರ್ತಡೇಯನ್ನು ವಿಶೇಷವಾಗಿಸಬೇಕೆಂದು ಪ್ಲಾನ್ ಮಾಡಿದ್ದ ಕಿಚ್ಚನ ಅಭಿಮಾನಿಗಳು ಮಲಯಾಳಂನ ಖ್ಯಾತ ನಟಿಯಿಂದ ಕಾಮನ್ ಡಿಪಿ ಬಿಡುಗಡೆ ಮಾಡಿಸಲು ನಿರ್ಧರಿಸಿದ್ದರು.

  ಯೋಜನೆಯಂತೆ ಮಲಯಾಳಂ ಲೇಡಿ ಸೂಪರ್ ಸ್ಟಾರ್ ಮಂಜು ವಾರಿಯರ್, ಸುದೀಪ್ ಪತ್ನಿಯ ಕಾಮನ್ ಡಿಪಿ ಬಿಡುಗಡೆ ಮಾಡಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಆದ್ರೆ, ಈ ಕಾಮನ್ ಡಿಪಿಯನ್ನು ರಿಲೀಸ್ ಮಾಡಲು ಮಂಜು ವಾರಿಯರ್ ತೆಗೆದುಕೊಂಡ ರಿಸ್ಕ್ ಬಗ್ಗೆ ನಟ ಸುದೀಪ್ ಹೇಳಿದ್ದು, ಅವರು ತೆಗೆದುಕೊಂಡ ತೊಂದರೆಗೆ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ. ಅಷ್ಟಕ್ಕೂ, ಮಂಜು ವಾರಿಯರ್ ತೆಗೆದುಕೊಂಡ ರಿಸ್ಕ್ ಏನು? ಮುಂದೆ ಓದಿ....

  ಮತ್ತೊಮ್ಮೆ 'ಮೈ ಆಟೋಗ್ರಾಫ್' ಪುಟ ತೆರೆದ ಸುದೀಪ್: 15 ವರ್ಷದ ನಂತರ ಲತಿಕಾ ಮನೆಗೆ ಭೇಟಿ

  ನೆಟ್‌ವರ್ಕ್‌ಗಾಗಿ ಸುತ್ತಾಡಿದ ನಟಿ

  ನೆಟ್‌ವರ್ಕ್‌ಗಾಗಿ ಸುತ್ತಾಡಿದ ನಟಿ

  ಮಲಯಾಳಂ ನಟಿ ಮಂಜು ವಾರಿಯರ್ ಜನವರಿ 5 ರಂದು ಸಂಜೆ ಪ್ರಿಯಾ ಸುದೀಪ್ ಅವರ ಕಾಮನ್ ಡಿಪಿ ಬಿಡುಗಡೆ ಮಾಡಿದ್ದಾರೆ. ನೆಟ್‌ವರ್ಕ್‌ ಇಲ್ಲದ ಸ್ಥಳದಲ್ಲಿದ್ದ ಮಂಜು ವಾರಿಯರ್ ಕಾಮನ್ ಡಿಪಿ ರಿಲೀಸ್ ಮಾಡುವುದಕ್ಕಾಗಿ ನೆಟ್‌ವರ್ಕ್ ಇರುವ ಸ್ಥಳಕ್ಕೆ ಹೋಗಿ, ಆಮೇಲೆ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ವಿಷಯವನ್ನು ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.

  ಈ ಸಂಭ್ರಮವನ್ನು ಅಮೂಲ್ಯವಾಗಿಸಿದ್ದೀರಿ

  ಈ ಸಂಭ್ರಮವನ್ನು ಅಮೂಲ್ಯವಾಗಿಸಿದ್ದೀರಿ

  ಪ್ರಿಯಾ ಸುದೀಪ್ ಅವರ ಕಾಮನ್ ಡಿಪಿ ಬಿಡುಗಡೆ ಮಾಡಲು ಮಂಜು ವಾರಿಯರ್ ತೆಗೆದುಕೊಂಡ ರಿಸ್ಕ್‌ಗೆ ನಟ ಸುದೀಪ್ ವಿಶೇಷವಾದ ಧನ್ಯವಾದ ತಿಳಿಸಿದ್ದಾರೆ. ''ನೀವು ತೆಗೆದುಕೊಂಡ ತೊಂದರೆ ಬಗ್ಗೆ ನಮಗೆ ತಿಳಿದಿದೆ. ನಿಮ್ಮ ಈ ಪ್ರೀತಿಗೆ ನಾನು ಅಭಾರಿ, ಈ ಸಂಭ್ರಮದ ಕ್ಷಣವನ್ನು ಮತ್ತಷ್ಟು ಅಮೂಲ್ಯವಾಗಿಸಿದ್ದೀರಿ. ಥ್ಯಾಂಕ್ ಯೂ ಮ್ಯಾಮ್'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

  ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್: ಅಪಘಾತದಲ್ಲಿ ಕಾಲು ಕಳೆದುಕೊಂಡ ಅಭಿಮಾನಿಗೆ ನೆರವು

  ರವಿ ಶಂಕರ್ ಗೌಡ ವಿಶ್

  ರವಿ ಶಂಕರ್ ಗೌಡ ವಿಶ್

  ''ಜನುಮ ದಿನದ ಶುಭಾಶಯಗಳು ಪ್ರೀತಿಯ ಪ್ರಿಯಾಜೀ ಇಷ್ಟ ದೇವರ ಅನುಗ್ರಹ , ಆಶೀರ್ವಾದ ಸದಾ ನಿಮ್ಮ ಕುಟುಂಬದ ಜೊತೆಗಿರಲಿ. God bless you & your family always....'' ಎಂದು ನಟ ರವಿಶಂಕರ್ ಗೌಡ ಅವರು ಪ್ರಿಯಾ ಸುದೀಪ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ

  ನಿಮ್ಮನ್ನ ನೋಡೋಕೆ ನನಗೂ ಇಷ್ಟ ಆದ್ರೆ ಏನ್ಮಾಡೋದು ಎಂದ ಯಶ್ | Filmibeat Kannada
  ಶುಭಕೋರಿದ ಬಾಲಿವುಡ್ ನಟ

  ಶುಭಕೋರಿದ ಬಾಲಿವುಡ್ ನಟ

  ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಸಹ ಸುದೀಪ್ ಪತ್ನಿಗೆ ಟ್ವಿಟ್ಟರ್ ಮೂಲಕ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ''ಹ್ಯಾಪಿ ಬರ್ತಡೇ ಆತ್ಮೀಯ ಪ್ರಿಯಾ ಸುದೀಪ್,,,,,ಟನ್‌ಗಟ್ಟಲೇ ಪ್ರೀತಿ, ಸಂತಸ ಹಾಗು ನಗುವಿನಿಂದ ಜೀವಿಸಿ'' ಎಂದು ಹಾರೈಸಿದ್ದಾರೆ.

  English summary
  Malayalam lady superstar Manju warrier release common DP of Priya sudeep on birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X