For Quick Alerts
  ALLOW NOTIFICATIONS  
  For Daily Alerts

  ನಟಿ ಅಪಹರಣ, ಲೈಂಗಿಕ ದೌರ್ಜನ್ಯ ಪ್ರಕರಣ: ನಟ ದಿಲೀಪ್ ಗೆ 12 ತಾಸು ವಿಚಾರಣೆ

  By Harshitha
  |

  ಕನ್ನಡ ಚಿತ್ರಗಳಲ್ಲೂ ನಟಿಸಿರುವ ಮಲೆಯಾಳಂ ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪ ಎದುರಿಸುತ್ತಿರುವ ಮಲೆಯಾಳಂ ನಟ ದಿಲೀಪ್ ರವರನ್ನ ಪೊಲೀಸರು ವಿಚಾರಣೆ ನಡೆಸಿದ್ದಾರೆ.

  ಕನ್ನಡದಲ್ಲೂ ಅಭಿನಯಿಸಿದ್ದ ಬಹುಭಾಷಾ ನಟಿ ಅಪಹರಣ

  12 ಗಂಟೆಗೂ ಹೆಚ್ಚು ತಾಸು ನಟ ದಿಲೀಪ್ ರವರನ್ನ ಪೊಲೀಸರು ವಿಚಾರಣೆ ಮಾಡಿದ್ದಾರೆ. ನಟ ದಿಲೀಪ್ ಜೊತೆ ನಾದೀರ್ ಶಾ ಹಾಗೂ ದಿಲೀಪ್ ಅವರ ಮಾಜಿ ಮ್ಯಾನೇಜರ್ ಅಪ್ಪುಣ್ಣಿ ಕೂಡ ವಿಚಾರಣೆಗೆ ಒಳಪಟ್ಟಿದ್ದಾರೆ. ಮುಂದೆ ಓದಿರಿ...

  ಮಧ್ಯರಾತ್ರಿವರೆಗೂ ವಿಚಾರಣೆ

  ಮಧ್ಯರಾತ್ರಿವರೆಗೂ ವಿಚಾರಣೆ

  ಅಲುವಾ ಪೊಲೀಸ್ ಸ್ಟೇಷನ್ ಗೆ ನಿನ್ನೆ (ಬುಧವಾರ ಜೂನ್ 28) ಮಧ್ಯಾಹ್ನ 12.30ಕ್ಕೆ ಬಂದ ದಿಲೀಪ್, ನಾದೀರ್ ಶಾ ಹಾಗೂ ಅಪ್ಪುಣ್ಣಿ ರವರನ್ನ ಮಧ್ಯರಾತ್ರಿ ಒಂದು ಗಂಟೆವರೆಗೂ ವಿಚಾರಣೆ ನಡೆಸಿದ್ದಾರೆ ಪೊಲೀಸರು.

  ಮಲಯಾಳಂ ನಟಿ ಕಿಡ್ನಾಪ್ ರೂವಾರಿ ಸುನೀಲ್: ಘಟನೆಯ ಪೂರ್ಣ ವಿವರ

  ವಿಚಾರಣೆ ಬಳಿಕ ನಟ ದಿಲೀಪ್ ಮಾತು

  ವಿಚಾರಣೆ ಬಳಿಕ ನಟ ದಿಲೀಪ್ ಮಾತು

  ''ನನಗೆ ನಂಬಿಕೆ ಇದೆ. ವಿಚಾರಣೆ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ. ನಾನು ತನಿಖೆಗೆ ಸಹಕರಿಸುತ್ತೇನೆ. ಸತ್ಯ ಹೊರಗೆ ಬರುತ್ತದೆ'' ಎಂದು ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ನಟ ದಿಲೀಪ್ ಮಾತನಾಡಿದರು.

  ಪಲ್ಸರ್ ಸುನಿ ಬಾಯಿ ಬಿಟ್ಟಿದ್ದ

  ಪಲ್ಸರ್ ಸುನಿ ಬಾಯಿ ಬಿಟ್ಟಿದ್ದ

  ಮಲೆಯಾಳಂ ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 'ಮೆಗಾಸ್ಟಾರ್' ಹಾಗೂ ಪ್ರಖ್ಯಾತ ನಿರ್ದೇಶಕರೊಬ್ಬರು ಭಾಗಿಯಾಗಿದ್ದಾರೆ ಎಂದು ಪಲ್ಸರ್ ಸುನಿ, ಜೈಲುಪಾಲಾಗಿರುವ ಮತ್ತೊಬ್ಬ ಅಪರಾಧಿ ಜಿನ್ಸೆ ಎದುರು ಈ ಹಿಂದೆ ಒಪ್ಪಿಕೊಂಡಿದ್ದ. ಪಲ್ಸರ್ ಸುನಿ ನೀಡಿದ್ದ ಹೇಳಿಕೆ ಆಧಾರದ ಮೇಲೆ ನಟ ದಿಲೀಪ್ ರವರನ್ನ ವಿಚಾರಣೆ ಮಾಡಲಾಗಿದೆ.

  ಮಲೆಯಾಳಂ ನಟಿ ಮೇಲೆ ಲೈಂಗಿಕ ದೌರ್ಜನ್ಯ: ಘಟನೆ ಹಿಂದೆ ಖ್ಯಾತನಾಮರ ಕೈವಾಡ.!

  ಫೆಬ್ರವರಿ 17 ರಂದು ನಡೆದಿದ್ದ ಘಟನೆ

  ಫೆಬ್ರವರಿ 17 ರಂದು ನಡೆದಿದ್ದ ಘಟನೆ

  ಫೆಬ್ರವರಿ 17 ರಂದು ರಾತ್ರಿ 9.30 ರ ಸುಮಾರಿಗೆ, ಕೇರಳದ ಕೊಚ್ಚಿ ಇಂದ ತ್ರಿಶೂರ್ ಗೆ ತೆರಳುತ್ತಿದ್ದ ಮಲೆಯಾಳಂ ನಟಿಯನ್ನು ಐದು ಜನ ದುಷ್ಕರ್ಮಿಗಳ ತಂಡ ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದ್ದರು. ಇಡೀ ಘಟನೆಯನ್ನ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡು, ಕಾರಿನಲ್ಲಿಯೇ ನಟಿಯನ್ನು ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದರು. ತದನಂತರ ತಮಗೆ ಪರಿಚಯವಿದ್ದ ನಿರ್ಮಾಪಕರೊಬ್ಬರ ಮನೆಗೆ ತೆರಳಿದ ನಟಿ ಪೊಲೀಸರಿಗೆ ದೂರು ನೀಡಿದ್ದರು.

  English summary
  Popular Malayalam actor Dileep was questioned by the police for more than 12 hours on Wednesday in connection with the abduction and sexual assault of an actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X