For Quick Alerts
  ALLOW NOTIFICATIONS  
  For Daily Alerts

  ರಾಕಿ ಭಾಯ್ ಭೇಟಿಯಾದ ಮಲಯಾಳಂ ಸ್ಟಾರ್ ನಟ: ಕುತೂಹಲ ಮೂಡಿಸಿದೆ ಇಬ್ಬರ ಭೇಟಿ

  |
  ಯಶ್ ಈ ಸ್ಟಾರ್ ನಟನನ್ನು ಭೇಟಿ ಮಾಡಿದ್ದು ಯಾಕೆ ಗೊತ್ತಾ..? | KGF2 | Yash | Dulquer Salmaan | Mysore

  ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಅಭಿಮಾನಿಗಳ ಪ್ರೀತಿಯ ರಾಕಿ ಭಾಯ್ ಸದ್ಯ ಕೆಜಿಎಫ್-2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಿರಂತರ ಶೂಟಿಂಗ್ ನಲ್ಲಿ ನಿರತರಾಗಿರುವ ಯಶ್ ಇತ್ತೀಚಿಗೆ ಮಾಲಿವುಡ್ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

  ಹೌದು, ಮಾಲಿವುಡ್ ನ ಯೂತ್ ಐಕಾನ್ ದುಲ್ಕರ್ ಸಲ್ಮಾನ್ ಇತ್ತೀಚಿಗೆ ಮೈಸೂರಿನಲ್ಲಿ ರಾಕಿ ಭಾಯ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇಬ್ಬರ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಬ್ಬರು ಸ್ಟಾರ್ ನಟರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಸಂತಸ ಪಡುತ್ತಿದ್ದಾರೆ. ಜೊತೆಗೆ ಇಬ್ಬರ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.

  ನೆಗಿಟಿವ್ ಪಾತ್ರದಲ್ಲಿ ದುಲ್ಕರ್ ಸಲ್ಮಾನ್: ರೆಟ್ರೋ ಸ್ಟೈಲ್ ವೈರಲ್ನೆಗಿಟಿವ್ ಪಾತ್ರದಲ್ಲಿ ದುಲ್ಕರ್ ಸಲ್ಮಾನ್: ರೆಟ್ರೋ ಸ್ಟೈಲ್ ವೈರಲ್

  ದುಲ್ಕರ್ ದಿಢೀರನೆ ಮೈಸೂರಿಗೆ ಬಂದು ರಾಕಿ ಭೇಟಿಯಾದ ಕಾರಣ ಕೂಡ ಬಹಿರಂಗವಾಗಿದೆ. ಕಾರಣ ದುಲ್ಕರ್ ಕೂಡ ಮೈಸೂರಿನಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮಯಲಾಳಂ ಸಿನಿಮಾ ಚಿತ್ರೀಕರಣಕ್ಕಾಗಿ ದುಲ್ಕರ್ ಮೈಸೂರಿನಲ್ಲಿ ಬೀಡುಬಿಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಕೂಡ ಕಿಜಿಎಫ್-2 ಚಿತ್ರದ ಚಿತ್ರೀಕರಣಕ್ಕಾಗಿ ಮೈಸೂರಿನಲ್ಲಿದ್ದಾರೆ.

  ಈ ಇಬ್ಬರು ಸ್ಟಾರ್ ನಟರು ಮೈಸೂರಿನ ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ. ಹೋಟೆಲ್ ನಲ್ಲಿ ಜಿಮ್ ಮಾಡುವ ಸಮಯದಲ್ಲಿ ಇಬ್ಬರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇಬ್ಬರು ಸ್ಟಾರ್ ನಟರಿಗೂ ದಕ್ಷಿಣ ಭಾರತದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ಇಬ್ಬರನ್ನು ಹೀಗೆ ಒಂದೆ ಫ್ರೇಮ್ ನಲ್ಲಿ ನೋಡಿ ಅಭಿಮಾನಿಗಳು ಸಂತಸ ಪಡುತ್ತಿದ್ದಾರೆ.

  ಅಂದ್ಹಾಗೆ ಮೈಸೂರಿನಲ್ಲಿ ಕೆಜಿಎಫ್-2 ಚಿತ್ರದ ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದೆ. ಮೈಸೂರು ಚಿತ್ರೀಕರಣ ಮುಗಿಸಿ ಚಿತ್ರತಂಡ ಮತ್ತೆ ಹೈದರಾಬಾದ್ ಕಡೆ ಪಯಣ ಬೆಳೆಸಲಿದೆ. ಈಗಾಗಲೆ 80 ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇನ್ನೇನು ಕೆಲವೆ ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಪ್ರಾರಂಭಿಸಲಿದೆ.

  Read more about: dulquer salmaan yash ಯಶ್
  English summary
  Malayalam Star Actor Dulquer salmaan meet Kannada Actor Yash in Mysore. Actor Yash is busy in KGF-2 Shooting in Mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X