For Quick Alerts
  ALLOW NOTIFICATIONS  
  For Daily Alerts

  ಹಿಂದಿ, ತೆಲುಗು, ತಮಿಳು ಆಯ್ತು ಈಗ ಕನ್ನಡಕ್ಕೂ ಬರ್ತಿದೆ ಸೂಪರ್ ಹಿಟ್ 'ಅಯ್ಯಪ್ಪನುಮ್ ಕೋಶಿಯುಮ್'

  |

  ಮಲಯಾಳಂನ ಸೂಪರ್ ಹಿಟ್ 'ಅಯ್ಯಪ್ಪನುಮ್ ಕೋಶಿಯುಮ್' ಸಿನಿಮಾ ಬೇರೆ ಬೇರೆ ಭಾಷೆಗಳಿಗೆ ರಿಮೇಕ್ ಆಗುತ್ತಿದೆ. ಹಿಂದಿ, ತೆಲುಗು, ತಮಿಳು, ಮರಾಠಿಯಲ್ಲಿ 'ಅಯ್ಯಪ್ಪನುಮ್ ಕೋಶಿಯುಮ್' ರಾರಾಜಿಸಲು ಸಜ್ಜಾಗಿದೆ. ವಿಶೇಷ ಎಂದರೆ ಈ ಸಿನಿಮಾ ಈಗ ಕನ್ನಡಕ್ಕೂ ರಿಮೇಕ್ ಆಗುತ್ತಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

  ಮಲಯಾಳಂನಲ್ಲಿ ಖ್ಯಾತ ನಟ ಪೃಥ್ವಿ ರಾಜ್ ಮತ್ತು ಬಿಜು ಮೆನನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಅಯ್ಯಪ್ಪನುಮ್ ಕೋಶಿಯುಮ್' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮಲಯಾಳಂನಲ್ಲಿ ಸೂಪರ್ ಹಿಟ್ ಆಗುತ್ತಿದ್ದಂತೆ ರಿಮೇಕ್ ರೈಟ್ಸ್ ಗೆ ಬೇಡಿಕೆಯೂ ಹೆಚ್ಚಾಗಿತ್ತು. ಈಗಾಗಲೇ ಹಿಂದಿ, ತೆಲುಗು ಮತ್ತು ತಮಿಳು ಸೇರಿದಂತೆ ಅನೇಕ ಭಾಷೆಗೆ ರಿಮೇಕ್ ಹಕ್ಕು ಮಾರಟ ಮಾಡಲಾಗಿದೆ. ಇದೀಗ ಕನ್ನಡದ ಖ್ಯಾತ ನಿರ್ಮಾಪಕರೊಬ್ಬರು 'ಅಯ್ಯಪ್ಪನುಮ್ ಕೋಶಿಯುಮ್' ರಿಮೇಕ್ ಹಕ್ಕು ಖರೀದಿಸಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

  ಪವನ್ ಕಲ್ಯಾಣ್ ಸಿನಿಮಾದಿಂದ ಹೊರಬಂದಿದ್ದೇಕೆ ನಟಿ ಸಾಯಿ ಪಲ್ಲವಿ?ಪವನ್ ಕಲ್ಯಾಣ್ ಸಿನಿಮಾದಿಂದ ಹೊರಬಂದಿದ್ದೇಕೆ ನಟಿ ಸಾಯಿ ಪಲ್ಲವಿ?

  ಈ ಬಗ್ಗೆ ಇನ್ನು ಅಧಿಕೃತ ಘೋಷಣೆ ಆಗಿಲ್ಲ. ಆದರೆ ಕನ್ನಡಕ್ಕೆ ರಿಮೇಕ್ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು ಸದ್ಯದಲ್ಲೇ ಬಹಿರಂಗವಾಗುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿಬರುತ್ತಿದೆ. 'ಅಯ್ಯಪ್ಪನುಮ್ ಕೋಶಿಯುಮ್' ಪೊಲೀಸ್ ಅಧಿಕಾರಿ ಅಯ್ಯಪ್ಪನ್ ನಾಯರ್ ಮತ್ತು ನಿವೃತ್ತ ಆರ್ಮಿ ಅಧಿಕಾರಿ ಕೋಶಿ ಕುರಿಯನ್ ನಡುವಿನ ಸೇಡಿನ ಕಥೆಯಾಗಿದೆ. ಚಿತ್ರದಲ್ಲಿ ಪೃಥ್ವಿರಾಜ್ ಮತ್ತು ಬಿಜು ಮೆನನ್ ಅದ್ಭುತವಾಗಿ ನಟಿಸಿದ್ದಾರೆ.

  ಇನ್ನು ಕನ್ನಡಕ್ಕೆ ಬರ್ತಿದೆ ಎನ್ನುವ ಸುದ್ದಿ ಕೇಳುತ್ತಿದ್ದಂತೆ ಯಾರು ನಟಿಸಲಿದ್ದಾರೆ ಎನ್ನುವುದು ಪ್ರೇಕ್ಷಕರ ಕುತೂಹಲವಾಗಿದೆ. ತೆಲುಗು ರಿಮೇಕ್ ನಲ್ಲಿ ಖ್ಯಾತ ನಟ ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ನಟಿಸಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಸಹ ಮಾಡಿ ಮುಗಿಸಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಿತ್ಯಾ ಮೆನನ್ ಕಾಣಿಸಿಕೊಂಡಿದ್ದಾರೆ. ತೆಲುಗಿನಲ್ಲಿ ರಾಣಾ ದಗ್ಗುಬಾಟಿ ನಟಿಸುತ್ತಿರುವ ಕೋಶಿ ಕುರಿಯನ್ ಪಾತ್ರಕ್ಕೆ ಮೊದಲು ಕನ್ನಡದ ನಟ ಸುದೀಪ್ ಹೆಸರು ಕೇಳಿಬಂದಿತ್ತು. ಕೊನೆಗೆ ಆ ಪಾತ್ರ ರಾಣಾ ಪಾಲಾಯ್ತು.

  ಪತಿಗೆ ಕಿಡ್ನಿ ಕೊಟ್ಟ ನೋವನ್ನು ಹೇಳಿಕೊಂಡ ದರ್ಶನ್ ತಾಯಿ | Filmibeat Kannada

  ಇನ್ನು ಹಿಂದಿಯಲ್ಲಿ ಖ್ಯಾತ ನಟ ಜಾನ್ ಅಬ್ರಹಾಂ ರಿಮೇಕ್ ಹಕ್ಕು ಖರೀದಿಸಿದ್ದಾರೆ. ಮೂಲಗಳ ಪ್ರಕಾರ ಹಿಂದಿಯಲ್ಲಿ ಜಾನ್ ಅಬ್ರಹಾಂ ಮತ್ತು ಅಭಿಷೇಕ್ ಬಚ್ಚನ್ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇದೆಲ್ಲದರ ನಡುವೆ ಕನ್ನಡದಲ್ಲಿ ಅಯ್ಯಪ್ಪನ್ ನಾಯರ್ ಮತ್ತು ಕೋಶಿ ಕುರಿಯನ್ ಯಾರಾಗಲಿದ್ದಾರೆ ಎನ್ನುವುದೇ ಸದ್ಯದ ಕುತೂಹಲ.

  English summary
  Malayalam super hit Ayyappanum Koshiyum to get remade in Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X