»   » 'ಬಾಹುಬಲಿ' ಸ್ಟಂಟ್ ಕಾಪಿ ಮಾಡಲು ಹೋಗಿ ಪ್ರಾಣ ಬಿಟ್ಟ ಉದ್ಯಮಿ.!

'ಬಾಹುಬಲಿ' ಸ್ಟಂಟ್ ಕಾಪಿ ಮಾಡಲು ಹೋಗಿ ಪ್ರಾಣ ಬಿಟ್ಟ ಉದ್ಯಮಿ.!

Posted By:
Subscribe to Filmibeat Kannada

'ಬಾಹುಬಲಿ' ಚಿತ್ರದ ಎರಡು ಭಾಗಗಳನ್ನೂ ಮಿಸ್ ಮಾಡದೆ ನೋಡಿರುವವರಿಗೆ ಭೋರ್ಗರೆಯುವ ಜಲಪಾತದ ದೃಶ್ಯ ನೆನಪಿರಲೇಬೇಕು. ಗ್ರಾಫಿಕ್ಸ್ ತಂತ್ರಜ್ಞಾನದಿಂದ ಸೃಷ್ಟಿಸಿದ ಮನಮೋಹಕ ಜಲಪಾತದ ತುದಿಯನ್ನು ತಲುಪಲು ಶಿವುಡು (ಪ್ರಭಾಸ್) ಪಡುವ ಸಾಹಸವನ್ನ ನೀವೆಲ್ಲ ಥಿಯೇಟರ್ ನಲ್ಲಿ ಕಣ್ತುಂಬಿಕೊಂಡಿರಬಹುದು.

ಇದೀಗ ಈ ಸೀನ್ ಬಗ್ಗೆ ನಾವು ಮಾತನಾಡಲು ಕಾರಣ ಒಂದು ದುರ್ಘಟನೆ.!

'ಬಾಹುಬಲಿ' ಸಿನಿಮಾದಲ್ಲಿ ಜಲಪಾತದ ಮೇಲೆ ಪ್ರಭಾಸ್ ಸ್ಟಂಟ್ ಮಾಡಿದ ರೀತಿಯಲ್ಲಿ ಕಾಪಿ ಮಾಡಲು ಹೋಗಿ ಓರ್ವ ಉದ್ಯಮಿ ಸಾವಿಗೀಡಾಗಿದ್ದಾನೆ. ಮುಂದೆ ಓದಿರಿ...

ಅದು ಸಿನಿಮಾ..

ಹೇಳಿ ಕೇಳಿ ಅದು ಗ್ರಾಫಿಕ್ಸ್ ಜಲಪಾತ. ಹೀರೋಗಳು ಸ್ಟಂಟ್ ಮಾಡಬೇಕು ಅಂದ್ರೆ ನಾನಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುತ್ತಾರೆ. ಇದನ್ನೆಲ್ಲ ವಿದ್ಯಾವಂತರು ಅರಿತಿರಬೇಕು. ಸಿನಿಮಾವನ್ನ ಥಿಯೇಟರ್ ಗೆ ಮಾತ್ರ ಸೀಮಿತವಾಗಿರಿಸದೆ, 'ಹೀರೋ' ರೀತಿಯಲ್ಲಿ ನಿಜಜೀವನದಲ್ಲಿಯೂ ಬಿಲ್ಡಪ್ ತೆಗೆದುಕೊಳ್ಳಲು ಹೋದರೆ ಅನಾಹುತ ಕಟ್ಟಿಟ್ಟ ಬುತ್ತಿ. ಅದಕ್ಕೆ ಸಾಕ್ಷಿ ಈ ಘಟನೆ.

ಸಾವನ್ನಪ್ಪಿದ ದುರ್ದೈವಿ

ಶಹಪುರದಲ್ಲಿ ಇರುವ ಮಹುಲಿ ಜಾಲಪಾತದಲ್ಲಿ ಪ್ರಭಾಸ್ ಮಾಡಿದ ಸ್ಟಂಟ್ ಪ್ರಯೋಗಿಸಲು ಹೋಗಿ ಉದ್ಯಮಿ ಇಂದ್ರಪಾಲ್ ಪಾಟೀಲ್ (27) ಎಂಬುವವರು ದುರಂತ ಸಾವನ್ನಪ್ಪಿದ್ದಾರೆ.

ಪೊಲೀಸರು ಹೇಳುವುದೇನು.?

ಶಹಪುರ ಪೊಲೀಸರ ಪ್ರಕಾರ, ಇಂದ್ರಪಾಲ್ ಪಾಟೀಲ್ ರವರ ಜಿಗಿತ 'ಬಾಹುಬಲಿ' ಚಿತ್ರದಿಂದ ಪ್ರೇರಿತವಾಗಿದ್ದು. ''ಯಾರೋ ತಳ್ಳಿದ ಕಾರಣ ಬೀಳುವುದಕ್ಕಿಂತ ಹೆಚ್ಚಾಗಿ ಇಂದ್ರಜಿತ್ ಧುಮುಕಿದರು'' ಎಂದು ಪ್ರತ್ಯಕ್ಷದರ್ಶಿಯೊಬ್ಬರು ಶಹಪುರ ಪೊಲೀಸರಿಗೆ ಹೇಳಿಕೆ ನೀಡಿದ್ದಾರಂತೆ.

ಇಂದ್ರಜಿತ್ ಕುಟುಂಬದವರು ಹೇಳುವುದೇ ಬೇರೆ.!

''ಇದು 'ಬಾಹುಬಲಿ' ಸ್ಟಂಟ್ ನಿಂದ ಆದ ಸಾವಲ್ಲ. ಇಂದ್ರಜಿತ್ ರನ್ನ ಯಾರೋ ಮೇಲಿಂದ ತಳ್ಳಿದ್ದಾರೆ'' ಎಂದು ಇಂದ್ರಜಿತ್ ಸಹೋದರ ಸಂಶಯ ವ್ಯಕ್ತಪಡಿಸಿದ್ದಾರೆ.

ಜಾಲಿ ಮಾಡಲು ಹೋಗಿ....

ಅಸಲಿಗೆ ಮಹುಲಿ ಜಲಪಾತದಲ್ಲಿ ಮಳೆಗಾಲದ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವಂತೆ. ಸ್ನೇಹಿತರ ಜೊತೆಗೆ ಜಾಲಿ ಮಾಡಲು ಬಂದಿದ್ದ ಇಂದ್ರಜಿತ್ ದುರಾದೃಷ್ಟವಶಾತ್ ಪ್ರಾಣಬಿಟ್ಟಿದ್ದಾರೆ.

English summary
Man copies Prabhas's 'Baahubali' stunt, Jumps Mahuli Waterfalls and dies

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada