For Quick Alerts
  ALLOW NOTIFICATIONS  
  For Daily Alerts

  'ಸ್ನೇಹ ಪ್ರೀತಿಗೆ ಸಾಕಾರ ರೂಪ ನಮ್ಮ ವಿಷ್ಣುವರ್ಧನ್': ಸುಮಲತಾ ಅಂಬರೀಶ್

  |

  ಕನ್ನಡ ಚಿತ್ರರಂಗ ಮೇರು ನಟ, ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರು ಅಗಲಿ ಇಂದಿಗೆ 11 ವರ್ಷ ಕಳೆದಿದೆ. ದೈಹಿಕವಾಗಿ ವಿಷ್ಣುದಾದ ಇಲ್ಲವಾದರೂ ಪ್ರತಿಯೊಬ್ಬ ಅಭಿಮಾನಿ ಹೃದಯದಲ್ಲಿ ಹೃದಯವಂತನಾಗಿ ನೆಲೆಸಿದ್ದಾರೆ.

  ವಿಷ್ಣುದಾದ ಅವರ ಹನ್ನೊಂದನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಸಂಪ್ರದಾಯದಂತೆ ರಕ್ತದಾನ, ಅನ್ನದಾನ, ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಗಳು ನಡೆಯುತ್ತಿವೆ. ಅದೇ ರೀತಿ ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣವಾಗುತ್ತಿರುವ ಸ್ಥಳದಲ್ಲಿ ಭಾರತಿ ವಿಷ್ಣುವರ್ಧನ್ ಹಾಗೂ ಕುಟುಂಬ ಪೂಜೆ ಮಾಡಲಿದ್ದಾರೆ.

  ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 11ನೇ ಪುಣ್ಯ ಸ್ಮರಣೆಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 11ನೇ ಪುಣ್ಯ ಸ್ಮರಣೆ

  ವಿಷ್ಣುವರ್ಧನ್ ಅವರ ಪುಣ್ಯ ಸ್ಮರಣೆಯ ವಿಶೇಷವಾಗಿ ಮಂಡ್ಯ ಸಂಸದೆ, ಅಂಬರೀಶ್ ಅವರ ಪತ್ನಿ ಸುಮಲತಾ ಸಾಮಾಜಿಕ ಜಾಲತಾಣದ ಮೂಲಕ ದಾದಾ ಅವರನ್ನು ಸ್ಮರಿಸಿದ್ದಾರೆ.

  ''ಸ್ನೇಹ ಪ್ರೀತಿಗೆ ಸಾಕಾರ ರೂಪವಾಗಿದ್ದ ನಮ್ಮ ವಿಷ್ಣುವರ್ಧನ್ ನಮ್ಮ ಕಣ್ಣ ಮುಂದೆ ಇರದೇ ಇರಬಹುದು. ಆದರೆ ನಮ್ಮ ನಿಶ್ಚಲ ಯೋಚನೆಗಳಲ್ಲಿ, ನಮ್ಮ ಚೈತನ್ಯದ ಯೋಜನೆಗಳಲ್ಲಿ, ನಮ್ಮ ಸಾಕ್ಷಿ ಪ್ರಜ್ಞೆಯಲ್ಲಿ ಮತ್ತು ಎಲ್ಲದಕ್ಕೂ ಹೆಚ್ಚಾಗಿ ನಮ್ಮೆಲ್ಲರ ಸ್ನೇಹದ ಸೇತುವೆಯಾಗಿ ಇನ್ನೂ ಜೀವಂತವಾಗಿದ್ದಾರೆ. #ವಿಷ್ಣು_ಚಿರಾಯು'' ಎಂದು ನೆನಪಿಸಿಕೊಂಡಿದ್ದಾರೆ.

  ಈ ಪೋಸ್ಟ್ ಜೊತೆ ವಿಷ್ಣುವರ್ಧನ್ ಅವರ ಮನೆಯಲ್ಲಿ ಅಂಬರೀಶ್ ಕುಳಿತುಕೊಂಡಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಸೂಕ್ಷ್ಮವಾಗಿ ಈ ಫೋಟೋ ಗಮನಿಸಿದರೆ ಅಂಬರೀಶ್ ಮತ್ತು ವಿಷ್ಣುವರ್ಧನ್ ಅವರ ಸ್ನೇಹ ಹೇಗಿತ್ತು ಎಂಬ ನೆನಪು ಕಾಡುತ್ತದೆ.

  English summary
  Dr Vishnuvardhan 11th death anniversary:​​ Mandya MP and actress Sumalatha ambarish remembered Vishnudada.
  Wednesday, December 30, 2020, 10:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X