For Quick Alerts
  ALLOW NOTIFICATIONS  
  For Daily Alerts

  'ಮನೆ ಮಾರಾಟಕ್ಕಿದೆ' ಟ್ರೈಲರ್: ಕುಂತರೂ ಕಾಮಿಡಿ, ನಿಂತರೂ ಕಾಮಿಡಿ

  |

  ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಸೆನ್ಸೆಷನಲ್ ಕ್ರಿಯೇಟ್ ಮಾಡುತ್ತಿರುವ 'ಕಾಮಿಡಿ ಕಿಂಗ್'ಗಳು ಒಂದೇ ಚಿತ್ರದಲ್ಲಿ ನಟಿಸಿದರೆ ಹೇಗಿರುತ್ತೆ. ಅಂತಹದೊಂದು ಅಪರೂಪದ ಅನುಭವದೊಂದಿಗೆ ತಯಾರಾಗಿದೆ 'ಮನೆ ಮಾರಾಟಕ್ಕಿದೆ' ಸಿನಿಮಾ.

  ಸಾಧು ಕೋಕಿಲಾ, ಚಿಕ್ಕಣ್ಣ, ರವಿಶಂಕರ್ ಗೌಡ, ಕುರಿ ಪ್ರತಾಪ್ ನಾಲ್ಕು ಹಾಸ್ಯ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಮನೆ ಮಾರಾಟಕ್ಕಿದೆ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಖತ್ ಕಾಮಿಡಿಯಾಗಿ ಮೂಡಿ ಬಂದಿದೆ.

  ಶ್ರುತಿ ಹರಿಹರನ್ ಮನೆಯಲ್ಲಿ ನಾಮಕರಣದ ಸಂಭ್ರಮ: ಮಗಳ ಹೆಸರೇನು?ಶ್ರುತಿ ಹರಿಹರನ್ ಮನೆಯಲ್ಲಿ ನಾಮಕರಣದ ಸಂಭ್ರಮ: ಮಗಳ ಹೆಸರೇನು?

  2 ನಿಮಿಷದ ಟ್ರೈಲರ್ ನಲ್ಲಿ ಪ್ರತಿ ದೃಶ್ಯವೂ ಕಾಮಿಡಿಯಿಂದ ಕೂಡಿದೆ. ಮೇಲ್ನೋಟಕ್ಕೆ ಹಾರರ್ ಫೀಲ್ ಕೊಡ್ತಿರುವ ಟ್ರೈಲರ್ ಹಾಸ್ಯದ ಮೂಲಕವೇ ಕತೆ ಹೇಳುತ್ತಿದೆ. ಈ ಟ್ರೈಲರ್ ನೋಡುತ್ತಿದ್ದರೆ ಬಹುಶಃ ಸಿನಿಮಾ ಪೂರ್ತಿ ಪ್ರೇಕ್ಷಕರು ನಕ್ಕುನಗುವ ಸಾಧ್ಯತೆ ಎನ್ನುವುದನ್ನ ಅಲ್ಲೆಗಳೆಯುವಂತಿಲ್ಲ. ಅದಕ್ಕೆ ಸಾಕ್ಷಿ ಈಗ ರಿಲೀಸ್ ಆಗಿರುವ ಟ್ರೈಲರ್.

  ಕಾಮಿಡಿ ಕಿಂಗ್ ಗಳ ಜೊತೆ ಶ್ರುತಿ ಹರಿಹರನ್ ಮುಖ್ಯ ಭೂಮಿಕೆ ನಟಿಸಿದ್ದಾರೆ. ಇವರ ಜೊತೆ ಕಾರುಣ್ಯ ರಾಮ್, ಗಿರಿ, ಶಿವರಾಂ, ಉಗ್ರಂ ಮಂಜು, ಕರಿಸುಬ್ಬು, ಬಾಲ ನಟಿ ಪ್ರಶ್ವಿತಾ ಸೇರಿದಂತೆ ಬಹುದೊಡ್ಡ ಕಲಾವಿದರ ಬಳಗ ಕಾಣಿಸಿಕೊಂಡಿದೆ.

  ಮಂಜು ಸ್ವರಾಜ್ ಈ ಚಿತ್ರವನ್ನ ನಿರ್ದೇಶಿಸಿದ್ದು, ಅಭಿಮಾನ್ ರಾಯ್ ಸಂಗೀತ ನೀಡಿದ್ದಾರೆ. ಎಸ್ ವಿ ಬಾಬು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸುರೇಶ್ ಬಾಬು ಛಾಯಾಗ್ರಹಣ, ಎನ್ ಎಂ ವಿಶ್ವ ಸಂಕಲನವಿದೆ.

  ಸದ್ಯ ಟ್ರೈಲರ್ ಮತ್ತು ಕಲಾವಿದರ ಮೂಲಕ ಸದ್ದು ಮಾಡುತ್ತಿರುವ 'ಮನೆ ಮಾರಾಟಕ್ಕಿದೆ' ಇದೇ ನವೆಂಬರ್ 15 ರಂದು ತೆರೆಗೆ ಬರ್ತಿದೆ.

  English summary
  Chikkanna, Sadhu kokila, Ravi Shankar Gowda, Kuri Prathap, Shruthi Hariharan starrer Mane Maratakkide trailer released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X