For Quick Alerts
  ALLOW NOTIFICATIONS  
  For Daily Alerts

  'ದಾಸನ ಗರಡಿ ಹುಡುಗ ಮನೋಜ್' ಎರಡನೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ

  |

  ಟಕ್ಕರ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಮನೋಜ್ ನಟನೆಯ ಎರಡನೇ ಚಿತ್ರ 'ಧರಣಿ'ಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸಿದೆ. ಮನೋಜ್ ಹುಟ್ಟು ಹಬ್ಬದ ಪ್ರಯುಕ್ತ 'ಧರಣಿ' ಫಸ್ಟ್ ಲುಕ್ ಬಿಡುಗಡೆಯಾಗಿದೆ. "ನನ್ನ ಹಿಂದಿನ ಸಿನಿಮಾದ ಜೊತೆಗೆ ಧರಣಿಯನ್ನು ಹೋಲಿಕೆ ಮಾಡಲೂ ಸಾಧ್ಯವಿಲ್ಲ. ಕೋಳಿ ಪಂದ್ಯದಂತೆಯೇ ಇಲ್ಲಿ ಕೂಡಾ ನೋಡುಗರನ್ನು ರಂಜಿಸುತ್ತಲೇ ಕಾಡುವ ಅಂಶಗಳಿವೆ. ನನ್ನ ಲುಕ್ ಕೂಡಾ ಇಲ್ಲಿ ಬೇರೆಯದ್ದೇ ರೀತಿಯಲ್ಲಿ ನೋಡಬಹುದು. ಇತ್ತೀಚೆಗೆ ಕಟೆಂಟ್ ಇರುವ ಸಿನಿಮಾಗಳನ್ನು ಜನ ಹೆಚ್ಚು ಇಷ್ಟ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಧರಣಿ ಹೊಸ ವಿಚಾರಗಳ ಸುತ್ತ ಆವರಿಸಿಕೊಂಡಿದೆ. ಅದನ್ನು ಕಮರ್ಷಿಯಲ್ ಆಗಿ ರೂಪಿಸುತ್ತಿದ್ದೇವೆ" ಎಂದು ಮನೋಜ್ ಧರಣಿ ಚಿತ್ರದಲ್ಲಿನ ತನ್ನ ಪಾತ್ರ ಹಾಗೂ ಚಿತ್ರದ ಕಂಟೆಂಟ್ ಕುರಿತು ಮಾತನಾಡಿದರು.

  ಇಲ್ಲಿ ಎಲ್ಲವನ್ನೂ ಹೊಚ್ಚ ಹೊಸದಾಗಿ ಹೇಳುತ್ತಿದ್ದೇವೆ. ಪಕ್ಕಾ ಹಳ್ಳಿ ಸೊಗಡಿನ ಸಬ್ಜೆಕ್ಟ್ ಇದಾಗಿದೆ. ಕರ್ನಾಟಕ ಮಾತ್ರವಲ್ಲದೆ ಭಾರತದ ಇತರೆ ರಾಜ್ಯಗಳಲ್ಲೂ ಕೋಳಿ ಪಂದ್ಯ ಬರಿಯ ಮನರಂಜನೆ ಅಲ್ಲದೇ ಅಪಾರ ಪ್ರಮಾಣದ ವಹಿವಾಟು ನಡೆಸುವ ಜೂಜಾಗಿದೆ, ಇದರ ಸುತ್ತ ಧರಣಿ ಕಥಾ ಹಂದರ ತೆರೆದುಕೊಂಡಿದೆ, ಇದಲ್ಲದೇ ಈವರೆಗೆ ಎಲ್ಲೂ ಹೇಳಿರದ ಒಂದಷ್ಟು ವಿಚಾರಗಳೂ ಇಲ್ಲಿ ದೃಶ್ಯರೂಪದಲ್ಲಿ ಅನಾವರಣಗೊಳ್ಳಲಿದೆ ಎಂದು ನಿರ್ದೇಶಕ ಸುಧೀರ್ ಶಾನುಭೋಗ್ ತಮ್ಮ ಚಿತ್ರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

  ಈ ಹಿಂದೆ ವಿನಯ್ ರಾಜ್ ಕುಮಾರ್ ನಟಿಸಿದ್ದ ಅನಂತು ವರ್ಸಸ್ ನುಸ್ರತ್ ಚಿತ್ರವನ್ನು ನಿರ್ದೇಶಿದ್ದ ಸುಧೀರ್ ಶಾನುಭೋಗ್ ಮೇಲೆ ನಿರೀಕ್ಷೆ ಹೆಚ್ಚಿದೆ. ರಾಷ್ಟ್ರ ಪ್ರಶಸ್ತಿ ಪಡೆದ 'ಮದಿಪು' ಚಿತ್ರದ ಭಾಗವಾಗಿದ್ದ, ಹೊಸತನದಿಂದ ಮೂಡಿಬಂದಿದ್ದ 'ಅಳಿದು ಉಳಿದವರು' ಸಿನಿಮಾಗೆ ಕಥೆಯನ್ನೂ ಸಹ ಸುಧೀರ್ ಶಾನಭೋಗ್ ಬರೆದಿದ್ದರು. ರಾಮರಾಮರೇ ಖ್ಯಾತಿಯ ನಟರಾಜ್ ಅಭಿನಯದ 'ಮಾರೀಚ' ಬಿಡುಗಡೆಗೆ ತಯಾರಾಗಿದೆ. ಈ ಚಿತ್ರಕ್ಕೂ ಸಹ ಸುದೀರ್ ಶಾನಭೋಗ್ ನಿರ್ದೇಶನವಿದೆ. ಇನ್ನು ಈ ಚಿತ್ರಕ್ಕೆ ಜಿ.ಕೆ.ಉಮೇಶ್ ಹಾಗೂ ಕೆ. ಗಣೇಶ್ ಐತಾಳ್ ಯಂಗ್ ಥಿಂಕರ್ಸ್ ಫಿಲಂಸ್ ಅಡಿಯಲ್ಲಿ ಅವರು ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣ, ಅರುಣೋದಯ ಕಥೆ, ಶ್ರೀನಿಧಿ ಡಿ ಎಸ್ ಸಂಭಾಷಣೆ ಜೊತೆಗೆ ಡಾ.ವಿ.ನಾಗೇಂದ್ರ ಪ್ರಸಾದ್ ಹಾಗೂ ಶಿವಕುಮಾರ್ ಮಾವಲಿ ಅವರ ಸಾಹಿತ್ಯ ಇದೆ.

  English summary
  Manoj and Sudheer Shanbhog combo's Dharani movie firstlook released. Take a look
  Tuesday, January 17, 2023, 19:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X