For Quick Alerts
  ALLOW NOTIFICATIONS  
  For Daily Alerts

  ಮೋನಿಕಾ ಜೊತೆ ಸಪ್ತಪದಿ ತುಳಿದ ಮನೋಮೂರ್ತಿ ಪುತ್ರ ನವೀನ್

  |

  ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಅವರ ಪುತ್ರ ನವೀನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲ ಗೆಳತಿ ಮೋನಿಕಾ ಜೊತೆ ಇಂದು ಹೊಸ ಜೀವನ ಆರಂಭಿಸಿದ್ದಾರೆ.

  ಚಿಕಾಗೋದಲ್ಲಿಂದು ಸರಳವಾಗಿ ಇವರಿಬ್ಬರ ಮದುವೆ ನೆರವೇರಿದ್ದು, ಕೇವಲ ಕುಟುಂಬಸ್ಥರು ಮತ್ತು ಕೆಲವೇ ಕೆಲವು ಆಪ್ತರು ಮಾತ್ರ ಭಾಗಿಯಾಗಿದ್ದರು.

  ವೈವಾಹಿಕ ಜೀವನಕ್ಕೆ ಕಾಲಿಟ್ಟ ಖ್ಯಾತ ನಟ ರಾಜ್ ದೀಪಕ್ ಶೆಟ್ಟಿ

  ಮೋನಿಕಾ ಮೂಲತಃ ಗುಜರಾತಿ ಮೂಲಕದ ಡಾಕ್ಟರ್. ನವೀನ್​ ಕೂಡ ಅಮೆರಿಕಾದಲ್ಲಿ ಸರ್ಜನ್​ ಆಗಿದ್ದಾರೆ. ಪ್ರಸ್ತುತ, ತಂದೆ-ತಾಯಿ ಜೊತೆಗೆ ಅಮೆರಿಕಾದಲ್ಲ್ಲೇ ನವೀನ್​ ವಾಸವಾಗಿದ್ದಾರೆ.

  ಕನ್ನಡ ಚಿತ್ರರಂಗದ ಸಂಗೀತ ಲೋಕದಲ್ಲಿ ತನ್ನ ಹಾಡುಗಳ ಮೂಲಕ ಸಂಚಲನ ಸೃಷ್ಟಿಸಿದ್ದ ಮನೋಮೂರ್ತಿ ಕಳೆದ ಹಲವು ವರ್ಷಗಳಿಂದ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ.

  ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ಆದ ರಾಗಿಣಿ | Ragini Hospitalised | Filmibeat Kannada

  ಅಮೆರಿಕ, ಅಮೆರಿಕ, ಚೆಲುವಿನ ಚಿತ್ತಾರ, ಗೆಳೆಯ, ಮಾತಾಡ್ ಮಾತಾಡ್ ಮಲ್ಲಿಗೆ, ಈ ಬಂಧನ, ಮುಂಗಾರು ಮಳೆ, ಮಿಲನ, ಅಮೃತಧಾರೆ, ಮೊಗ್ಗಿನ ಮನಸ್ಸು, ಹಾಗೆ ಸುಮ್ಮನೆ ಸೇರಿದಂತೆ ಹಲವು ಹಿಟ್ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

  English summary
  Kannada Music director mano murthy son naveen got married with his close friend.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X