ಮನೋರಂಜನ್ 'ಸಾಹೇಬ' ತೆರೆಗೆ ಬರಲು ದಿನಾಂಕ ನಿಕ್ಕಿ ಆಯ್ತು
ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ರವರ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ ಚೊಚ್ಚಲ ಚಿತ್ರ 'ಸಾಹೇಬ' ಸಿನಿ ಪ್ರೇಮಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ತಮ್ಮ ಮೊದಲ ಚಿತ್ರದಲ್ಲೇ ಅದ್ಧೂರಿ ಪರ್ಫಾಮೆನ್ಸ್ ಕಣ್ಣು ಉಬ್ಬೇರಿಸಿ ನೋಡುವಂತಹ ಡ್ಯಾನ್ಸ್, ಖಡಕ್ ಡೈಲಾಗ್ ಮತ್ತು ಜಬರ್ ದಸ್ತ್ ಫೈಟ್ಸ್ ಗಳ ಮೂಲಕ ಮನೋರಂಜನ್ ಗಮನ ಸೆಳೆದಿದ್ದಾರೆ. ಈ ಚಿತ್ರದ ಬಿಡುಗಡೆ ದಿನಾಂಕವೀಗ ನಿಕ್ಕಿಯಾಗಿದೆ.[ಟ್ರೈಲರ್: ಕ್ರೇಜಿಸ್ಟಾರ್ ಹಾದಿಯಲ್ಲೇ ಕ್ರೇಜಿಪುತ್ರನ 'ಸಾಹೇಬ' ಎಂಟ್ರಿ]
ಹೌದು, ಮನೋರಂಜನ್ ಗೆ 'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ ಶ್ರೀವಾತ್ಸವ್ ಜೊತೆಯಾಗಿ ನಟಿಸಿರುವ 'ಸಾಹೇಬ' ಚಿತ್ರ ಜೂನ್ 9 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

'ಸಾಹೇಬ' ಚಿತ್ರದಲ್ಲಿನ 5 ಹಾಡುಗಳು ಕೇಳುಗರನ್ನು ವಿಪರೀತ ಸೆಳೆದಿದ್ದು, ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ನೀಡಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ವಿ.ರವಿಚಂದ್ರನ್ ರವರ 'ನಾನು ನನ್ನ ಹೆಂಡ್ತಿ' ಚಿತ್ರದ 'ಯಾರೇ ನೀನು ರೋಜಾ ಹೂವೆ... ಯಾರೇ ನೀನು ಮಲ್ಲಿಗೆ ಹೂವೆ' ಹಾಡನ್ನು ಅಳವಡಿಸಿಕೊಂಡಿರುವುದು ಹೆಚ್ಚು ಗಮನ ಸೆಳೆದಿದೆ. ಇತರೆ ಹಾಡುಗಳಿಗೆ ಜಯಂತ್ ಕಾಯ್ಕಿಣಿ ರವರು ಸಾಹಿತ್ಯ ಬರೆದಿದ್ದಾರೆ.[ವಿಪರೀತ ಸೆಳೆದ 'ಸಾಹೇಬ' ನ ಹಾಡುಗಳನ್ನು ಕೇಳಿದ್ರ?]
ಅಂದಹಾಗೆ ಈ ಚಿತ್ರಕ್ಕೆ ಭರತ್ ಆಕ್ಷನ್ ಕಟ್ ಹೇಳಿದ್ದು, ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











