»   » 'ಬೃಹಸ್ಪತಿ' ನೋಡಿ ಅದ್ಧೂರಿ ಸ್ವಾಗತ ಕೋರಿದ ಕನ್ನಡಿಗರು

'ಬೃಹಸ್ಪತಿ' ನೋಡಿ ಅದ್ಧೂರಿ ಸ್ವಾಗತ ಕೋರಿದ ಕನ್ನಡಿಗರು

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ 'ಬೃಹಸ್ಪತಿ' ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ರೀಮೆಕ್ ಸಿನಿಮಾವಾದರು ಕನ್ನಡಕ್ಕೆ ಬೇಕಾಗುವಂತೆ ಕಥೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ ನಿರ್ದೇಶಕ ನಂದಕಿಶೋರ್. ಟೀಸರ್ ರಿಲೀಸ್ ಮಾಡಿದ 'ಬೃಹಸ್ಪತಿ' ಟೀಂ ಇದೀಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ.

'ಸಾಹೇಬ' ಸಿನಿಮಾದ ನಂತರ 'ಬೃಹಸ್ಪತಿ'ಯಾಗಿ ಬರುತ್ತಿರುವ ಮನೋರಂಜನ್ ಎರಡನೇ ಚಿತ್ರಕ್ಕೆ ಸಾಕಷ್ಟು ನಿರೀಕ್ಷೆಗಳು ಹುಟ್ಟುಕೊಂಡಿದೆ. ಹಾಡುಗಳು ಹಿಟ್ ಆಗಿರುವ ಈ ಚಿತ್ರದ ಬಗ್ಗೆ ಸುಳಿವು ನೀಡಲು ಚಿತ್ರತಂಡ ಸಣ್ಣ ಪ್ರಯತ್ನ ಮಾಡಿದೆ.

ಸದ್ಯ ಬಿಡುಗಡೆಯಾಗಿರುವ 'ಬೃಹಸ್ಪತಿ' ಚಿತ್ರದ ಟ್ರೇಲರ್ ವಿಶೇಷತೆಗಳು ಏನು..? ಮನೋರಂಜನ್ ಅಭಿನಯಕ್ಕೆ ಅಭಿಮಾನಿಗಳು ನೀಡಿರುವ ಅಭಿಪ್ರಾಯವೇನು ಎಂಬುದು ಮುಂದಿದೆ ಓದಿ...

ಭರವಸೆ ಮೂಡಿಸುತ್ತಿದ್ದಾನೆ 'ಬೃಹಸ್ಪತಿ'

ಹಾಡುಗಳ ತುಣುಕು, ಸ್ಟಂಟ್ಸ್ ಹಾಗೂ ಡೈಲಾಗ್ ಇರುವ 'ಬೃಹಸ್ಪತಿ' ಚಿತ್ರದ ಹೊಸ ಟ್ರೇಲರ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೊಸ ವರ್ಷಕ್ಕೆ ಚಂದನವನದಲ್ಲಿ ಮೊದಲ ಸಿನಿಮಾ ಆಗಿ 'ಬೃಹಸ್ಪತಿ' ಬಿಡುಗಡೆಯಾಗುತ್ತಿದೆ.

ರವಿಚಂದ್ರನ್ ಮಗನ 2ನೇ ಸಿನಿಮಾ ಜನವರಿಯಲ್ಲಿ ರಿಲೀಸ್

ಡೈಲಾಗ್ ಕಿಂಗ್ ಜೊತೆ ಮನೋರಂಜನ್

ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿರುವ 'ಬೃಹಸ್ಪತಿ' ಚಿತ್ರವನ್ನು ಸ್ಟಾರ್ ನಿರ್ದೇಶಕ ನಂದಕಿಶೋರ್ ಡೈರೆಕ್ಟ್ ಮಾಡಿದ್ದಾರೆ. ಬಾಲಿವುಡ್ ನ ಮಿಷ್ಟಿ ಚಕ್ರವರ್ತಿ ನಾಯಕಿಯಾಗಿ ಸಿನಿಮಾದಲ್ಲಿ ಅಭಿನಯಿಸಿದ್ದು ಪ್ರಕಾಶ್ ಬೆಳವಾಡಿ, ಅವಿನಾಶ್, ಸಾಯಿಕುಮಾರ್ ಇನ್ನೂ ಅನೇಕರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಡಿಯೋ : ಮನೋರಂಜನ್ 'ಬೃಹಸ್ಪತಿ' ಚಿತ್ರದ ಟೀಸರ್ ಬಿಡುಗಡೆ

ಆಕ್ಷನ್ ಚಿತ್ರದಲ್ಲಿ ಅಭಿನಯಿಸಲು ಸಲಹೆ

'ಸಾಹೇಬ' ಚಿತ್ರದ ಅಭಿನಯಕ್ಕೂ 'ಬೃಹಸ್ಪತಿ' ಚಿತ್ರಕ್ಕೂ ನಟ ಮನೋರಂಜನ್ ಸಾಕಷ್ಟು ಬದಲಾವಣೆ ಆಗಿರುವುದು ಟ್ರೇಲರ್ ನಲ್ಲಿ ಕಾಣುತ್ತದೆ ಎಂದಿದ್ದಾರೆ ಫ್ಯಾನ್ಸ್. ಆಕ್ಷನ್ ಸಿನಿಮಾದಲ್ಲಿ ಮನೋರಂಜನ್ ಅವರನ್ನ ನೋಡುವ ಆಸೆಯಿದೆ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ.

ಮನೋರಂಜನ್ ಡ್ಯಾನ್ಸ್ ಮೆಚ್ಚಿದ ಫ್ಯಾನ್ಸ್

ಟ್ರೇಲರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ. ಮನೋರಂಜನ್ ಡ್ಯಾನ್ಸ್ ಮತ್ತು ಡೈಲಾಗ್ ಡೆಲೆವರಿಗೆ ಮೆಚ್ಚುಗೆಯನ್ನ ವ್ಯಕ್ತ ಪಡಿಸಿದ್ದಾರೆ.

English summary
Manoranjan's Kannada movie ' Bruhaspathi' movie new Theatrical trailer has been released, Ravichandran's son Manoranjan has acted as the hero,The film is being released on January 5 (2018) bollywood actress Mishti Chakraborty female lead opposite Manoranjan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X