twitter
    For Quick Alerts
    ALLOW NOTIFICATIONS  
    For Daily Alerts

    ಮಂಸೋರೆ ಹೊಸ ಸಿನಿಮಾ '19 20 21'ದ ಪೋಸ್ಟರ್‌ ರಿಲೀಸ್: ಏನದು UAPA ಕಾಯ್ದೆ?

    |

    ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸಿನಿಮಾಗಳನ್ನು ನೀಡುವ ನಿರ್ದೇಶಕ ಮಂಸೋರೆ. ಇವರು ನಿರ್ದೇಶಿಸೋ ಸಿನಿಮಾಗಳು ಅಂದರೆ ಕಾಯ್ಕೊಂಡು ಕೂರುವ ಒಂದು ವರ್ಗವೇ ಇದೆ. ಚರ್ಚೆ ಹುಟ್ಟಿಸುವಂತಹ ಕಥೆಯನ್ನು ಹೆಣೆದು ತೆರೆಮೇಲೆ ರಂಜಿಸುವಂತಹ ಸಿನಿಮಾವನ್ನೇ ನಿರ್ದೇಶನ ಮಾಡುತ್ತಾ ಬಂದಿದ್ದಾರೆ.

    ಈಗ ಮಂಸೋರೆ ಬತ್ತಳಿಕೆಯಿಂದ ಮತ್ತೊಂದು ಸಿನಿಮಾ ಸಿದ್ಧವಾಗುತ್ತಿದೆ. ಅದುವೇ '19 20 21'. ಅಸಲಿಗೆ ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಆಗಿದ್ದರೂ, ಈ ಟೈಟಲ್‌ನಲ್ಲೇ ಕುತೂಹಲವನ್ನು ಕೆರಳಿಸಿದ್ದರು. ಈ ಸ್ವಾತಂತ್ರ್ಯ ದಿನದ ಅಂಗವಾಗಿ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಆ ಪೋಸ್ಟರ್ ಈಗ ಗಮನ ಸೆಳೆಯುತ್ತಿದೆ.

    ನಾನು, ಸಂಚಾರಿ ವಿಜಯ್ ಹಾಗೂ ರಾಷ್ಟ್ರೀಯ ಹೆದ್ದಾರಿ 4: ಮಂಸೋರೆಯ ನೆನೆಪುಗಳಿಂದನಾನು, ಸಂಚಾರಿ ವಿಜಯ್ ಹಾಗೂ ರಾಷ್ಟ್ರೀಯ ಹೆದ್ದಾರಿ 4: ಮಂಸೋರೆಯ ನೆನೆಪುಗಳಿಂದ

    ಪೋಸ್ಟರ್‌ನಲ್ಲಿ ಏನಿದೆ ಹೈಲೈಟ್

    ಪೋಸ್ಟರ್‌ನಲ್ಲಿ ಏನಿದೆ ಹೈಲೈಟ್

    ನೈಜ ಘಟನೆಯನ್ನು ಆಧಾರಾವಾಗಿಟ್ಟುಕೊಂಡು ನಿರ್ಮಿಸಿಸುತ್ತಿರುವ '19 20 21' ಸಿನಿಮಾವಿದು. ಮಂಸೋರೆ ಮತ್ತೆ ಪ್ರೇಕ್ಷಕರ ಅದ್ಯಾವ ಘಟನೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋದೇ ಕುತೂಹಲ. 75ನೇ ಸ್ವಾತಂತ್ರ್ಯದ ಸಂಭ್ರಮದಲ್ಲಿ ಮಂಸೋರೆ ತಮ್ಮ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಿರುವುದೇ ಇಷ್ಟಕ್ಕೆಲ್ಲಾ ಕಾರಣ. ಅಷ್ಟಕ್ಕೂ '19 20 21'ರಲ್ಲಿ ಮಂಸೋರೆ ವ್ಯಕ್ತಿಯ ಬಾಯಿಗೆ ಬಟ್ಟೆ ಕಟ್ಟಿರೋ ಫೋಸ್ಟರ್ ಅನ್ನು ರಿಲೀಸ್ ಮಾಡಿದ್ದಾರೆ. ಇದು '2018ರಿಂದ 2022ರ ತನಕ UAPA ಕಾಯ್ದೆ ಅಡಿಯಲ್ಲಿ ಬಂಧನಕ್ಕೆ ಒಳಗಾದ 4690 ಜನರಲ್ಲಿ ಕೇವಲ 149 ಮಂದಿ ಮಾತ್ರ ಅಪರಾಧಿಗಳು' ಎಂಬ ಮಾಹಿತಿಯನ್ನು ಈ ಪೋಸ್ಟರ್​ನಲ್ಲಿ ನೀಡಿದ್ದಾರೆ.

    ಸಂಚಾರಿ ವಿಜಯ್ ಹುಟ್ಟುಹಬ್ಬ: ಅಗಲಿದ ಜೀವದ ಮಧುರ ನೆನಪುಸಂಚಾರಿ ವಿಜಯ್ ಹುಟ್ಟುಹಬ್ಬ: ಅಗಲಿದ ಜೀವದ ಮಧುರ ನೆನಪು

    ಏನಿದು 'ಯುಎಪಿಎ ಕಾಯ್ದೆ'?

    ಏನಿದು 'ಯುಎಪಿಎ ಕಾಯ್ದೆ'?

    ಯುಎಪಿಎ ಕಾಯ್ದೆ ಪ್ರಕಾರ, ಯಾವುದೇ ವ್ಯಕ್ತಿ ಅಥವಾ ಗುಂಪು ಭಾರತದ ಭೂ ಪ್ರದೇಶದಲ್ಲಿ ಪ್ರತ್ಯೇಕತೆಗಾಗಿ ಆಗ್ರಹಿಸಿದರೆ, ಬೆಂಬಲಿಸಿದರೆ ಅಥವಾ ದೇಶದ ಸಾರ್ವಭೌಮತೆ ಹಾಗೂ ಅಖಂಡತೆಯನ್ನು ಪ್ರಶ್ನಿಸುವಂತಹ ಚಟುವಟಿಕೆಗಳಲ್ಲಿ ಭಾಗಿಯಾದರೆ, ಅಂತಹ ವ್ಯಕ್ತಿ ಹಾಗೂ ಗುಂಪನ್ನು ಕಾನೂನು ಬಾಹಿರ ಎಂದು ಪರಿಗಣಿಸಬಹುದು." ಎಂದು ಈ ಕಾಯ್ಡೆಯಲ್ಲಿ ಹೇಳಲಾಗಿದೆ. ಯುಎಪಿಎ ಅನ್ನು 'ಕಾನೂನು ಬಾಹಿರ ಚಟುವಟಿಗಳ ಕಾಯ್ದೆ' ಎಂತಲೂ ಕರೆಯುತ್ತಾರೆ. ಈಗಾಗಲೇ ಈ ಕಾಯ್ದೆಯನ್ನು ಕೆಲವು ಬಾರಿ ತಿದ್ದುಪಡಿ ಮಾಡಲಾಗಿದೆ. ಇತ್ತೀಚೆಗೆ ಕಾನೂನುಬಾಹಿರ ಚಟುವಟಿಗಳ ಕಾಯ್ಡೆ ದುರುಪಯೋಗ ಆಗುತ್ತಿದೆ. ಹೀಗಾಗಿ ಈಗೀರುವ ಸ್ವರೂಪವನ್ನು ಉಳಿಸಿಕೊಳ್ಳಬಾರದು ಎಂಬ ಕೂಗು ಕೇಳಿಬಂದಿತ್ತು. ಈಗ ಮಂಸೋರೆ ಇದೇ ಕಾಯ್ದೆಯ ಹಿನ್ನೆಲೆಯಲ್ಲಿ ನೈಜ ಘಟನೆಗಳನ್ನು ಆಧರಿಸಿ ಮಸೋರೆ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುಳಿವನ್ನು ಪೋಸ್ಟರ್‌ನಲ್ಲಿ ನೀಡಿದೆ.

    '19 20 21' ಸಿನಿಮಾ ಸಂಚಲನ

    '19 20 21' ಸಿನಿಮಾ ಸಂಚಲನ

    '19 20 21' ನೈಜ ಘಟನೆಯಾಧಾರಿತ ಚಿತ್ರವಾಗಿದ್ದರಿಂದ ಮಂಸೋರೆ ಪಾತ್ರಗಳನ್ನು ಕೂಡ ಹಾಗೆಯೇ ಆಯ್ಕೆ ಮಾಡಿಕೊಂಡಿದ್ದಾರೆ. ಬಾಲಾಜಿ ಮನೋಹರ್, ಎಂಡಿ ಪಲ್ಲವಿ, ಶೃಂಗ, ಸಂಪತ್ ಮೈತ್ರೇಯ, ಅವಿನಾಶ್, ಕೃಷ್ಣ ಹೆಬ್ಬಾಲೆ ಮುಂತಾದ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮಂಸೋರೆ ಹಾಗೂ ವೀರೇಂದ್ರ ಮಲ್ಲಣ್ಣ ಚಿತ್ರಕಥೆ ರಚಿಸಿದ್ದಾರೆ. ಅವಿನಾಶ್ ಜಿ ಮತ್ತು ವೀರೇಂದ್ರ ಮಲ್ಲಣ್ಣ ಸಂಭಾಷಣೆ ಬರೆದಿದ್ದಾರೆ.

    'ಆ್ಯಕ್ಟ್​-1978' ಬಳಿಕ '19 20 21'

    'ಆ್ಯಕ್ಟ್​-1978' ಬಳಿಕ '19 20 21'

    '19 20 21' ಸಿನಿಮಾ ಈಗಾಗಲೇ ಚಿತ್ರೀಕರಣ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. 'ಆ್ಯಕ್ಟ್​-1978' ಸಿನಿಮಾ ಬಳಿಕ ಅದೇ ನಿರ್ಮಾಪಕ ದೇವರಾಜ್​ ಈ ಚಿತ್ರಕ್ಕೂ ಹಣ ಹೂಡಿದ್ದಾರೆ. 'ಆ್ಯಕ್ಟ್​-1978' ಸಿನಿಮಾದಂತೆಯೇ ಈ ಸಿನಿಮಾ ಕೂಡ ಗಮನ ಸೆಳೆಯಬಹುದು ಎನ್ನುವ ನಿರೀಕ್ಷೆಯಿದೆ.

    Recommended Video

    ತಂದೆ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಮಾಡಿದ KGF ಡೈರೆಕ್ಟರ್ | Filmibeat Kannada

    English summary
    Mansore Directed New Movie 19 20 21 Poster Creating Buzz In Sandalwood, Know More.
    Monday, August 15, 2022, 17:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X