For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ರಿಂದ ಮಂತ್ರಾಲಯ ಮಠಕ್ಕೆ ದೇಣಿಗೆ ಬಂದಿಲ್ಲ

  |

  ಗುರುರಾಘವೇಂದ್ರರ ಪರಮ ಭಕ್ತ ಸ್ಟೈಲ್ ಕಿಂಗ್ ರಜನಿಕಾಂತ್ ಮಂತ್ರಾಲಯ ಮಠಕ್ಕೆ ಹತ್ತು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎನ್ನುವ ಮಾಧ್ಯಮಗಳಲ್ಲಿ ಹರಡಿದ ಸುದ್ದಿಯ ಬಗ್ಗೆ ಮಠ ಸ್ಪಷ್ಟೀಕರಣ ನೀಡಿದೆ.

  ಇದುವರೆಗೆ ರಜನಿಕಾಂತ್ ಅವರಿಂದ ಯಾವುದೇ ದೇಣಿಗೆ ಮಠಕ್ಕೆ ಬಂದಿಲ್ಲ ಎಂದು ಮಠದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

  ಶ್ರೀ ಸುಶಮೀಂದ್ರ ಯತಿಗಳು ರಜನಿಕಾಂತ್ ಅವರ ಧರ್ಮಪತ್ನಿ ಲತಾ ಅವರ ಬಳಿ ಮಂತ್ರಾಲಯದಲ್ಲಿ ನಡೆಯುವ ಮೂರು ಕೆಲಸಗಳಿಗೆ ಆರ್ಥಿಕ ದೇಣಿಗೆ ನೀಡಬೇಕೆಂದು ಕೇಳಿದ್ದಾರೆ . ನಾವು ರಜನಿಕಾಂತ್ ಅವರ ಬಳಿ ಈ ಸಂಬಂಧ ಇದುವರೆಗೆ ಮಾತುಕತೆ ನಡೆಸಿಲ್ಲ ಎಂದು ಮಠದ ಅಧಿಕಾರಿಗಳು ಹೇಳಿದ್ದಾರೆ.

  ರಜನಿಕಾಂತ್ ಅವರ ಪತ್ನಿಯಿಂದ ಯಾವುದೇ ಖಚಿತ ಭರವಸೆ ಬಂದಿಲ್ಲ. ನಾವು ಹತ್ತು ಕೋಟಿ ರೂಪಾಯಿ ದೇಣಿಗೆ ಕೇಳಿದ್ದೇವೆ ಎಂದು ಮಂತ್ರಾಲಯ ರಾಯರ ಮಠದ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

  ರಜನಿಕಾಂತ್ ಅವರು ಏನು ದೇಣಿಗೆ ನೀಡುತ್ತಾರೋ ಅದನ್ನು ಮಠ ಸ್ವೀಕರಿಸುತ್ತದೆ. ಅವರು ನೀಡುವ ಮೊತ್ತವನ್ನು ಮಾಧ್ಯಮಗಳ ಮೂಲಕ ಭಕ್ತರಿಗೆ ತಿಳಿಸುತ್ತೇವೆ ಎಂದು ಮಠದ ಅಧಿಕಾರಿಗಳು ಹೇಳಿದ್ದಾರೆ.

  ಆಂಧ್ರಪ್ರದೇಶದ ಕರ್ನೂರು ಜಿಲ್ಲೆಯ ವಿಶ್ವವಿಖ್ಯಾತ ಪುಣ್ಯಕ್ಷೇತ್ರ ಮಂತ್ರಾಲಯಕ್ಕೆ ಇತೀಚೆಗೆ ರಜನಿಕಾಂತ್ ಭೇಟಿ ನೀಡಿ, ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ 10 ಕೋಟಿ ರೂಪಾಯಿಗಳನ್ನು ದಾನವಾಗಿ ನೀಡಿದ್ದಾರೆ ಎಂದು ಈ ಹಿಂದೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.

  English summary
  In a statement Mantralaya Raghavendra Math has clarified that they have not ( yet) received any donation from actor Rajanikanth. It was reported that Rajani has donated Rs 10 crore to the Math.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X