»   » ಸ್ಯಾಂಡಲ್‍ವುಡ್‍ ನಲ್ಲಿ ಸ್ಟಾರ್ ವಾರ್ಸ್ ಪುನರಾರಂಭ

ಸ್ಯಾಂಡಲ್‍ವುಡ್‍ ನಲ್ಲಿ ಸ್ಟಾರ್ ವಾರ್ಸ್ ಪುನರಾರಂಭ

Posted By:
Subscribe to Filmibeat Kannada

ದರ್ಶನ್‍ ಅಭಿನಯದ ಬಹುಕೋಟಿ ವೆಚ್ಚದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಚಿತ್ರ ಬಿಡುಗಡೆಯಾಗುವುದನ್ನೇ ಕಾಯುತ್ತಿದ್ದ ಗಾಂಧಿನಗರದ ಮಂದಿಗಳು ಇದೀಗ ತಮ್ಮತಮ್ಮ ಚಿತ್ರಗಳನ್ನು ಬಿಡುಗಡೆಮಾಡಲು ದಿನಾಂಕ ನಿಗದಿ ಪಡಿಸುತ್ತಿದ್ದಾರೆ.

ನವೆಂಬರ್ ಒಂದರಂದು ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಈ ವಾರದಲ್ಲಿ ಪೈಪೋಟಿ ನೀಡಲು ಯಾರೂ ಮುಂದೆ ಬರುತ್ತಿಲ್ಲ ಎನ್ನುವುದು ಗಾಂಧಿನಗರದ ಸುದ್ದಿ. ಆದರೆ ಕೊನೆ ಘಳಿಗೆಯಲ್ಲಿ ವ್ಯತ್ಯಾಸ ಕಂಡುಬಂದರೂ ಅಚ್ಚರಿ ಪಡಬೇಕಿಲ್ಲ.

ಆದರೆ ಸ್ಟಾರ್ ನಟರ ಸಿನಿಮಾಗಳು ಒಂದರ ಹಿಂದೊಂದರಂತೆ ಬಿಡುಗಡೆಯಾಗಲು ಮುಂದಿನ ವಾರದಿಂದ ದಿನಾಂಕ ನಿಗದಿಪಡಿಸಲು ಚಿತ್ರತಂಡ ಸಜ್ಜಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಯೋಗರಾಜ್ ಭಟ್ಟರ ಡ್ರಾಮಾ', ಸುಮನಾ ಕಿತ್ತೂರ್ ನಿರ್ದೇಶನದ ಎದೆಗಾರಿಕೆ', ಸುದೀಪ್ ಅಭಿನಯಿಸಿರುವ ವರದನಾಯಕ', ಆರ್.ಚಂದ್ರು ನಿರ್ಮಾಣದ 'ಚಾರ್‍ಮಿನಾರ್', ಜೋಗಿ ಪ್ರೇಮ್ ಅಭಿನಯದ 'ಪ್ರೇಮ್ ಅಡ್ಡ' ಮತ್ತು ಎ ಎಂ ಆರ್ ರಮೇಶ್ ಅವರ 'ಅಟ್ಟಹಾಸ'.

Many big budget Kannada Movies ready for release

ಭಟ್ಟರ ಡ್ರಾಮಾ' ನವೆಂಬರ್ ಮೂರನೇ ಅಥವಾ ಕೊನೆಯ ವಾರದಲ್ಲಿ ತೆರೆ ಕಾಣಬಹುದು. ಅದರ ಬೆನ್ನಲ್ಲೇ ಆದಿತ್ಯ ಅಭಿನಯದ ಎದೆಗಾರಿಕೆ ಮತ್ತು ಪ್ರೇಮ್ ಅಭಿನಯದ 'ಪ್ರೇಮ್ ಅಡ್ಡ' ರಿಲೀಸ್ ಆಗಲಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ನವೆಂಬರ್ 15ರೊಳಗೆ ಆಡಿಯೋ ಬಿಡುಗಡೆ ಮಾಡಿ, ಡಿಸೆಂಬರ್ ಮೊದಲನೇ ಅಥವಾ ಎರಡನೇ ವಾರದಲ್ಲಿ ಸಮಸ್ತ ಕನ್ನಡ ಜನತೆಗೆ ಚಾರ್‍ಮಿನಾರ್' ತೋರಿಸುವ ತಯಾರಿಯಲ್ಲಿದ್ದಾರೆ ಚಂದ್ರು.

ಎಲ್ಲಾ ಅಡೆತಡೆಗಳನ್ನು ನಿವಾರಿಸಿ ನವೆಂಬರ್ 9 ಅಥವಾ 16ರಂದು ಅಟ್ಟಹಾಸ ಚಿತ್ರ ಬಿಡುಗಡೆ ಕನ್ಫರ್ಮ್ ಎಂದಿದ್ದಾರೆ ನಿರ್ದೇಶಕ ಮತ್ತು ನಿರ್ಮಾಪಕ ರಮೇಶ್.

ಇಷ್ಟೆಲ್ಲಾ ಚಿತ್ರಗಳ ನಡುವೆ ಕೋಮಲ್, ಗಣೇಶ್, ಯೋಗೇಶ್ ಅಭಿನಯದ ಸಿನಿಮಾಗಳೂ ತೆರೆ ಕಾಣಲಿವೆ. ಡಿಸೆಂಬರ್ ಕೊನೆಯ ವಾರಕ್ಕೆ ಪುನೀತ್ ರಾಜ್‍ಕುಮಾರ್ ಅಭಿನಯದ ಯಾರೇ ಕೂಗಾಡಲಿ' ತನ್ನ ಕೂಗಾಟ ಶುರುಹಚ್ಚಿಕೊಳ್ಳಬಹುದು. ಶಿವರಾಜ್ ಕುಮಾರ್ ಅಭಿನಯದ ಲಕ್ಷ್ಮಿ ಚಿತ್ರ ಕೂಡಾ ಬಿಡುಗಡೆ ಹಂತದಲ್ಲಿದೆ.

ಇನ್ನು ಲೂಸ್ ಮಾದ ಯಾನೆ ಯೋಗಿ ಅಭಿನಯದ ಸಿನಿಮಾಗಳ ಸಂಖ್ಯೆಯೇ ಮೂರಿದೆ. ಅದರಲ್ಲಿ ಯಾವುದು ಬಿಡುಗಡೆಯಾಗುವುದೋ ಕಾದು ನೋಡಬೇಕು. ಇಷ್ಟೆಲ್ಲಾ ಸ್ಟಾರ್ ಚಿತ್ರಗಳ ನಡುವೆ ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳನ್ನು ಎದುರಿಗೆ ಸೆಣಸಬೇಕಾದ ಪರಿಸ್ಥಿತಿಯಲ್ಲಿದೆ ಸ್ಯಾಂಡಲ್‍ವುಡ್.

ಅಂತೂ ಸ್ಟಾರ್ ವಾರ್ ಗ್ಯಾರಂಟಿ ಎನ್ನುವ ಲೆಕ್ಕಾಚಾರ ಹಾಕುತ್ತಿದೆ ಗಾಂಧಿನಗರ.

English summary
After release of Songolli Rayanna, many big budget Kannada movies are planning to release their movies from third week of November onwards.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada