For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಖಳನಟಿ 'ಮಾರಿಮುತ್ತು' ಸರೋಜಮ್ಮ ಇನ್ನಿಲ್ಲ

  By Suneetha
  |

  ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪೇಂದ್ರ' ಚಿತ್ರದಲ್ಲಿ 'ಮಾರಿಮುತ್ತು' ಪಾತ್ರ ವಹಿಸಿ ತದನಂತರ ಅದೇ ಹೆಸರಿನಲ್ಲಿ ಖ್ಯಾತಿ ಗಳಿಸಿದ 60 ವರ್ಷ ವಯಸ್ಸಿನ ನಟಿ ಸರೋಜಮ್ಮ ಅವರು ಹೃದಯಾಘಾತದಿಂದ ಶನಿವಾರ (ಜೂನ್ 25) ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.

  ಶನಿವಾರ ಮುಂಜಾನೆ 12ರ ಸಮಯದಲ್ಲಿ ಹೃದಯಾಘಾತವಾದ ಹಿನ್ನಲೆಯಲ್ಲಿ ತಕ್ಷಣ ಸರೋಜಮ್ಮ ಅವರ ಪುತ್ರ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ 1 ಘಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.[ಹೃದಯಾಘಾತದಿಂದ ನಂಜುಂಡಿ ನಾಗರಾಜ್ ನಿಧನ]

  ಹಿರಿಯ ನಟಿ ಸರೋಜಮ್ಮ ಅವರ ಪಾರ್ಥಿವ ಶರೀರವನ್ನು ಕಮಲಾನಗರದಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ.

  ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ಉಪೇಂದ್ರ' ಸೇರಿದಂತೆ ಸುಮಾರು 15 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಸರೋಜಮ್ಮ ಅವರಿಗೆ 'ಉಪೇಂದ್ರ' ಚಿತ್ರದ 'ಮಾರಿಮುತ್ತು' ಎಂಬ ಹೆಸರು ಬಹಳ ಹೆಸರು ತಂದುಕೊಟ್ಟಿತ್ತು. ತದನಂತರ ಅವರು ಸ್ಯಾಂಡಲ್ ವುಡ್ ನಲ್ಲಿ ಅದೇ ಹೆಸರಿನಲ್ಲಿ ಖ್ಯಾತಿ ಪಡೆದರು.[ಕನ್ನಡದ ಹಿರಿಯ ನಟ-ನಿರ್ದೇಶಕ ಶಾಂತಾರಾಮ್ ನಿಧನ]

  ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಸರೋಜಮ್ಮ ಅವರು ಇತ್ತೀಚೆಗೆ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಒಬ್ಬ ಅತ್ಯುತ್ತಮ ಹಿರಿಯ ನಟಿಯನ್ನು ಕಳೆದುಕೊಂಡ ಸ್ಯಾಂಡಲ್ ವುಡ್ ಕಂಬನಿ ಮಿಡಿದಿದೆ.

  English summary
  'Upendra' movie fame 'Marimuttu' named Kannada veteran Actress Sarojamma (60) expired due to Heart Attack Yesterday (June 24th). Veteran Actress Sarojamma have actred more than 15 movies in kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X