twitter
    For Quick Alerts
    ALLOW NOTIFICATIONS  
    For Daily Alerts

    'ಮಾಸ್ತಿಗುಡಿ' ದುರಂತ: ನಾಗಶೇಖರ್, ರವಿವರ್ಮಗೆ ಷರತ್ತುಬದ್ಧ ಜಾಮೀನು

    By Bharath Kumar
    |

    'ಮಾಸ್ತಿಗುಡಿ' ಚಿತ್ರೀಕರಣದಲ್ಲಿ ಇಬ್ಬರು ಖಳನಟರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಸ ನಿರ್ದೇಶಕ ರವಿವರ್ಮ ಹಾಗೂ ಚಿತ್ರದ ನಿರ್ದೇಶಕ ನಾಗಶೇಖರ್ ಅವರಿಗೆ ಇಂದು ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

    ನವೆಂಬರ್ 7 ರಂದು ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ 'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಖಳನಟರಾದ ಅನಿಲ್ ಹಾಗೂ ಉದಯ್ ಸಾವಿಗೀಡಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸುಂದರ್ ಪಿ ಗೌಡ ಸೇರಿದಂತೆ ಐವರನ್ನ ವಶಕ್ಕೆ ಪಡೆಯಲಾಗಿತ್ತು. ಇವರಲ್ಲಿ ನಾಗಶೇಖರ್ ಹಾಗೂ ರವಿವರ್ಮ ನವೆಂಬರ್ 12 ರಂದು ಮಾಗಡಿ ಪೊಲೀಸರ ಎದುರು ಸ್ವತಃ ತಾವೇ ಶರಣಾಗಿದ್ದರು.

    Mastigudi tragedy: Nagashekar And Ravi Verma Gets Bail

    'ಮಾಸ್ತಿಗುಡಿ' ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ರಾಮನಗರ ಜಿಲ್ಲಾ ನ್ಯಾಯಾಲಯ, ಜಾಮೀನುಗಾಗಿ ನಾಗಶೇಖರ್ ಹಾಗೂ ರವಿವರ್ಮ ಸಲ್ಲಿಸಿದ್ದ ಅರ್ಜಿಯನ್ನ ತಿರಸ್ಕರಿಸಿತ್ತು. ತದನಂತರ ಹೈಕೋರ್ಟ್ ಮೊರೆ ಹೋಗಿದ್ದ ಇಬ್ಬರಿಗೂ ಈಗ ಹೈಕೋರ್ಟ್ ಏಕಸದಸ್ಯ ಪೀಠ ಷರತ್ತುಬದ್ಧ ಜಾಮೀನು ನೀಡಿದೆ.

    Mastigudi tragedy: Nagashekar And Ravi Verma Gets Bail

    ಹೈಕೋರ್ಟ್ ವಿಧಿಸಿರುವ ಷರತ್ತು ಅನ್ವಯ, ನಾಗಶೇಖರ್ ಹಾಗೂ ರವಿವರ್ಮ ಯಾವುದೇ ಕಾರಣಕ್ಕೂ ನಗರವನ್ನ ಬಿಟ್ಟು ಹೋಗಬಾರದು. ಪೊಲೀಸರ ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಸೂಚನೆ ನೀಡಿ, ಇಬ್ಬರಿಂದಲೂ ತಲಾ ಒಂದು ಲಕ್ಷ ರೂಪಾಯಿ ಬಾಂಡ್ ಸ್ವೀಕರಿಸಿದೆ.

    ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದನೇ ಆರೋಪಿಯಾಗಿರುವ ನಿರ್ಮಾಪಕ ಸುಂದರ್ ಪಿ ಗೌಡ, ಹಾಗೂ ಮತ್ತಿಬ್ಬರು ಕೂಡ ಜಾಮೀನುಗಾಗಿ ಅರ್ಜಿ ಸಲ್ಲಿಸಿದ್ದು ಇನ್ನೂ ವಿಚಾರಣೆ ಹಂತದಲ್ಲಿದೆ.

    English summary
    Director Nagashekar and Stunt Director Ravi Verma have been granted bail by the Karnataka High Court. They were in Judicial Custody after being arrested for the death of Actors Anil Kumar and Uday in the 'Mastigudi' shooting tragedy took place on November 7 TG Halli Lake.
    Thursday, December 15, 2016, 18:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X