»   » ದುನಿಯಾ ವಿಜಯ್ ಹುಟ್ಟುಹಬ್ಬ, 'ಮಾಸ್ತಿಗುಡಿ' ಟ್ರೈಲರ್ ರಿಲೀಸ್!

ದುನಿಯಾ ವಿಜಯ್ ಹುಟ್ಟುಹಬ್ಬ, 'ಮಾಸ್ತಿಗುಡಿ' ಟ್ರೈಲರ್ ರಿಲೀಸ್!

Posted By:
Subscribe to Filmibeat Kannada

ದುನಿಯಾ ವಿಜಯ್ ಅಭಿನಯದ ಬಹುನಿರೀಕ್ಷಿತ 'ಮಾಸ್ತಿಗುಡಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ದುನಿಯಾ ವಿಜಯ್ ಅವರ 43ನೇ ಹುಟ್ಟುಹಬ್ಬದ ವಿಶೇಷವಾಗಿ ತಡರಾತ್ರಿ ಚಿತ್ರದ ಟ್ರೈಲರ್ ರಿಲೀಸ್ ಮಾಡಲಾಗಿದೆ.

ನಿರೀಕ್ಷೆಯಂತೆ 'ಮಾಸ್ತಿಗುಡಿ' ಟ್ರೈಲರ್ ವಿಶೇಷವಾಗಿದ್ದು, ದುನಿಯಾ ವಿಜಯ್ ಅಬ್ಬರಿಸಿದ್ದಾರೆ. ಮೂರು ವಿಭಿನ್ನ ಶೇಡ್ ಗಳಲ್ಲಿ ಬ್ಲ್ಯಾಕ್ ಕೋಬ್ರಾ ಕಾಣಿಸಿಕೊಂಡಿದ್ದು, ಅವರ ಗೆಟಪ್ ಗಳು ಆಕರ್ಷಣೆಯಾಗಿದೆ.['ಮಾಸ್ತಿಗುಡಿ' ಚಿತ್ರದ ಅಸಲಿ ಕಥೆ ಮತ್ತು ಚಿತ್ರಕಥೆ ಏನು? ]

Mastigudi Trailer Released

ವಿಜಯ್ ಗೆ ಅಮೂಲ್ಯ ಹಾಗೂ ಕೃತಿ ಕರಬಂಧ ಜೋಡಿಯಾಗಿದ್ದು, ರೊಮ್ಯಾಂಟಿಕ್ ದೃಶ್ಯಗಳು ಗಮನ ಸೆಳೆಯುತ್ತಿವೆ.

ಉಳಿದಂತೆ ಚಿತ್ರದ ಖಳನಟರಾದ ಅನಿಲ್ ಹಾಗೂ ಉದಯ್ 'ಮಾಸ್ತಿಗುಡಿ' ಚಿತ್ರದಲ್ಲಿ ಅಬ್ಬರಿಸಿದ್ದಾರೆ. 'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ವೇಳೆ ಅನಿಲ್ ಹಾಗೂ ಉದಯ್ ಸಾವನ್ನಪ್ಪಿದ್ದರು. ಹೀಗಾಗಿ, ಇದು ಇವರಿಬ್ಬರ ಕೊನೆಯ ಚಿತ್ರವೂ ಕೂಡ ಹೌದು.['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

ಇನ್ನೂ ದುನಿಯಾ ವಿಜಯ್ ಸ್ವತಃ ಈ ಚಿತ್ರಕ್ಕೆ ಕಥೆ ಬರೆದಿದ್ದು, ನಾಗಶೇಖರ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಸುಹಾಸಿನಿ, ದೇವರಾಜ್, ಶೋಭರಾಜ್ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ.

'ಮಾಸ್ತಿಗುಡಿ' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ

English summary
Kannada Movie Mastigudi Trailer Released Today (January 20th). Duniya Vijay, Anil, Uday, Starrer Kannada Movie 'Mastigudi'. The movie directed by Nagashekar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada