twitter
    For Quick Alerts
    ALLOW NOTIFICATIONS  
    For Daily Alerts

    ಮನೆ ಬಾಗಿಲಿಗೇ ಬಂದ ಮತ್ತೆರಡು ಸಿನಿಮಾ: ಪ್ರೈಮ್‌ನಲ್ಲಿ ಮಾಯಾಬಜಾರ್, ಇಂಡಿಯಾ Vs ಇಂಗ್ಲೆಂಡ್

    |

    ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿ ಕುಳಿತು ಅಮೆಜಾನ್ ಪ್ರೈಮ್‌ನಲ್ಲಿ ಇರುವ ಎಲ್ಲ ಕನ್ನಡ ಸಿನಿಮಾಗಳನ್ನೂ ನೋಡಿ ಮುಗಿಯಿತೇ? ಇನ್ಯಾವ ಸಿನಿಮಾ ಕೂಡ ಉಳಿದಿಲ್ಲ ಎಂದು ಬೇಸರಪಟ್ಟುಕೊಳ್ಳುವವರಿಗೆ ಖುಷಿಯ ಸುದ್ದಿ ಸಿಕ್ಕಿದೆ. ಮತ್ತೆರಡು ಕನ್ನಡ ಸಿನಿಮಾಗಳು ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರವಾಗುತ್ತಿವೆ.

    ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ನಲ್ಲಿ ರಾಧಾಕೃಷ್ಣ ರೆಡ್ಡಿ ನಿರ್ದೇಶನದ 'ಮಾಯಾ ಬಜಾರ್ 2016' ಮತ್ತು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಂಡಿಯಾ ವರ್ಸಸ್ ಇಂಗ್ಲೆಂಡ್' ಸಿನಿಮಾಗಳು ಅಮೆಜಾನ್ ಪ್ರೈಮ್‌ನಲ್ಲಿ ಶುಕ್ರವಾರದಿಂದ ಲಭ್ಯವಾಗುತ್ತಿವೆ. ಸಿನಿಮಾ ಪ್ರೇಮಿಗಳು ಮತ್ತೆರಡು ಹೊಸ ಸಿನಿಮಾಗಳ ಅನುಭವವನ್ನು ಪಡೆದುಕೊಳ್ಳಬಹುದು.

    ಜನವರಿ ಅಂತ್ಯಕ್ಕೆ ಬಿಡುಗಡೆಯಾಗಿದ್ದ ಇಂಡಿಯಾ ವರ್ಸಸ್ ಇಂಗ್ಲೆಂಡ್ ರೊಮ್ಯಾಂಟಿಕ್ ಥ್ರಿಲ್ಲರ್ ಆಗಿದ್ದರೆ, ಫೆಬ್ರವರಿ ಅಂತ್ಯಕ್ಕೆ ಬಿಡುಗಡೆಯಾಗಿದ್ದ 'ಮಾಯಾ ಬಜಾರ್' ಕಾಮಿಡಿ ಕ್ರೈಂ ವಸ್ತುವನ್ನು ಒಳಗೊಂಡಿತ್ತು. ಮುಂದೆ ಓದಿ...

    ಎರಡೂ ಸಿನಿಮಾಗಳ ನಾಯಕ ಒಬ್ಬರೇ!

    ಎರಡೂ ಸಿನಿಮಾಗಳ ನಾಯಕ ಒಬ್ಬರೇ!

    'ಮಾಯಾಬಜಾರ್' ಮತ್ತು 'ಇಂಡಿಯಾ ವರ್ಸಸ್ ಇಂಗ್ಲೆಂಡ್' ಸಿನಿಮಾಗಳೆರಡೂ ಒಂದೇ ದಿನದಿಂದ ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯವಾಗುತ್ತಿವೆ. ಮತ್ತೊಂದು ವಿಶೇಷವೆಂದರೆ ಕನ್ನಡದ ಖಡಕ್ ಮುಖದ, ಕಂಚಿನ ಕಂಠದ ನಟ ವಸಿಷ್ಠ ಸಿಂಹ ಈ ಎರಡೂ ಸಿನಿಮಾಗಳ ಮುಖ್ಯಪಾತ್ರದಲ್ಲಿ ನಟಿಸಿರುವುದು.

    ಕನ್ನಡದ ಲವ್ ಮಾಕ್‌ಟೇಲ್ ವೀಕ್ಷಿಸಿ ಫಿದಾ ಆದ ತೆಲುಗು ನಟ ಅಲ್ಲು ಸಿರೀಶ್ಕನ್ನಡದ ಲವ್ ಮಾಕ್‌ಟೇಲ್ ವೀಕ್ಷಿಸಿ ಫಿದಾ ಆದ ತೆಲುಗು ನಟ ಅಲ್ಲು ಸಿರೀಶ್

    ಥಿಯೇಟರ್‌ನಲ್ಲಿ ನೋಡಲು ಆಗದಿದ್ದರೇನಂತೆ?

    ಥಿಯೇಟರ್‌ನಲ್ಲಿ ನೋಡಲು ಆಗದಿದ್ದರೇನಂತೆ?

    'ಮಾಯಾಬಜಾರ್' ಇನ್ನೂ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವಾಗಲೇ ಕೊರೊನಾ ವೈರಸ್ ಹಾವಳಿಯ ಕಾರಣದಿಂದ ಪ್ರದರ್ಶನ ಗಳು ರದ್ದುಗೊಂಡಿದ್ದವು. ಸಿನಿಮಾ ಬಗ್ಗೆ ಉತ್ತಮ ಮಾತುಗಳು ಕೇಳಿಬಂದಿದ್ದವು. ಪ್ರದರ್ಶನ ನಿಂತು ಹೋಗಿದ್ದರಿಂದ ಸಿನಿಮಾ ನೋಡಬೇಕೆಂದಿದ್ದವರು ಬೇಸರಪಟ್ಟುಕೊಂಡಿದ್ದರು. ಈಗ ಅವರ ಮೊಬೈಲಿಗೇ ಸಿನಿಮಾ ಬಂದಿದೆ.

    ಮರು ಪ್ರಸಾರದಲ್ಲೂ ದಾಖಲೆಗಳು ಸೃಷ್ಟಿಸಿದ ರಾಮಾಯಣಮರು ಪ್ರಸಾರದಲ್ಲೂ ದಾಖಲೆಗಳು ಸೃಷ್ಟಿಸಿದ ರಾಮಾಯಣ

    ರೊಮ್ಯಾಂಟಿಕ್ ಥ್ರಿಲ್ಲರ್ ಕಥೆ

    ರೊಮ್ಯಾಂಟಿಕ್ ಥ್ರಿಲ್ಲರ್ ಕಥೆ

    ಜನವರಿ 24ರಂದ ಬಿಡುಗಡೆಯಾಗಿದ್ದ 'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರದ ಅರ್ಧದಷ್ಟು ಭಾಗ ಇಂಗ್ಲೆಂಡ್‌ನಲ್ಲಿಯೇ ಚಿತ್ರೀಕರಣಗೊಂಡಿದೆ. ಕಾಣೆಯಾಗಿ ಇಂಗ್ಲೆಂಡ್‌ಗೆ ಕಳ್ಳಸಾಗಣೆಯಾಗುವ ಅಮೂಲ್ಯ ಆಭರಣದ ಬೆನ್ನತ್ತುವ ನಾಯಕ (ವಸಿಷ್ಠ ಸಿಂಹ) ಮತ್ತು ನಾಯಕಿಯ (ಮಾನ್ವಿತಾ ಹರೀಶ್) ಕಥೆಯಿದು.

    ಯೂಟ್ಯೂಬ್‌ನಲ್ಲಿ 'ರಾಮಾ ರಾಮಾ ರೇ' ಸಿನಿಮಾ ನೋಡಿ ನಿರ್ಮಾಪಕರಿಗೆ ದುಡ್ಡು ಕಳಿಸಿದ ಅಭಿಮಾನಿಯೂಟ್ಯೂಬ್‌ನಲ್ಲಿ 'ರಾಮಾ ರಾಮಾ ರೇ' ಸಿನಿಮಾ ನೋಡಿ ನಿರ್ಮಾಪಕರಿಗೆ ದುಡ್ಡು ಕಳಿಸಿದ ಅಭಿಮಾನಿ

    ಪ್ರಶಂಸೆಯ ಮಹಾಪೂರ

    "ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರವು ಅಮೆಜಾನ್ ಪ್ರೈಮ್ ನಲ್ಲಿ ವಿಶ್ವಾದ್ಯಂತ ತೆರೆ ಕಂಡಿದೆ. ಕೊರೊನಾ ದಾಳಿಯಿಂದ ಮನೆಯಲ್ಲಿ ಕುಳಿತಿರುವವರಿಗೆ ಮನರಂಜನೆಯ ಸುಗ್ಗಿ! ಅಸಂಖ್ಯಾತ ಅನಿವಾಸಿ ಕನ್ನಡಿಗರು ಅಮೆರಿಕಾ, ಇಂಗ್ಲೆಂಡ್ ಮುಂತಾದ ದೇಶಗಳಿಂದ ಪ್ರಶಂಸೆಯ ಮಹಾಪೂರವನ್ನೇ ಕಳುಹಿಸುತ್ತಿದ್ದಾರೆ. ಇದೀಗ ಭಾರತದಲ್ಲೂ ಪ್ರದರ್ಶನ ಕಂಡು ಅಪಾರ ಮೆಚ್ಚುಗೆ ಗಳಿಸುತ್ತಿದೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

    ಮನೆ ಬಾಗಿಲಿಗೇ ಬಂದಿದೆ ಸಿನಿಮಾ

    ಮನೆ ಬಾಗಿಲಿಗೇ ಬಂದಿದೆ ಸಿನಿಮಾ

    ಬಹುಭಾಗ ಇಂಗ್ಲೆಂಡಿನಲ್ಲಿ ಜತೆಗೆ ಭಾರತದುದ್ದಗಲಕ್ಕೂ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ನಾಡಗೀತೆಯೂ ರಾಷ್ಟ್ರಗೀತೆಯೂ ಬೇರೆ ಸ್ವರೂಪದಲ್ಲಿವೆ. ಅರ್ಜುನ್ ಜನ್ಯ ಐದು ಹಾಡುಗಳ ಮೂಲಕ ಮನಸೂರೆಗೊಂಡಿದ್ದಾರೆ. ವಸಿಷ್ಠ ಸಿಂಹ, ಮಾನ್ವಿತಾ, ಪ್ರಕಾಶ್ ಬೆಳವಾಡಿ, ಅನಂತ ನಾಗ್, ಸಾಧು ಕೋಕಿಲಾ, ಸುಮಲತಾ ಅಂಬರೀಷ್ ಅವರನ್ನೊಳಗೊಂಡ ಅದ್ದೂರಿ ತಾರಾಗಣವಿದೆ. ಮನೆಯಲ್ಲೇ ಮನೆಮಂದಿ ಎಲ್ಲಾ ಕುಳಿತು ಮನರಂಜನೆ ಪಡೆಯಲು ನಿಮ್ಮಮನೆ ಬಾಗಿಲಿಗೇ ಬಂದಿದೆ "ಇಂಡಿಯಾ ವರ್ಸಸ್ ಇಂಗ್ಲೆಂಡ್" ಎಂದು ಅವರು ತಿಳಿಸಿದ್ದಾರೆ.

    English summary
    Two more Kannada movies were started streaming in Amazon Prime from Friday. Mayabazar 2016 and India Vs England are available to watch.
    Saturday, April 4, 2020, 8:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X