»   » 'ಕರಿಯ-2'ಗಾಗಿ ಗಾಯಕಿ ಆದ ನಟಿ ಮಯೂರಿ! ಟ್ರೈಲರ್ ಅತಿ ಶೀಘ್ರದಲ್ಲಿ

'ಕರಿಯ-2'ಗಾಗಿ ಗಾಯಕಿ ಆದ ನಟಿ ಮಯೂರಿ! ಟ್ರೈಲರ್ ಅತಿ ಶೀಘ್ರದಲ್ಲಿ

Posted By:
Subscribe to Filmibeat Kannada

ಅಜಯ್ ರಾವ್ ಅಭಿನಯದ 'ಕೃಷ್ಣಲೀಲಾ' ಚಿತ್ರ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕಚಗುಳಿ ಇಟ್ಟವರು ನಟಿ ಮಯೂರಿ. 'ಇಷ್ಟಕಾಮ್ಯ' ನಂತರ 'ನಟರಾಜ ಸರ್ವೀಸ್' ಚಿತ್ರದಲ್ಲಿ ಅಭಿನಯಿಸಿದ್ದ ಈ ಮುದ್ದು ಬೆಡಗಿ ಎಲ್ಲಿ ಹೋಗ್ ಬಿಟ್ರು, ಕಾಣ್ತಾನೇ ಇಲ್ಲವಲ್ಲ ಅನ್ನೋ ಪ್ರಶ್ನೆ ಸ್ಯಾಂಡಲ್ ವುಡ್ ಸಿನಿ ಪ್ರಿಯರಲ್ಲಿ ಕಾಡುತ್ತಿತ್ತು.[ಕೃಷ್ಣಲೀಲಾ ಮಯೂರಿ ಈಗ 'ಎಂಟಿವಿ ಸುಬ್ಬಲಕ್ಷ್ಮಿ' !]

ಆದರೆ 'ನಟರಾಜ ಸರ್ವೀಸ್' ಚಿತ್ರದ ಯಶಸ್ಸಿನ ನಂತರ 'ಗಣಪ' ಖ್ಯಾತಿಯ ಸಂತೋಷ್ ಅಭಿನಯದ 'ಕರಿಯ-2'ನಲ್ಲಿ ಭಾಗಿಯಾಗಿದ್ದ ನಟಿ ಮಯೂರಿ ಈಗ ತಮ್ಮ ಚಿತ್ರದ ಬಗ್ಗೆ ಅಪ್‌ ಡೇಟ್ ನೀಡಿದ್ದಾರೆ. ಮುಂದೆ ಓದಿರಿ..

ಅತಿ ಶೀಘ್ರದಲ್ಲಿ 'ಕರಿಯ-2'

ಶರಣ್ ಅಭಿನಯದ 'ನಟರಾಜ ಸರ್ವೀಸ್' ಚಿತ್ರದ ನಂತರ ಎಲ್ಲೂ ಕಾಣಿಸಿಕೊಳ್ಳದ ನಟಿ ಮಯೂರಿ ಈಗ ತಮ್ಮ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್ ನಲ್ಲಿ ಅಪ್ ಡೇಟ್ ನೀಡಿದ್ದಾರೆ. ಅಂದಹಾಗೆ ಅವರ ಅಭಿನಯದ 'ಕರಿಯ-2' ಚಿತ್ರ ಅತೀ ಶೀಘ್ರದಲ್ಲಿ ತೆರೆಗೆ ಬರಲಿದೆಯಂತೆ.

'ಕರಿಯ-2' ಪೋಸ್ಟರ್ ನೋಡಿ

'ಗಣಪ' ಖ್ಯಾತಿಯ ಸಂತೋಷ್ ಅಭಿನಯದ ಈ ಚಿತ್ರದಲ್ಲಿ ನಟಿ ಮಯೂರಿ ಅಭಿನಯಿಸಲಿದ್ದಾರೆ ಎಂದು ಈ ಹಿಂದೆಯೇ ಹೇಳಿದ್ವಿ. ಆದರೆ ಈಗ ಚಿತ್ರದ ಪೋಸ್ಟರ್ ಸಹ ಹೊರಬಿದ್ದಿದೆ. ಚಿತ್ರದ ಬಗ್ಗೆ ಅಪ್‌ ಡೇಟ್ ನೀಡಿರುವ ಮಯೂರಿ ಪೋಸ್ಟರ್ ಶೇರ್ ಮಾಡಿ ಟ್ರೈಲರ್ ಶೀಘ್ರದಲ್ಲೇ ಬರಲಿದೆ ಎಂದು ತಿಳಿಸಿದ್ದಾರೆ.

ಮಯೂರಿ ಹಿನ್ನೆಲೆ ಗಾಯನ

ಚಿತ್ರಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದ ಮಯೂರಿ ಈಗ 'ಕರಿಯ-2' ಚಿತ್ರಕ್ಕೆ ಹಾಡಿದ್ದು ಅವರ ಹಿನ್ನೆಲೆ ಗಾಯನ ಚಿತ್ರದಲ್ಲಿರಲಿದೆ. ಈ ಮೂಲಕ ನಟಿ ಮಯೂರಿ ಹಾಡುಗಾರ್ತಿಯೂ ಆಗಿ ಹೊರಹೊಮ್ಮಿದ್ದಾರೆ.

'ಕರಿಯ' ನಿರ್ಮಾಪಕರಿಂದ 'ಕರಿಯ-2'

ಅಂದಹಾಗೆ ದಾಸ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ 'ಕರಿಯ' ಚಿತ್ರ ನಿರ್ಮಾಣ ಮಾಡಿದ್ದ ಅನೇಕಲ್ ಬಾಲರಾಜ್ ರವರೇ 'ಕರಿಯ-2' ಚಿತ್ರವನ್ನು ಸಂತೋಷ್ ಎಂಟರ್‌ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರ ಮಗ ಸಂತೋಷ್ ರವರೇ ನಾಯಕನಾಗಿ ಅಭಿನಯಿಸಿದ್ದಾರೆ. ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿದ್ದು ಚಿತ್ರವನ್ನು ತೆರೆಗೆ ತರಲು ಸಜ್ಜಾಗಿದೆ. ಈ ಹಿಂದೆ 'ಗಣಪ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಪ್ರಭು ಶ್ರೀನಿವಾಸ್ 'ಕರಿಯ-2' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

English summary
Kannada Actress Mayuri become Playback Singer For Kariya-2 Movie. This movie trailer is coming soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada