»   » 'ನಟರಾಜ ಸರ್ವೀಸ್' ಸ್ಟೇಷನ್ ನಲ್ಲಿ ಶರಣ್ ಜೊತೆ ಮಯೂರಿ

'ನಟರಾಜ ಸರ್ವೀಸ್' ಸ್ಟೇಷನ್ ನಲ್ಲಿ ಶರಣ್ ಜೊತೆ ಮಯೂರಿ

Posted By:
Subscribe to Filmibeat Kannada

'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಕನ್ನಡ ಜನತೆಯ ಮನೆ ಮನ ಮುಟ್ಟಿರುವ ನಟಿ ಮಯೂರಿ. 'ಕೃಷ್ಣಲೀಲಾ' ಸಿನಿಮಾ ಮೂಲಕ ಬೆಳ್ಳಿ ಪರದೆಗೆ ಲಗ್ಗೆ ಇಟ್ಟ ಮಯೂರಿಗೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆ ಹೆಚ್ಚಾಗಿದೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿರುವ ಮಯೂರಿಗೆ ಈಗ ಬಿಗ್ ಬ್ಯಾನರ್ ನಿಂದ ಅವಕಾಶ ಹುಡುಕಿಕೊಂಡು ಬಂದಿದೆ.

Mayuri is paired opposite Sharan in 'Nataraja Service'

ಪುನೀತ್ ರಾಜ್ ಕುಮಾರ್ ರವರ ಚೊಚ್ಚಲ ಹೋಮ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ 'ನಟರಾಜ ಸರ್ವೀಸ್' ಚಿತ್ರಕ್ಕೆ ಮಯೂರಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. [ಶರಣ್ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ನಿರ್ಮಾಪಕ..!]

ಪವನ್ ಒಡೆಯರ್ ನಿರ್ದೇಶನದ ಚಿತ್ರ 'ನಟರಾಜ ಸರ್ವೀಸ್'. ಇಲ್ಲಿ ಎಲ್ಲರಿಗೂ ಕಾಮಿಡಿ ಕಚಗುಳಿ ಇಡುವುದಕ್ಕೆ ಬರುತ್ತಿರುವುದು ನಾಯಕ ಶರಣ್. 'ಅಧ್ಯಕ್ಷ', 'ವಿಕ್ಟರಿ' ಮೂಲಕ ಸ್ಯಾಂಡಲ್ ವುಡ್ ನ ಗೆಲ್ಲುವ ಕುದುರೆಯಾಗಿರುವ ಶರಣ್ ಜೊತೆ ನಾಯಕಿ ಆಗುವ ಚಾನ್ಸ್ ಮಯೂರಿಗೆ ಸಿಕ್ಕಿದೆ. [ನಿರ್ದೇಶಕ ಪವನ್ ಒಡೆಯರ್ ಮುಂದಿನ ಚಿತ್ರ 'ನಟರಾಜ ಸರ್ವೀಸ್']

ಅಪ್ಪಟ ಕಾಮಿಡಿ ಎಂಟರ್ ಟೈನರ್ ಆಗಿರುವ 'ನಟರಾಜ ಸರ್ವೀಸ್' ಚಿತ್ರ ಸೆಟ್ಟೇರುವುದು ಈ ವರ್ಷಾಂತ್ಯದಲ್ಲಿ. ಸದ್ಯಕ್ಕೆ 'ಜೆಸ್ಸಿ' ಚಿತ್ರದ ಶೂಟಿಂಗ್ ನಲ್ಲಿ ತೊಡಗಿರುವ ಪವನ್ ಒಡೆಯರ್, ಅದು ಕಂಪ್ಲೀಟ್ ಆದ ಬಳಿಕ 'ನಟರಾಜ ಸರ್ವೀಸ್' ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ.

English summary
Kannada Actress Mayuri of 'Krishna Leela' fame is roped in to play lead opposite Sharan in Kannada Movie 'Nataraja Service'. Pawan Wadeyar is directing this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada