»   » ಸಂಧಾನ ಸಕ್ಸಸ್; ದಿನಕರ್ - ಬುಲೆಟ್ ಪ್ರಕಾಶ್ ವಿವಾದ ಕ್ಲೋಸ್!

ಸಂಧಾನ ಸಕ್ಸಸ್; ದಿನಕರ್ - ಬುಲೆಟ್ ಪ್ರಕಾಶ್ ವಿವಾದ ಕ್ಲೋಸ್!

Posted By:
Subscribe to Filmibeat Kannada

ಅಂತೂ ಬೆಳಗ್ಗೆಯಿಂದ ಸತತವಾಗಿ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಬರುತ್ತಿದ್ದ ಬ್ರೇಕಿಂಗ್ ನ್ಯೂಸ್ ಗೆ ಇದೀಗ ಬ್ರೇಕ್ ಬಿದ್ದಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ತೂಗುದೀಪ ಮತ್ತು ಬುಲೆಟ್ ಪ್ರಕಾಶ್ ನಡುವಿನ ಕಿರಿಕ್ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಬಗೆಹರಿದಿದೆ.[ಬುಲೆಟ್ ಪ್ರಕಾಶ್-ದಿನಕರ್ ಕಿರಿಕ್; 'ಸುಲ್ತಾನ್' ಚಿತ್ರದ ಕಥೆ ಫಿನಿಶ್!?]

ಇನ್ಸ್ ಪೆಕ್ಟರ್ ಶ್ರೀನಿವಾಸ್ ರಾಜು ಸಮ್ಮುಖದಲ್ಲಿ ನಡೆದ ದಿನಕರ್ ತೂಗುದೀಪ ಮತ್ತು ಬುಲೆಟ್ ಪ್ರಕಾಶ್ ರವರ ಸಂಧಾನ ಯಶಸ್ವಿ ಆಗಿದೆ. ಮುಂದೆ ಓದಿ....

ಸಂಧಾನ ಸಕ್ಸಸ್

ದರ್ಶನ್ ಸಹೋದರ ದಿನಕರ್ ತೂಗುದೀಪ ಮೇಲೆ ಬುಲೆಟ್ ಪ್ರಕಾಶ್ ನೀಡಿದ ಜೀವ ಬೆದರಿಕೆ ದೂರು ಅನ್ವಯ ಇಂದು ಮಧ್ಯಾಹ್ನ ಅಮೃತಹಳ್ಳಿ ಪೊಲೀಸ್ ಠಾಣೆಗೆ ದಿನಕರ್ ಮತ್ತು ಬುಲೆಟ್ ಪ್ರಕಾಶ್ ಆಗಮಿಸಿದರು.['ದಿನಕರ್ ತೂಗುದೀಪ ಅವರಿಗೆ ಅಹಂಕಾರ ನೆತ್ತಿಗೇರಿದೆ!']

ಭಿನ್ನಾಭಿಪ್ರಾಯ ಬಗೆಹರಿಯಿತೇ?

ಇನ್ಸ್ ಪೆಕ್ಟರ್ ಶ್ರೀನಿವಾಸ್ ರಾಜು ಸಮ್ಮುಖದಲ್ಲಿ ದಿನಕರ್ ತೂಗುದೀಪ ಮತ್ತು ಬುಲೆಟ್ ಪ್ರಕಾಶ್ ತಮ್ಮ ನಡುವೆ ಇದ್ದ ಭಿನ್ನಾಭಿಪ್ರಾಯ ಬಗೆ ಹರಿಸಿಕೊಂಡರು.[ಬುಲೆಟ್ ಪ್ರಕಾಶ್ v/s ದಿನಕರ್ ; ಅಸಲಿಗೆ ನಿನ್ನೆ ರಾತ್ರಿ ನಡೆದದ್ದೇನು?]

ದಿನಕರ್ ತೂಗುದೀಪ ಏನು ಹೇಳ್ತಾರೆ?

''ಸಣ್ಣ-ಪುಟ್ಟ ತಪ್ಪು ತಿಳುವಳಿಕೆ ಇತ್ತು. ಅದು ಈಗ ಸರಿಹೋಗಿದೆ. ಮಾತುಕತೆ ಮಾಡಿ ಸರಿ ಮಾಡಿಕೊಂಡಿದ್ದೇವೆ'' ಅಂತ ಮಾಧ್ಯಮಗಳಿಗೆ ದಿನಕರ್ ತೂಗುದೀಪ ಹೇಳಿಕೆ ನೀಡಿದ್ದಾರೆ.[ಬುಲೆಟ್ ಪ್ರಕಾಶ್ ದೊಡ್ಡ ಸುಳ್ಳುಗಾರ; ದಿನಕರ್ ತೂಗುದೀಪ ಸಿಡಿಸಿದ ಬಾಂಬ್!]

ಬುಲೆಟ್ ಪ್ರಕಾಶ್ ಏನಂತಾರೆ?

''ಆಗಿದ್ದೆಲ್ಲವೂ ಸತ್ಯ. ಘಟನೆ ಬಗ್ಗೆ ಮಾತನಾಡಿ ಬಗೆ ಹರಿಸಿಕೊಂಡಿದ್ದೇವೆ. ಇನ್ನೂ ಕೆಲವು ವಿಷಯಗಳ ಬಗ್ಗೆ ಮಾತನಾಡುವುದು ಇದೆ. ಅದನ್ನ ಕೂತು ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ'' ಅಂತಾರೆ ಬುಲೆಟ್ ಪ್ರಕಾಶ್.[ಕುಚಿಕು ಗೆಳೆಯರ ಗಲಾಟೆ; ಬುಲೆಟ್ ಪ್ರಕಾಶ್ ಬಾಯ್ಬಿಟ್ಟ ಸತ್ಯ]

ಕಂಪ್ಲೇಂಟ್ ವಾಪಸ್?

ಸಂಧಾನ ಸಕ್ಸಸ್ ಆದ್ರಿಂದ ಸದ್ಯದಲ್ಲೇ ತಾವು ನೀಡಿದ್ದ ದೂರನ್ನ ವಾಪಸ್ ಪಡೆಯಲಿದ್ದಾರೆ ನಟ ಬುಲೆಟ್ ಪ್ರಕಾಶ್.

'ಸುಲ್ತಾನ್' ಕಥೆ ಏನು?

''ದರ್ಶನ್ ಜೊತೆ ಚಿತ್ರ ಮಾಡುವುದು ಅವರಿಗೆ ಬಿಟ್ಟ ವಿಚಾರ. ಬೇಕಾದರೆ ಮೂರ್ನಾಲ್ಕು ಸಿನಿಮಾ ಆದ ಬಳಿಕ ಮಾಡಿಕೊಳ್ಳಲಿ'' ಅಂತ ದಿನಕರ್ ತೂಗುದೀಪ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

English summary
Bullet Prakash had lodged complaint in Amruthahalli Police Station, Bengaluru against Director Dinakar Toogudeepa for threatening him last night (February 3rd). After the successful Mediation by Police Inspector Srinivas Raju, Dinakar Toogudeepa and Bullet Prakash patched up.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada