»   » 'ಉಪ್ಪಿಟ್ಟು' ರುಚಿಗೆ ಪಾಕಿಸ್ತಾನಿ ಕ್ಲೀನ್ ಬೌಲ್ಡ್ ಗುರು.!

'ಉಪ್ಪಿಟ್ಟು' ರುಚಿಗೆ ಪಾಕಿಸ್ತಾನಿ ಕ್ಲೀನ್ ಬೌಲ್ಡ್ ಗುರು.!

Posted By:
Subscribe to Filmibeat Kannada

ಉಪ್ಪಿಟ್ಟು ಕಂಡರೆ ಕೆಲವರಿಗೆ ಅಲರ್ಜಿ ಇರಬಹುದು. ಆದ್ರೆ, ರಿಯಲ್ ಸ್ಟಾರ್ ಉಪೇಂದ್ರ ತಯಾರು ಮಾಡಿರುವ 'ಉಪ್ಪಿಟ್ಟು' ತಿಂದು ಜೀರ್ಣಿಸಿಕೊಳ್ಳುವುದಕ್ಕೆ ಒದ್ದಾಡಬೇಕು ಅಂತ ಗೊತ್ತಿದ್ದರೂ ಅಭಿಮಾನಿಗಳು ಮಾತ್ರ 'ಉಪ್ಪಿ-2' ಸವಿಯೋಕೆ ಮುಗಿಬೀಳ್ತಿದ್ದಾರೆ.

ಬರೀ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ, ತೆಲುಗು ಸಿನಿ ಅಂಗಳದಲ್ಲೂ 'ಉಪೇಂದ್ರ-2'ಗೆ ಫುಲ್ ಫಿದಾ ಆದವರ ಸಂಖ್ಯೆ ಜಾಸ್ತಿ ಇದೆ. 'ಯೋಚ್ನೆ ಮಾಡ್ಬೇಡಿ' ಅಂತ ಉಪೇಂದ್ರ ಹೇಳಿರುವ ಹೊಸ ಫಿಲಾಸಫಿ ಎಲ್ಲರಿಗೂ ಇಷ್ಟವಾಗ್ಬಿಟ್ಟಿದೆ. [ಉಪ್ಪಿ-2 ರುಚಿಯಾಗಿದೆ, ಆದ್ರೇ ಜೀರ್ಣ ಆಗೋದ್ ಕಷ್ಟ!]


ಅದೂ ಭಾರತದಲ್ಲಷ್ಟೇ ಅಲ್ಲ ಸ್ವಾಮಿ, ಪಕ್ಕದ ಪಾಕಿಸ್ತಾನದಲ್ಲೂ 'ಉಪ್ಪಿ-2' ಹವಾ ಜೋರಾಗಿದೆ. ಪಾಕ್ ನಲ್ಲೂ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಅಭಿಮಾನಿಗಳು ಇದ್ದಾರೆ ಅಂದ್ರೆ ನೀವು ಖಂಡಿತ ನಂಬಲೇ ಬೇಕು. ನಂಬಲ್ಲ ಅಂದ್ರೆ, ಕೆಳಗಿರುವ ಸ್ಲೈಡ್ ಗಳನ್ನ ಕ್ಲಿಕ್ ಮಾಡಿ ನಿಮಗೆ ಗೊತ್ತಾಗುತ್ತೆ....


ರಿಯಲ್ ಸ್ಟಾರ್ ಉಪೇಂದ್ರಗೆ ಪಾಕಿಸ್ತಾನಿ ಅಭಿಮಾನಿ

ರಿಯಲ್ ಸ್ಟಾರ್ ಉಪೇಂದ್ರ ದಕ್ಷಿಣ ಭಾರತದಲ್ಲಿ ಮಾತ್ರ ಫೇಮಸ್ ಅಂದುಕೊಳ್ಳಬೇಡಿ. 'ಉಪ್ಪಿ-2' ವಿಶ್ವಾದ್ಯಂತ ರಿಲೀಸ್ ಆಗಿದೆ. ಅಮೇರಿಕಾ ಸೇರಿದಂತೆ ವಿಶ್ವದ ಹಲವೆಡೆ 'ಉಪ್ಪಿ-2' ಸಖತ್ತಾಗಿ ಓಡ್ತಾಯಿದೆ. ಎಲ್ಲಕ್ಕಿಂತ ಸ್ಪೆಷಲ್ ಅಂದ್ರೆ ಪಾಕಿಸ್ತಾನದಲ್ಲೂ ಉಪೇಂದ್ರ ಅವರಿಗೆ 'ಭಕ್ತ'ರೊಬ್ಬರು ಇದ್ದಾರೆ. ಅವರ ಪರಿಚಯ ಮಾಡಿಸ್ತೀವಿ, ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....


ಉಪೇಂದ್ರ ಫಾಲೋವರ್ ಈ Saad Aziz.!

ಟ್ವಿಟ್ಟರ್ ನಲ್ಲಿ 'ಉಪ್ಪಿ-2' ಸೃಷ್ಟಿಸಿದ ಕ್ರೇಜ್ ನಿಂದ Saad Aziz ಅನ್ನುವ ಪಾಕಿಸ್ತಾನಿ ವ್ಯಕ್ತಿ 'ಉಪ್ಪಿ-2' ಚಿತ್ರ ವೀಕ್ಷಿಸಿದ್ದಾರೆ. ಸಿನಿಮಾ ನೋಡಿ ಉಪೇಂದ್ರಗೆ ಕ್ಲೀನ್ ಬೌಲ್ ಆಗಿರುವ Saad Aziz ತಕ್ಷಣ ಉಪೇಂದ್ರ ಅವರನ್ನ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಫಾಲೋ ಮಾಡಿದ್ದಾರೆ.


ಭಾರತೀಯ ಚಿತ್ರರಂಗದ ಕ್ರಾಂತಿಕಾರಿ.!

ಉಪೇಂದ್ರ ಅವರ ಆಲೋಚನೆಗೆ ಸಲಾಂ ಹೊಡೆದಿರುವ Saad Aziz ಮಾಡಿರುವ ಟ್ವೀಟ್ ಇಲ್ಲಿದೆ. ''ಭಾರತೀಯ ಚಿತ್ರರಂಗದಲ್ಲಿ ಹೊಸ ಕ್ರಾಂತಿ ಎಬ್ಬಸಿದವರ ಪೈಕಿ ಉಪೇಂದ್ರ ಅವರನ್ನ ನಾನು ಟಾಪ್ ನಲ್ಲಿ ನಿಲ್ಲಿಸುತ್ತೇನೆ. ಯಾಕಂದ್ರೆ ಅವರು ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಹೊಸ ಕ್ರಾಂತಿ ಮಾಡಿದ್ದಾರೆ''.


ಕನ್ನಡ ಸಿನಿಮಾದ ಬಗ್ಗೆ ಗೊತ್ತೇ ಇಲ್ಲ.!

ಪಾಕಿಸ್ತಾನಿ ಪ್ರಜೆ ಆಗಿರುವ Saad Azizಗೆ ಕನ್ನಡ ಸಿನಿಮಾ ಬಗ್ಗೆ ಗೊತ್ತೇ ಇಲ್ಲ. 'ಉಪ್ಪಿ-2' ಮೂಲಕ ಇಲ್ಲಿನ ಚಿತ್ರಗಳನ್ನ ನೋಡುವುದಕ್ಕೆ Saad Aziz ಶುರುಮಾಡಿದ್ದಾರೆ. ಆ ಬಗ್ಗೆ ಅವರು ಮಾಡಿರುವ ಟ್ವೀಟ್ ಇದು. ''ಕನ್ನಡ ಸಿನಿಮಾ ಬಗ್ಗೆ ಇದುವರೆಗೂ ನನಗೆ ಗೊತ್ತಿಲ್ಲ. 'ಉಪ್ಪಿ-2', 'ರಂಗಿತರಂಗ', 'ಲೂಸಿಯಾ' ಚಿತ್ರಗಳು ಚೆನ್ನಾಗಿವೆ''.


ಉಪೇಂದ್ರ ಅವರ ಎಲ್ಲಾ ಸಿನಿಮಾಗಳನ್ನ ನೋಡಬೇಕು.!

'ಉಪ್ಪಿ-2' ಚಿತ್ರ ನೋಡಿ Saad Aziz ಒಂದು ಪತ್ರಿಜ್ಞೆ ಮಾಡಿದ್ದಾರೆ. ಅದೇನಪ್ಪಾ ಅಂದ್ರೆ, ಸದ್ಯದಲ್ಲೇ ಅವರು ಉಪೇಂದ್ರ ಅವರ ಎಲ್ಲಾ ಚಿತ್ರಗಳನ್ನೂ ವೀಕ್ಷಿಸುತ್ತಾರಂತೆ. ಆ ಬಗ್ಗೆ ಟ್ವೀಟ್ ಕೂಡ ಮಾಡಿದ್ದಾರೆ. ''ಇವತ್ತಿಂದ ನಾನು ಮಾಡಲೇಬೇಕಾದ ಕೆಲಸ ಅಂದ್ರೆ ಉಪೇಂದ್ರ ಅವರ ಎಲ್ಲಾ ಚಿತ್ರಗಳನ್ನು ನೋಡಬೇಕು.''


ಗೊತ್ತಾಯ್ತಲ್ಲಾ 'ಉಪ್ಪಿಟ್ಟು' ಗಮ್ಮತ್ತು ಎಂಥದ್ದು ಅಂತ?

'ಉಪ್ಪಿ-2' ಗಮ್ಮತ್ತು ಎಂಥದ್ದು ಅನ್ನುವುದಕ್ಕೆ ಇದು ಸಣ್ಣ ಸ್ಯಾಂಪಲ್ ಅಷ್ಟೆ. ಉಪೇಂದ್ರ ಅವರ ಜನಪ್ರಿಯತೆಗೆ ಹಿಡಿದಿರುವ ಸಣ್ಣ ಕನ್ನಡಿ ಇದು. [ವಿಮರ್ಶೆ: "ನಾನು" "ನೀನು" ಆಗೋ ಜರ್ನಿನೇ uppi2]


English summary
Upendra directorial and starrer Kannada Movie 'Uppi-2' craze has reached all over the world. Upendra has fan following even in Pakistan. Meet the crazy fan of Upendra from Pakistan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada