ಹಿಂದು ಸಂಪ್ರದಾಯದಂತೆ ಇಂದು ನಡೆಯಲಿದೆ ಚಿರು-ಮೇಘನಾ ಕಲ್ಯಾಣ
Recommended Video

ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ವಿವಾಹ ಇಂದು ನಡೆಯಲಿದೆ. ಕಳೆದ ಭಾನುವಾರ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದ ಈ ಜೋಡಿ ಇವತ್ತು ಹಿಂದು ಸಂಪ್ರದಾಯದಂತೆ ಹಸೆಮಣೆ ಏರಲಿದ್ದಾರೆ. ಇಂದು (ಬುದವಾರ) ಬೆಳ್ಳಗೆ 10.30ರ ಶುಭ ಮುಹೂರ್ತದಲ್ಲಿ ಮೇಘನಾ ಕೊರಳಿಗೆ ಚಿರು ಮಾಂಗಲ್ಯ ಕಟ್ಟಲಿದ್ದಾರೆ.
ಇಂದಿನ ಮದುವೆ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದ ಮೂರನೇ ಗೇಟ್ ವೈಟ್ ಪೆಟಲ್ಸ್ ನಲ್ಲಿ ನೆರವೇರಲಿದೆ. ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಬರುವ ನಿರೀಕ್ಷೆ ಇದೆ. ಕಳೆದ ಭಾನುವಾರ ಸರಳವಾಗಿ ಚರ್ಚ್ ನಲ್ಲಿ ಮದುವೆ ನಡೆದಿದ್ದ ಕಾರಣ ಚಿತ್ರರಂಗದ ಮಿತ್ರರು ಮದುವೆಗೆ ಹಾಜರಾಗಲು ಸಾಧ್ಯ ಆಗಿರಲಿಲ್ಲ. ಅದೇ ಕಾರಣಕ್ಕೆ ಇಂದು ಅದ್ದೂರಿ ಕಾರ್ಯಕ್ರಮವನ್ನು ಆಯೋಚಿಸಲಾಗಿದೆ. ಅಂದಹಾಗೆ, ಮೇಘನಾ ಅವರ ತಂದೆ ನಟ ಸುಂದರ್ ರಾಜ್ ಹಿಂದು ಮತ್ತು ತಾಯಿ ನಟಿ ಪ್ರಮೀಳಾ ಜೋಷಾಯಿ ಕ್ರಿಶ್ಚಿಯನ್ ಆಗಿರುವ ಕಾರಣ ಪುತ್ರಿ ಮೇಘನಾ ರಾಜ್ ಎರಡು ಧರ್ಮದ ಸಂಪ್ರದಾಯದಂತೆ ಮದುವೆ ಆಗಿದ್ದಾರೆ.

ಇನ್ನು ಕಳೆದ ಒಂದು ವಾರದಿಂದ ಮೇಘನಾ ಮನೆಯಲ್ಲಿ ಮದುವೆಯ ಸಂಭ್ರಮ ಜೋರಾಗಿದೆ. ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರ, ಮೆಹಂದಿ, ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದೆ. ಇಂದು 10.30 ರಿಂದ 11 ಗಂಟೆವರೆಗೆ ಇರುವ ಮಿಥುನ ಲಗ್ನದಲ್ಲಿ ಮಾಂಗಲ್ಯಧಾರಣೆ ನೆರವೇರಲಿದೆ. ಇನ್ನು ಇದೇ ದಿನ ಸಂಜೆ 7 ಗಂಟೆಗೆ ಸಿನಿಮಾರಂಗದ ಸ್ನೇಹಿತರಿಗಾಗಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


Click it and Unblock the Notifications











