For Quick Alerts
  ALLOW NOTIFICATIONS  
  For Daily Alerts

  ನಟಿ ಮೇಘನಾಗೆ ನಡುರಾತ್ರಿಯಲ್ಲಿ ಸಿಕ್ಕ 'ರಿಯಲ್ ಹೀರೋ'

  |
  ಇವರೇ ಮೇಘನಾ ರಿಯಲ್ ಹೀರೋ..! | FILMIBEAT KANNADA

  ಬೆಂಗಳೂರಿನಲ್ಲಿ ಯಾರೂ ಯಾರನ್ನು ನಂಬುವುದಿಲ್ಲ. ಯಾವ ಸಮಯಕ್ಕೆ ಇಲ್ಲಿ ಏನು ಬೇಕಾದರೂ ಆಗಬಹುದು. ಪ್ರತಿ ದಿನ ಇಲ್ಲಿ ನಡೆಯುವ ಅನ್ಯಾಯ, ಆಕ್ರಮಗಳು ಅದೆಷ್ಟೋ.

  ಅದೇ ಕಾರಣಕ್ಕೆ ಪ್ರತಿಯೊಬ್ಬರ ಮನೆಯಲ್ಲಿ ಹೊರಗೆ ಹೋಗುವಾಗ ಹುಷಾರು ಅಂತ ಹೇಳಿ ಕಳಿಸುತ್ತಾರೆ. ಕಳ್ಳತನ, ಕೊಲೆ, ಸುಳ್ಳೆ ತುಂಬಿರುವ ಈ ಮಹಾನಗರದಲ್ಲಿ ಅಲ್ಲೋ ಇಲ್ಲೋ ಕೆಲ ಒಳ್ಳೆಯವರು ಇದ್ದಾರೆ. ಅಂತಹ ಒಬ್ಬ ರಿಯಲ್ ಹೀರೋ ಪರಿಚಯವನ್ನು ನಟಿ ಮೇಘನಾ ಗಾಂವ್ಕರ್ ಮಾಡಿದ್ದಾರೆ.

  ಡೇಟಿಂಗ್ ಆಪ್ ನಿಂದಾಗಿ ನಟಿ ಮೇಘನಾಗೆ ತೊಂದರೆ

  ನಡುರಾತ್ರಿಯಲ್ಲಿ ಮೇಘನಾ ತಮಗೆ ಸಹಾಯ ಮಾಡಿದ ವ್ಯಕ್ತಿಯನ್ನು ನೆನೆದಿದ್ದಾರೆ. ಜೊತೆಗೆ ಮೊದಲ ಬಾರಿಗೆ ಒಬ್ಬ ವ್ಯಕ್ತಿಯ ಜೊತೆಗೆ ಮೇಘನಾ ಅವರೇ ಫೋಟೋ ಕೇಳಿ ತೆಗೆದುಕೊಂಡಿದ್ದಾರೆ. ಮುಂದೆ ಓದಿ....

  ಕಾರ್ ಪಾರ್ಕಿಂಗ್ ನಲ್ಲಿ ನಡೆದ ಫಟನೆ

  ಕಾರ್ ಪಾರ್ಕಿಂಗ್ ನಲ್ಲಿ ನಡೆದ ಫಟನೆ

  ಒಂದು ರಾತ್ರಿ ನಟಿ ಮೇಘನಾ ಗಾಂವ್ಕರ್ ಸಿನಿಮಾಗೆ ಹೋಗಿದ್ದರು. ತಮ್ಮ ಕಾರ್ ಅನ್ನು ಪಾರ್ಕ್ ಮಾಡಿ ಪಕ್ಕದಲ್ಲಿ ಇದ್ದ ಸಿನಿಮಾ ಹಾಲ್ ನಲ್ಲಿ ಸಿನಿಮಾ ನೋಡುತ್ತಿದ್ದರು. ಅವರು ವಾಪಸ್ ಬರುವಾಗ ರಾತ್ರಿ ತುಂಬ ಲೇಟ್ ಆಗಿತ್ತು. ವಾಪಸ್ ಬಂದು ನೋಡಿದರೆ, ಕಾರ್ ಪಾರ್ಕಿಂಗ್ ನಲ್ಲಿ ಕೆಲಸ ಮಾಡುವ ಒಬ್ಬ ವ್ಯಕ್ತಿ ಅಲ್ಲೇ ನಿಂತಿದ್ದರು.

  ಕಾರ್ ಕಿಟಕಿಯನ್ನು ಸರಿಯಾಗಿ ಮುಚ್ಚಿರಲಿಲ್ಲ

  ಕಾರ್ ಕಿಟಕಿಯನ್ನು ಸರಿಯಾಗಿ ಮುಚ್ಚಿರಲಿಲ್ಲ

  ಸಿನಿಮಾದಿಂದ ವಾಪಸ್ ಬಂದರು ಪಾರ್ಕಿಂಗ್ ನಲ್ಲಿ ಆ ವ್ಯಕ್ತಿ ಅಲ್ಲಿಯೇ ನಿಂತಿದ್ದರು. ಪಾರ್ಕಿಂಗ್ ದುಡ್ಡನ್ನು ಈಗಾಗಲೇ ಕೊಟ್ಟಿದ್ದರೂ ಇವರು ಯಾಕೆ ಇಲ್ಲಿಯೇ ನಿಂತಿದ್ದಾರೆ ಎಂದು ಮೇಘನಾ ಮನಸ್ಸಿನಲ್ಲಿಯೇ ಪ್ರಶ್ನೆ ಕೇಳಿಕೊಂಡರು. ಆಮೇಲೆ ತಿಳಿಯಿತು ತಾನು ತನ್ನ ಕಾರ್ ಕಿಟಕಿಯನ್ನು ಸರಿಯಾಗಿ ಮುಚ್ಚದೆ ಸಿನಿಮಾ ಹೋಗಿರುವುದು.

  ರಕ್ಷಿತ್ - ಮೇಘನಾ ಜೋಡಿ : ಇದು ಸ್ನೇಹನಾ? ಪ್ರೀತಿನಾ?

  ಮೇಘನಾ ವಾಪಸ್ ಬರುವ ವರೆಗೆ ಅಲ್ಲಿಯೇ ಕಾದರು

  ಮೇಘನಾ ವಾಪಸ್ ಬರುವ ವರೆಗೆ ಅಲ್ಲಿಯೇ ಕಾದರು

  ಆತುರದಲ್ಲಿ ಸಿನಿಮಾಗೆ ಹೋಗುವಾಗ ಕಾರ್ ಕಿಟಕಿಯನ್ನು ಮುಚ್ಚದೆ ಮೇಘನಾ ಹೋಗಿದ್ದರು. ಇದನ್ನು ಯಾವುದು ಕಳ್ಳರು ಅನುಕೂಲ ಪಡೆದುಕೊಳ್ಳಬಾರದು ಎಂದು ಆ ವ್ಯಕ್ತಿ ಅಲ್ಲಿಯೇ ಕಾಯುತ್ತಿದ್ದರು. ಮೇಘಾನಾ ಸಿನಿಮಾ ನೋಡಿ ವಾಪಸ್ ಬರಲು ಹೆಚ್ಚು ಕಡಿಮೆ ಮೂರು ಗಂಟೆಗಳ ಸಮಯ ಆಗಿತ್ತು. ಆದರೂ ಆ ವ್ಯಕ್ತಿ ಅಲ್ಲಿಯೇ ಕಾದು ಮೇಘನಾ ಬಂದ ನಂತರ ಕಿಟಕಿ ವಿಷಯವನ್ನು ತಿಳಿಸಿದರು.

  ಮಾನವೀಯತೆಗೆ ದೊಡ್ಡ ಮೆಚ್ಚುಗೆ

  ಯಾರು ಅಂತ ತಿಳಿಯದೆ ಆ ಮಾಡಿದ ಸಹಾಯಕ್ಕೆ ಮೇಘನಾ ತುಂಬ ಖುಷಿಪಟ್ಟಿದ್ದಾರೆ. ಆ ವ್ಯಕ್ತಿಗೆ ಧನ್ಯವಾದ ತಿಳಿಸಿರುವ ಅವರು ಅವರ ಜೊತೆಗೆ ತಾವೇ ಕೇಳಿ ಫೋಟೋ ತೆಗೆದುಕೊಂಡಿದ್ದಾರೆ. ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ಒಬ್ಬ ವ್ಯಕ್ತಿಯ ಬಳಿ ಮೇಘನಾ ತಾವೇ ಫೋಟೋ ಕೇಳಿ ಪಡೆದುಕೊಂಡಿದ್ದಾರಂತೆ. ಜೊತೆಗೆ ಅವರ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳ ಬರೆದುಕೊಂಡಿದ್ದಾರೆ. ಆ ವ್ಯಕ್ತಿಯ ಮಾನವೀಯತೆ ಕಂಡು ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

  English summary
  Actress Meghana Gaonkar introduced the real life hero. Anna the unknown person who helped Meghana Gaonkar in car parking Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X