»   » ಚಿರಂಜೀವಿ ಸರ್ಜಾ-ಮೇಘನಾ ರಾಜ್ ಕಲ್ಯಾಣಕ್ಕೆ ಸಿದ್ಧತೆ

ಚಿರಂಜೀವಿ ಸರ್ಜಾ-ಮೇಘನಾ ರಾಜ್ ಕಲ್ಯಾಣಕ್ಕೆ ಸಿದ್ಧತೆ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಮದುವೆಯ ಶುಭ ಕಾರ್ಯಕ್ಕೆ ಮಹೂರ್ತ ಫಿಕ್ಸ್ ಆಗಿದೆ. ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನರಾಜ್ ಮದುವೆ ಸಮಾರಂಭಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದ್ದು ಈಗಾಗಲೇ ಎರಡು ಕುಟುಂಬದವರು ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಂಚುವಲ್ಲಿ ಬ್ಯುಸಿ ಆಗಿದ್ದಾರೆ.

ಅಕ್ಟೋಬರ್ 22 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮೇ 2 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಕೇರಳದ ಚಿತ್ರರಂಗದ ಗಣ್ಯರು ಹಾಗೂ ಸ್ನೇಹಿತರಿಗೆ ಮೇಘನರಾಜ್ ಮದುವೆ ಆಮಂತ್ರಣವನ್ನ ನೀಡಿದ್ದು ಕನ್ನಡ ಸಿನಿಮಾರಂಗದ ಸ್ನೇಹಿತರಿಗೆ ಪತ್ರಿಕೆ ನೀಡಲು ಆರಂಭಿಸಿದ್ದಾರೆ.

ಇಪ್ಪತ್ತೈದು ವರ್ಷಗಳ ಬಳಿಕ 'ಸರ್ಜಾ' ಕುಟುಂಬದಲ್ಲಿ ಇಂದು ಸಡಗರ-ಸಂಭ್ರಮ

meghna-raj-and-chiranjeevi-sarja-will-get-married-on-may-2

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಎರಡು ಕುಟುಂಬದವರು ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ವರ್ಷಗಳಿಂದ ಸೇವೆ ಸಲ್ಲಿಸಿರುವುದರ ಜೊತೆಯಲ್ಲಿ ಅಪಾರ ಸಂಖ್ಯೆಯ ಸ್ನೇಹಿತರು ಮತ್ತು ಅಭಿಮಾನಿಗಳನ್ನೂ ಹೊಂದಿದ್ದಾರೆ.

Meghna Raj and Chiranjeevi Sarja will get married on May 2

ಸದ್ಯ ಮೇ 2 ರಂದು ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎನ್ನುವ ಎಕ್ಸ್‌ಕ್ಲೂಸಿವ್ ಮಾಹಿತಿ ದೊರೆತಿದ್ದು ಮೇ 2 ರಂದು ಬೆಳ್ಳಿಗ್ಗೆ 10-30ಕ್ಕೆ ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ಅದ್ಧೂರಿ ಮದುವೆ ಸಮಾರಂಭ ಜರುಗಲಿದೆ. ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್ ಮತ್ತು ಮಾಲಿವುಡ್ ನ ಕಲಾವಿದರು ಮದುವೆಯಲ್ಲಿ ಭಾಗಿ ಆಗಲಿದ್ದಾರೆ.

English summary
Actress Meghna Raj and Chiranjeevi Sarja will get married on May 2. Sundar Raj and Sarja's family are busy in giving wedding invitation

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X