For Quick Alerts
  ALLOW NOTIFICATIONS  
  For Daily Alerts

  ಮದುವೆ ಮುಗಿದ ನಂತರವೂ ಮೇಘನಾ ಮನೆಯಲ್ಲಿ ಮುಗಿಯದ ಸಂಭ್ರಮ

  By Pavithra
  |
  ಮೇಘನಾ ರಾಜ್ ಮತ್ತೊಂದು ಸಂಭ್ರಮಕ್ಕೆ ಕಾರಣ ಏನು ? |Filmibeat Kannada

  ಚಂದನವನದ ಅಂದದ ಜೋಡಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮದುವೆ ಸಂಭ್ರಮ ಅದ್ಧೂರಿಯಾಗಿ ನಿನ್ನೆ ನಡೆದಿದೆ. ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಎರಡು ಕುಟುಂಬಗಳು ಒಟ್ಟಿಗೆ ಸೇರಿ ತಾರಾ ಜೋಡಿಯ ಮದುವೆಯನ್ನ ಮಾಡಿ ಮುಗಿಸಿದ್ದಾರೆ.

  ಇಷ್ಟು ವರ್ಷಗಳು ಸ್ನೇಹಿತರಾಗಿದ್ದ ಸುಂದರ್ ರಾಜ್ ಹಾಗೂ ಅರ್ಜುನ್ ಸರ್ಜಾ ಫ್ಯಾಮಿಲಿ ಸಂಬಂಧಿಕರಾಗಿದ್ದಾರೆ. ಕನ್ನಡ ಸಿನಿಮಾರಂಗದ ಹಿರಿಯರು, ಕಿರಿಯರು ಎಲ್ಲರೂ ಮದುವೆಯಲ್ಲಿ ಭಾಗಿ ಆಗುವ ಮೂಲಕ ಚಿರು-ಮೇಘ ಕಲ್ಯಾಣಕ್ಕೆ ಮತ್ತಷ್ಟು ಮೆರುಗು ತಂದಿದ್ದಾರೆ.

  ಚಿತ್ರಗಳು: ಚಿರು ಸರ್ಜಾ-ಮೇಘನಾ ಮದುವೆ ಕಣ್ತುಂಬಿಕೊಳ್ಳಿ ಚಿತ್ರಗಳು: ಚಿರು ಸರ್ಜಾ-ಮೇಘನಾ ಮದುವೆ ಕಣ್ತುಂಬಿಕೊಳ್ಳಿ

  ಕಳೆದ ಒಂದು ವಾರದಿಂದ ಮದುವೆ ಸಂಭ್ರಮದಲ್ಲಿದ್ದ ಸರ್ಜಾ ಹಾಗೂ ಮೇಘನಾ ರಾಜ್ ಕುಟುಂಬದಲ್ಲಿ ಮದುವೆ ಮುಗಿದರೂ ಸಂಭ್ರಮ ಮಾತ್ರ ಮುಗಿದಿಲ್ಲ. ನಿನ್ನೆ ವಿವಾಹ ಹಾಗೂ ಆರತಕ್ಷತೆ ಮುಗಿಸಿದ್ದು ಇಂದು ಚಿರು ಮನೆಯಲ್ಲಿ ಮೇಘನಾ ರಾಜ್ ಹುಟ್ಟುಹಬ್ಬದ ಸಂಭ್ರಮ ಶುರುವಾಗಿದೆ.

  ಚಿತ್ರ ಕೃಪೆ- ಪವನ್ ಶರ್ಮ

  ಗಂಡನ ಮನೆಯಲ್ಲಿ ಮೊದಲ ಹುಟ್ಟುಹಬ್ಬ

  ಗಂಡನ ಮನೆಯಲ್ಲಿ ಮೊದಲ ಹುಟ್ಟುಹಬ್ಬ

  ನಟಿ ಮೇಘನಾ ರಾಜ್ ತಮ್ಮ 28ನೇ ವರ್ಷದ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಮೇಘನಾ ತನ್ನ ಪತಿಯ ಮನೆಯಲ್ಲಿ ಮೊದಲ ಹುಟ್ಟುಹಬ್ಬವನ್ನ ಸೆಲಬ್ರೆಟ್ ಮಾಡಿಕೊಳ್ತಿದ್ದಾರೆ.

  ತುಂಬಾ ಸ್ಪೆಷಲ್ ಹುಟ್ಟುಹಬ್ಬ

  ತುಂಬಾ ಸ್ಪೆಷಲ್ ಹುಟ್ಟುಹಬ್ಬ

  ಮದುವೆ ನಂತರದ ದಿನವೇ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿರುವುದು ಮೇಘನಾ ಜೀವನದಲ್ಲಿ ಈ ಹುಟ್ಟುಹಬ್ಬ ತುಂಬಾ ವಿಶೇಷವಾಗಿ ಉಳಿದುಕೊಳ್ಳಲಿದೆ. ಪ್ರತಿ ವರ್ಷ ಅಭಿಮಾನಿಗಳ ಜೊತೆ ಬರ್ತಡೇಯನ್ನ ಆಚರಣೆ ಮಾಡಿಕೊಳ್ಳುತ್ತಿದ್ದರು ಮೇಘನಾ ಈ ಬಾರಿ ಸರ್ಜಾ ಕುಟುಂಬದ ಜೊತೆ ಸೆಲಬ್ರೆಟ್ ಮಾಡಲಿದ್ದಾರೆ.

  ಟ್ರೇಲರ್ ಬಿಡುಗಡೆ ಸಾಧ್ಯತೆ

  ಟ್ರೇಲರ್ ಬಿಡುಗಡೆ ಸಾಧ್ಯತೆ

  ಮೇಘನಾ ಹುಟ್ಟುಹಬ್ಬದ ವಿಶೇಷವಾಗಿ 'ಇರುವುದೆಲ್ಲವ ಬಿಟ್ಟು' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುವ ಸಾಧ್ಯತೆಗಳು ಇವೆ. ಇನ್ನು ಪ್ರತಿ ವರ್ಷದಂತೆ ಚಿತ್ರದ ಪೋಸ್ಟರ್ ಗಳು ರಿಲೀಸ್ ಆಗಲಿದೆ.

  ಚಿತ್ರೀಕರಣದಲ್ಲಿ ಭಾಗಿ

  ಚಿತ್ರೀಕರಣದಲ್ಲಿ ಭಾಗಿ

  ಮದುವೆ, ಬರ್ತಡೇ ಎಲ್ಲಾ ಸಂಭ್ರಮವನ್ನ ಮುಗಿಸಿ ಹತ್ತೇ ದಿನದಲ್ಲಿ ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅಭಿನಯದ ಸಿನಿಮಾಗಳು ಸೆಟ್ಟೇರಲಿದೆ. ಸದ್ಯ ಹುಟ್ಟುಹಬ್ಬ ಮುಗಿಸಿ ನವ ಜೋಡಿ ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ.

  ಚಿರಂಜೀವಿ ಸರ್ಜಾ ಮನೆಯಲ್ಲಿ ಮದುವೆ ಸಂಭ್ರಮಚಿರಂಜೀವಿ ಸರ್ಜಾ ಮನೆಯಲ್ಲಿ ಮದುವೆ ಸಂಭ್ರಮ

  English summary
  Kannada actress Meghna Raj celebrates her birthday today. Meghanaraj is celebrating his first birthday after marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X